ಇ–20 ಪೆಟ್ರೋಲ್: ವಾಹನಗಳಿಗೆ ಹಾನಿಯಿಲ್ಲ; ಕೇಂದ್ರ ಸರ್ಕಾರ
ನವದೆಹಲಿ : ‘ಎಥೆನಾಲ್ ಮಿಶ್ರಿತ ಪೆಟ್ರೋಲ್(ಇ–20) ಬಳಸುತ್ತಿರುವ ವಾಹನಗಳ ಅನುಪಾತವನ್ನು ಸರ್ಕಾರವು ಪರಿಶೀಲಿಸಿಲ್ಲ; ವ್ಯಾಪಕ ಅಧ್ಯಯನಗಳು ಹಾಗೂ ಕ್ಷೇತ್ರ ಪ್ರಯೋಗದ ಅಡಿಯಲ್ಲಿ ನಿರ್ದಿಷ್ಟ ಮಾನದಂಡದ ಅನ್ವಯ ಇ–20 ಇಂಧನ ಬಳಸುವುದು ಸುರಕ್ಷಿತ ಎಂದು ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂಂದ್ರ ಪೆಟ

ನವದೆಹಲಿ : ‘ಎಥೆನಾಲ್ ಮಿಶ್ರಿತ ಪೆಟ್ರೋಲ್(ಇ–20) ಬಳಸುತ್ತಿರುವ ವಾಹನಗಳ ಅನುಪಾತವನ್ನು ಸರ್ಕಾರವು ಪರಿಶೀಲಿಸಿಲ್ಲ; ವ್ಯಾಪಕ ಅಧ್ಯಯನಗಳು ಹಾಗೂ ಕ್ಷೇತ್ರ ಪ್ರಯೋಗದ ಅಡಿಯಲ್ಲಿ ನಿರ್ದಿಷ್ಟ ಮಾನದಂಡದ ಅನ್ವಯ ಇ–20 ಇಂಧನ ಬಳಸುವುದು ಸುರಕ್ಷಿತ ಎಂದು ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ, ‘ವಾಹನಗಳ ಅನುಪಾತವನ್ನು ಪರಿಶೀಲಿಸಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ತಿಳಿಸಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ (ಎಬಿಪಿ) ಅನ್ನು ಹಂತ ಹಂತವಾಗಿ ವೈಜ್ಞಾನಿಕ ಮಾದರಿಯಲ್ಲಿ ನೀತಿ ಆಯೋಗ, ವಾಹನಗಳ ಉತ್ಪಾದಕರು, ತೈಲ ಮಾರುಕಟ್ಟೆ ಕಂಪನಿಗಳು, ಅಟೋಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ಹಾಗೂ ಸೊಸೈಟಿ ಆಫ್ ಆಟೊಮೊಬೈಲ್ ಮ್ಯಾನ್ಯುಫ್ಲಾಕ್ಚರ್ಸ್ ಹಾಗೂ ಭಾರತೀಯ ಪೆಟ್ರೋಲಿಯಂ ಸಂಸ್ಥೆ(ಐಐಪಿ) ಹಾಗೂ ಇತರೆ ತಾಂತ್ರಿಕ ಸಂಸ್ಥೆಗಳ ನೆರವಿನೊಂದಿಗೆ ಜಾರಿಗೆ ತರಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.‘ಕ್ಷೇತ್ರ ಪ್ರಯೋಗದ ಅಡಿಯಲ್ಲಿ ಎಂಜಿನ್ನ ಬಾಳಿಕೆ, ವಾಹನದ ಚಾಲನೆ, ತುಕ್ಕು ನಿರೋಧಕತೆ, ಇಂಧನ ದಕ್ಷತೆ ಹಾಗೂ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವನ್ನು ಪರಿಶೀಲಿಸಲಾಗಿದ್ದು, ಎಲ್ಲ ಅಧ್ಯಯನಗಳು ಕೂಡ ಇ–20 ಪೆಟ್ರೋಲ್ ಸುರಕ್ಷಿತ ಎಂಬುದನ್ನು ದೃಢಪಡಿಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.