ಗುಡಗೇರಿ ಗ್ರಾಮದಲ್ಲಿ ಸಪ್ತಭಜನೆ ಸಮಾರೋಪ: ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ
ಅಳವಂಡಿ: ಸಮೀಪದ ಗುಡಗೇರಿ ಗ್ರಾಮದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ನಾಡಿನ ರೈತರ ಮತ್ತು ಜನತೆಯ ಒಳಿತಿಗಾಗಿ ಏಳು ದಿನಗಳ ಕಾಲ ಸಪ್ತಭಜನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಂಡಿದ್ದು ಸೋಮವಾರ ಸಮಾರೋಪಗೊಳ್ಳಲಿದೆ.ಸಪ್ತಭಜನೆ ಮೂಲಕ ನಾಡಿನ ರೈತರಿಗೆ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ನಾಡಿನ ಜನರಿಗೆ ಸುಖ, ಶಾಂತಿ ಮತ್ತು ಸಮೃದ್ಧಿ ಕರುಣಿಸಲಿ ಎಂದು ಭಗವಂತನಲ್ಲಿ ಪ್

ಅಳವಂಡಿ: ಸಮೀಪದ ಗುಡಗೇರಿ ಗ್ರಾಮದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ನಾಡಿನ ರೈತರ ಮತ್ತು ಜನತೆಯ ಒಳಿತಿಗಾಗಿ ಏಳು ದಿನಗಳ ಕಾಲ ಸಪ್ತಭಜನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಂಡಿದ್ದು ಸೋಮವಾರ ಸಮಾರೋಪಗೊಳ್ಳಲಿದೆ.ಸಪ್ತಭಜನೆ ಮೂಲಕ ನಾಡಿನ ರೈತರಿಗೆ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ನಾಡಿನ ಜನರಿಗೆ ಸುಖ, ಶಾಂತಿ ಮತ್ತು ಸಮೃದ್ಧಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಏಳು ದಿನಗಳವರೆಗೆ ನಡೆದ ಸಪ್ತ ಭಜನಾ ಕಾರ್ಯಕ್ರಮವು ಸೋಮವಾರ ಬೆಳಿಗ್ಗೆ ಅಳವಂಡಿ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಸಮಾರೋಪಗೊಳ್ಳಲಿದೆ ಎಂದು ಭಕ್ತರು ತಿಳಿಸಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260727-35-301194162
Read the complete story at Prajavani