ಸಿಯಾಟಲ್ | ಆಹಾರ ಮೇಳದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, ಹಲವರಿಗೆ ಗಾಯ
ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತಿದ್ದ ಪ್ರಸಿದ್ಧ 'ಬೈಟ್ ಆಫ್ ಸಿಯಾಟಲ್' ಆಹಾರ ಮೇಳದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಪ್ರಸಿದ್ಧ 'ಸ್ಪೇಸ್ ನೀಡಲ್' ಸಮೀಪದಲ್ಲೇ ನಡೆದ ಈ ಘಟನೆಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ 'ಎನ್ಡಿಟಿವಿ' ವರದಿ ಮಾಡಿದೆ.ಸಂಜೆ ಸುಮಾರು 6ರ

ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತಿದ್ದ ಪ್ರಸಿದ್ಧ 'ಬೈಟ್ ಆಫ್ ಸಿಯಾಟಲ್' ಆಹಾರ ಮೇಳದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಪ್ರಸಿದ್ಧ 'ಸ್ಪೇಸ್ ನೀಡಲ್' ಸಮೀಪದಲ್ಲೇ ನಡೆದ ಈ ಘಟನೆಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ 'ಎನ್ಡಿಟಿವಿ' ವರದಿ ಮಾಡಿದೆ.ಸಂಜೆ ಸುಮಾರು 6ರ ವೇಳೆಗೆ ದಾಳಿ ನಡೆದಿದೆ. ಸಾವಿರಾರು ಜನ ಹಾಗೂ ನೂರಾರು ಮಳಿಗೆಗಳಿಂದ ಕಿಕ್ಕಿರಿದು ತುಂಬಿದ್ದ ಮೇಳದಲ್ಲಿ ದಿಢೀರನೆ 7 ರಿಂದ 8 ಬಾರಿಗೆ ಗುಂಡಿನ ಸದ್ದು ಕೇಳಿಸಿತು. ತಕ್ಷಣವೇ ಅಲ್ಲಿದ್ದ ಜನ ಪ್ರಾಣಭಯದಿಂದ ಎಲ್ಲೆಂದರಲ್ಲಿ ಓಡಲು ಶುರುಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.BREAKING: New video shows the moment when people fleeing the Seattle Center in Washington state. Reports of multiple gunshot victims in the area.Livestream: Hawaiian Honey Cones. pic.twitter.com/8evoOeIQYK— Lucas Sanders (@LucasSa56947288) July 27, 2026 ದಾಳಿಯ ನಂತರ ಮೇಳದ ಜಾಗದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಹಾಗೂ ಹಳದಿ ಬಟ್ಟೆಯಿಂದ ಮುಚ್ಚಲಾಗಿದ್ದ ಮೃತದೇಹ ಕಂಡು ಜನ ಆತಂಕಕ್ಕೊಳಗಾದರು. ಗಾಯಾಳುಗಳನ್ನು ತಕ್ಷಣವೇ ಹಾರ್ಬರ್ವ್ಯೂ ಮೆಡಿಕಲ್ ಸೆಂಟರ್ಗೆ ಕರೆದೊಯ್ಯಲಾಗಿದೆ ಎಂದು 'ಸಿಯಾಟಲ್ ಟೈಮ್ಸ್' ವರದಿ ಮಾಡಿದೆ. pic.twitter.com/8Sbw0o9rBs— P (@PhanPhan1000) July 27, 2026 'ಸಿಯಾಟಲ್ ಸೆಂಟರ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ, ಸಾರ್ವಜನಿಕರು ಈ ಪ್ರದೇಶದಿಂದ ದೂರವಿರಿ' ಎಂದು ಸಿಯಾಟಲ್ ಪೊಲೀಸರು ಎಕ್ಸ್ನಲ್ಲಿ ಮನವಿ ಮಾಡಿದ್ದಾರೆ. ಆದರೆ ದಾಳಿಕೋರರನ್ನು ಬಂಧಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.Police are investigating a shooting. Multiple shooting victims. Shots fired at the Seattle Center. More information to come. Please avoid the area.— Seattle Police Department (@SeattlePD) July 27, 2026 1982ರಿಂದ ಪ್ರತಿವರ್ಷ ನಡೆಯುವ ಈ ಪ್ರಸಿದ್ಧ ಆಹಾರ ಮೇಳಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಆದರೆ, ಸಂಭ್ರಮದಿಂದ ನಡೆಯುತ್ತಿದ್ದ ಈ ಮೇಳ ಕ್ಷಣಮಾತ್ರದಲ್ಲಿ ಶೋಕಸಾಗರವಾಗಿ ಮಾರ್ಪಟ್ಟಿದೆ.