ರಿಷಬ್ ಶೆಟ್ಟಿ ಜತೆ ಬೆಳವಡಿ ಮಲ್ಲಮ್ಮನಾಗಿ ಕಾಣಿಸಿಕೊಳ್ಳಲಿರುವ ನಟಿ ಭೂಮಿ ಪಡ್ನೇಕರ್
ರಿಷಬ್ ಶೆಟ್ಟಿ ನಟನೆಯ ‘ದಿ ಪ್ರೈಡ್ ಆಫ್ ಭಾರತ್; ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಸೇರಿಕೊಂಡಿದ್ದಾರೆ. 2027ರ ಜನವರಿ 21ರಂದು ಈ ಸಿನಿಮಾ ತೆರೆಕಾಣಲಿದ್ದು, ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳವಡಿ ಮಲ್ಲಮ್ಮನಾಗಿ ಭೂಮಿಬಾಲಿವುಡ್ ನಟಿ ಭೂಮಿ ಪಡ್ನೇಕರ್ ಈ

ರಿಷಬ್ ಶೆಟ್ಟಿ ನಟನೆಯ ‘ದಿ ಪ್ರೈಡ್ ಆಫ್ ಭಾರತ್; ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಸೇರಿಕೊಂಡಿದ್ದಾರೆ. 2027ರ ಜನವರಿ 21ರಂದು ಈ ಸಿನಿಮಾ ತೆರೆಕಾಣಲಿದ್ದು, ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳವಡಿ ಮಲ್ಲಮ್ಮನಾಗಿ ಭೂಮಿಬಾಲಿವುಡ್ ನಟಿ ಭೂಮಿ ಪಡ್ನೇಕರ್ ಈ ಸಿನಿಮಾದಲ್ಲಿ ಕರ್ನಾಟಕದ ವೀರ ರಾಣಿ ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ‘ಇಂಡಿಯಾ ಟಿವಿ’ ವರದಿ ತಿಳಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭೂಮಿ ಅವರು ರಿಷಬ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಭೂಮಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಭೂಮಿ, ‘ಈ ಸಿನಿಮಾದ ಭಾಗವಾಗಲು ಸಂತಸವಾಗುತ್ತಿದೆ. ಅದರಲ್ಲೂ ಕರ್ನಾಟಕದ ವೀರ ರಾಣಿ ಬೆಳವಡಿ ಮಲ್ಲಮ್ಮನನ್ನು ತೆರೆಮೇಲೆ ತರಲು ಹೆಮ್ಮೆಯಾಗುತ್ತಿದೆ. ನಾನು ಕಾಂತಾರ ಸಿನಿಮಾದ ದೊಡ್ಡ ಅಭಿಮಾನಿ. ಈ ಸಿನಿಮಾದಲ್ಲಿ ರಿಷಬ್ ಇರುವುದು ತಿಳಿಯುತ್ತಿದ್ದಂತೆ ಪಾತ್ರಕ್ಕೆ ಒಪ್ಪಿಕೊಂಡೆ’ ಎಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.ರಿಷಬ್ ಶೆಟ್ಟಿ ಫಸ್ಟ್ ಲುಕ್2024ರ ಡಿಸೆಂಬರ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ರಿಷಬ್ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿತ್ತು.‘ಭಾರತದ ಶ್ರೇಷ್ಠ ಯೋಧ, ರಾಜನ ಮಹಾಕಾವ್ಯದಂತಹ ಇತಿಹಾಸವನ್ನ, ಭಾರತದ ಹೆಮ್ಮೆಯನ್ನು – ನಿಮ್ಮ ಮುಂದೆ ಪ್ರಸ್ತುತಪಡಿಸುವುದು ನಮಗೆ ಗೌರವ ಮತ್ತು ಸೌಭಾಗ್ಯದ ವಿಷಯವಾಗಿದೆ’ ಎಂದು ಚಿತ್ರತಂಡ ಬರೆದುಕೊಂಡಿತ್ತು. View this post on Instagram A post shared by SANDEEP SINGH (@officialsandipssingh) ಈ ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ವಿವೇಕ್ ಓಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಭೂಮಿ ಪಡ್ನೇಕರ್ 2025ರಲ್ಲಿ ತೆರೆಕಂಡ ‘ಮೇರೆ ಹಸ್ಬೆಂಡ್ ಕಿ ಬಿವಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ 2026ರಲ್ಲಿ ಒಟಿಟಿಯಲ್ಲಿ ತೆರೆಕಂಡ ದಾಲ್ದಲ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.ಬೆಳವಡಿ ಮಲ್ಲಮ್ಮಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಸೈನ್ಯವನ್ನು ಕಟ್ಟಿದ ಗಟ್ಟಿಗಿತ್ತಿ ಬೆಳವಡಿ ಮಲ್ಲಮ್ಮ. ಉತ್ತರ ಕನ್ನಡದ ಶಿರಸಿ ಬಳಿಯ ಸೋದೆಯ ರಾಜ ಮಧುಲಿಂಗ ನಾಯಕ ಹಾಗೂ ರಾಣಿ ವೀರಮ್ಮ ಮಗಳಾಗಿದ್ದ ಮಲ್ಲಮ್ಮ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಸಂಸ್ಥಾನದ ರಾಜ ಈಶಪ್ರಭು ಅವರನ್ನು ವರಿಸಿದ್ದರು. ಮರಾಠಾ ಸಾಮ್ರಾಜ್ಯದ ವಿಸ್ತರಣೆಯ ಸಮಯದಲ್ಲಿ ಪತಿ ಮರಣ ಹೊಂದಿದಾಗ ಧೃತಿಗೆಡದ ಮಲ್ಲಮ್ಮ ಕುದುರೆಯನ್ನೇರಿ, ವೀರಗಚ್ಚೆ ಹಾಕಿ ಮರಾಠ ಪಡೆಗಳ ವಿರುದ್ಧ ಹೋರಾಡಿದ್ದರು.