ನೀಟ್ ಪ್ರತಿಭಟನೆಯಲ್ಲಿ 989 ಕ್ರಿಮಿನಲ್ಗಳು – ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸ್ ವರದಿ
– ಜಂತರ್ ಮಂತರ್ನಲ್ಲಿ ಕೊಲೆ, ಅತ್ಯಾಚಾರ ಆರೋಪಿಗಳ ಉಪಸ್ಥಿತಿ – 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪರೀಕ್ಷಾ ಸೋರಿಕೆ (NEET Exam Leak Protest) ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ಮತ್ತು ಕಿಡ್ನ್ಯಾಪ್ ನಂತಹ ಗಂಭೀರ ಅಪರಾಧ

– ಜಂತರ್ ಮಂತರ್ನಲ್ಲಿ ಕೊಲೆ, ಅತ್ಯಾಚಾರ ಆರೋಪಿಗಳ ಉಪಸ್ಥಿತಿ – 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪರೀಕ್ಷಾ ಸೋರಿಕೆ (NEET Exam Leak Protest) ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ಮತ್ತು ಕಿಡ್ನ್ಯಾಪ್ ನಂತಹ ಗಂಭೀರ ಅಪರಾಧ ಹಿನ್ನೆಲೆಯುಳ್ಳ ನೂರಾರು ವ್ಯಕ್ತಿಗಳು ಭಾಗಿಯಾಗಿದ್ದರು ಎಂಬ ಆಘಾತಕಾರಿ ಅಂಶ ದೆಹಲಿ ಪೊಲೀಸರ (Delhi Police) ಆಂತರಿಕ ತನಿಖಾ ವರದಿಯಿಂದ ತಿಳಿದುಬಂದಿದೆ. ಪ್ರತಿಭಟನಾ ಸ್ಥಳದ ಸುತ್ತಮುತ್ತಲ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು, ವೈರಲ್ ವೀಡಿಯೋಗಳು ಹಾಗೂ ಅಲ್ಲಿದ್ದ 2,873 ವ್ಯಕ್ತಿಗಳ ಗುರುತನ್ನು ಕೂಲಂಕುಷವಾಗಿ ತನಿಖೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಪರಿಶೀಲನೆಗೊಳಪಟ್ಟವರಲ್ಲಿ ಬರೋಬ್ಬರಿ 989 ಜನರು ಈ ಹಿಂದೆ ವಿವಿಧ ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಧ ಹಿನ್ನೆಲೆಯುಳ್ಳವರು ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು – ಸಿಜೆಪಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಯಾವ ಪ್ರಕರಣದವರು ಎಷ್ಟು ಜನ? ಕೊಲೆ ಪ್ರಕರಣಗಳು – 101, ಕೊಲೆ ಯತ್ನ – 62, ದರೋಡೆ/ಕಳ್ಳತನ – 284 , ಅತ್ಯಾಚಾರ ಪ್ರಕರಣಗಳು – 61, ಪೋಕ್ಸೋ ಕಾಯ್ದೆ – 6, ಲೈಂಗಿಕ ಕಿರುಕುಳ/ದೌರ್ಜನ್ಯ – 25, ಆರ್ಮ್ಸ್ ಆಕ್ಟ್ (ಅಕ್ರಮ ಶಸ್ತ್ರಾಸ್ತ್ರ) – 229, ಸರಗಳ್ಳತನ – 135 , ಅಪಹರಣ- 19 , ಎನ್ಡಿಪಿಎಸ್ (ಮಾದಕ ದ್ರವ್ಯ ಕಾಯ್ದೆ) ಪ್ರಕರಣ ಹೊಂದಿದ್ದ 67 ಜನರು ಭಾಗಿಯಾಗಿದ್ದರು. ವರದಿಯ ಪ್ರಕಾರ ಅಲ್ಲಿ ಉಪಸ್ಥಿತರಿದ್ದವರಲ್ಲಿ ಬಹುತೇಕರು ನಿರಂತರ ಅಪರಾಧಗಳಲ್ಲಿ ಭಾಗಿಯಾಗುವವರು ಆಗಿದ್ದರು. ಕೊಲೆ ಪ್ರಕರಣದ 101 ಆರೋಪಿಗಳಲ್ಲಿ 42 ಜನರು ಎರಡಕ್ಕಿಂತ ಹೆಚ್ಚು ಅಪರಾಧಗಳಲ್ಲಿ ಮತ್ತು 12 ಜನರು 10ಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದರೋಡೆ ಆರೋಪಿಗಳ ಪೈಕಿ 284 ಜನರಲ್ಲಿ 155 ಜನರು ಕನಿಷ್ಠ ಎರಡು ಪ್ರಕರಣಗಳಲ್ಲಿ ಮತ್ತು 31 ಜನರ ಮೇಲೆ 10ಕ್ಕೂ ಹೆಚ್ಚು ಕೇಸು ದಾಖಲಾಗಿತ್ತು ಎಂದು ತಿಳಿಸಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್ಟೇಬಲ್ – ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು ಜುಲೈ 20 ರಂದು ನಡೆದ ಲಾಠಿಚಾರ್ಜ್ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ನಾವು ಅತ್ಯಂತ ಸಂಯಮದಿಂದಲೇ ಪರಿಸ್ಥಿತಿ ನಿಭಾಯಿಸಿದ್ದೇವೆ. ಜಂತರ್ ಮಂತರ್ನಲ್ಲಿ ಧರಣಿ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆ ಹೈ-ಸೆಕ್ಯೂರಿಟಿ ವಲಯವಾದ ಸಂಸತ್ತಿನತ್ತ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದರು. ಪದೇ ಪದೇ ಎಚ್ಚರಿಕೆ ನೀಡಿದರೂ ಬ್ಯಾರಿಕೇಡ್ಗಳನ್ನು ಮುರಿದು ಮುಂದೆ ಬಂದಿದ್ದರು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಲು ಎಐ, ಫೇಶಿಯಲ್ ರೆಕಗ್ನಿಷನ್ ಮೊರೆ ಹೋದ ಪೊಲೀಸರು ಪ್ರತಿಭಟನಾಕಾರರು ಪೊಲೀಸ್ ವಾಹನಗಳನ್ನು ಜಖಂಗೊಳಿಸಿ, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ ಸುತ್ತುವರಿದಾಗ ಬೇರೆ ದಾರಿಯಿಲ್ಲದೆ ಬ್ಯಾರಿಕೇಡ್ ಮುರಿದವರ ವಿರುದ್ಧ ಮಾತ್ರ ನಿಯಂತ್ರಿತ ಲಾಠಿಚಾರ್ಜ್ ಮತ್ತು ಅಶ್ರುವಾಯು ಬಳಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.