ನಿಮ್ಮ ಒಂದು ಆಸೆಯನ್ನೂ ಪೂರೈಸಲಾಗಲಿಲ್ಲ; ಆತ್ಮಹತ್ಯೆಗೆ ಶರಣಾದ NEET ಆಕಾಂಕ್ಷಿ
ಅಹಿಲ್ಯಾನಗರ: ನೀಟ್ ಮರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದು ಮಹಾರಾಷ್ಟ್ರದ ಜಲಾಲ್ಪುರ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತ ವಿದ್ಯಾರ್ಥಿನಿಯನ್ನು ಅಂಕಿತಾ ಸುರೇಶ್ ಸಂಗ್ಲೆ ಎಂದು ಗುರುತಿಸಲಾಗಿದೆ. ನೀಟ್ ಮರುಪರೀಕ್ಷೆಯಲ್ಲಿ ಅಂಕಿತಾಗೆ 166 ಅಂಕಗಳು ಬಂದಿತ್ತು.ಈ ಬಗ್ಗೆ ಮಾತನಾಡಿರುವ ಅಂಕಿತಾ ತಂದೆ ಸುರೇಶ್, ‘ಅವಳು ಪರೀಕ್ಷೆಗೆ
ಅಹಿಲ್ಯಾನಗರ: ನೀಟ್ ಮರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಮನನೊಂದು ಮಹಾರಾಷ್ಟ್ರದ ಜಲಾಲ್ಪುರ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತ ವಿದ್ಯಾರ್ಥಿನಿಯನ್ನು ಅಂಕಿತಾ ಸುರೇಶ್ ಸಂಗ್ಲೆ ಎಂದು ಗುರುತಿಸಲಾಗಿದೆ. ನೀಟ್ ಮರುಪರೀಕ್ಷೆಯಲ್ಲಿ ಅಂಕಿತಾಗೆ 166 ಅಂಕಗಳು ಬಂದಿತ್ತು.ಈ ಬಗ್ಗೆ ಮಾತನಾಡಿರುವ ಅಂಕಿತಾ ತಂದೆ ಸುರೇಶ್, ‘ಅವಳು ಪರೀಕ್ಷೆಗೆ ಚೆನ್ನಾಗಿಯೆ ತಯಾರಿ ಮಾಡಿಕೊಂಡಿದ್ದಳು. ಮೊದಲ ಬಾರಿ ನಡೆದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಳು. ಪ್ರಶ್ನೆಪತ್ರಿಕೆ ಸೋರಿಕೆಯಾದ ಸುದ್ದಿ ಕೇಳಿ ಒತ್ತಡಕ್ಕೆ ಒಳಗಾಗಿದ್ದಳು. ಎರಡನೇ ಬಾರಿಯೂ ಪರೀಕ್ಷೆಯನ್ನು ಬರೆದಿದ್ದಳು. ಅಂಕ ಕಡಿಮೆ ಬಂದಿದ್ದಕ್ಕೆ ಬೇಸರಿಸಿಕೊಂಡಿದ್ದಳು. ಶನಿವಾರ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದಿದ್ದಾರೆ.‘ಅಂಕಿತಾ ಆತ್ಮಹತ್ಯೆಗೂ ಮುನ್ನ ಬರೆದ ಪತ್ರ ದೊರಕಿದೆ. ಅದರಲ್ಲಿ, ಅಪ್ಪಾ, ಅಮ್ಮಾ ನೀವು ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದೀರಿ, ಆದರೆ ನಿಮ್ಮ ಒಂದು ಆಸೆಯನ್ನೂ ನನ್ನಿಂದ ಪೂರೈಸಲಾಗಲಿಲ್ಲ. ಅಮ್ಮಾ, ನೀವು ಸ್ನೇಹಿತೆಯ ರೀತಿಯಲ್ಲಿ ಜತೆ ನಿಂತಿದ್ದೀರಿ. ಅಣ್ಣಾ, ನೀವು ಅಪ್ಪ, ಅಮ್ಮನಿಗಿಂತ ಹೆಚ್ಚು ಪ್ರೀತಿ ತೋರಿಸಿದ್ದೀರಿ, ಪ್ರೋತ್ಸಾಹಿಸಿದ್ದೀರಿ. ನನ್ನ ಆತ್ಮಹತ್ಯೆಗೆ ನೀವ್ಯಾರೂ ಜವಾಬ್ದಾರರಲ್ಲ. ನಾನು ನೀಟ್ ಪರೀಕ್ಷೆಗೆ ಓದುತ್ತಿದ್ದಾಗಲೂ ನೀವು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ಆದರೆ ನಿಮ್ಮ ಆಶಯಗಳನ್ನು ಈಡೇರಿಸಲು ಸಾಧ್ಯವಾಗದೆ ನಾನು ವಿಫಲನಾದೆ’ ಎಂದು ಮರಾಠಿಯಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷೆಯನ್ನು ರದ್ದಪಡಿಸಲಾಗಿತ್ತು. ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಈ ಎರಡೂ ಪರೀಕ್ಷೆಗೆ ಅಂಕಿತಾ ಹಾಜರಾಗಿದ್ದರು ಎಂದು ವರದಿಯಾಗಿದೆ. ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್–14416 ಅಥವಾ ಸಹಾಯ್– 080 25497777, 98864 44075