ಸಿ.ಟಿ.ರವಿ ಬೆಂಕಿ ಹಾಕೋದು ಬಿಡಬೇಕು: ಬೇಳೂರು ಗೋಪಾಲಕೃಷ್ಣ
ಬೆಂಗಳೂರು: ಮುಸ್ಲಿಮರ ಬಗ್ಗೆ ಮಾತಾಡಿ ಸಿ.ಟಿ ರವಿ (C.T Ravi) ಅವರು ಬೆಂಕಿ ಹಾಕೋದನ್ನು ಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalkrishna) ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸಿ.ಟಿ. ರವಿ ಮೇಲೆ FIR ಹಾಕಿದ ಪ್ರಕರಣಕ್ಕೆ ವಿಧಾನಸೌಧದಲ್ಲಿ (Vidhana Soudha) ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಅವರೇ ಹಿಂದುತ್ವದ ಭಾವನೆ ಎಷ್ಟು

ಬೆಂಗಳೂರು: ಮುಸ್ಲಿಮರ ಬಗ್ಗೆ ಮಾತಾಡಿ ಸಿ.ಟಿ ರವಿ (C.T Ravi) ಅವರು ಬೆಂಕಿ ಹಾಕೋದನ್ನು ಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalkrishna) ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸಿ.ಟಿ. ರವಿ ಮೇಲೆ FIR ಹಾಕಿದ ಪ್ರಕರಣಕ್ಕೆ ವಿಧಾನಸೌಧದಲ್ಲಿ (Vidhana Soudha) ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಅವರೇ ಹಿಂದುತ್ವದ ಭಾವನೆ ಎಷ್ಟು ದಿನ ನಡೆಯುತ್ತೆ. ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ. ತತ್ವಜ್ಞಾನಿ ತರಹ ಮಾತಾಡ್ತಾರೆ. ಮಾತಾಡೋದು ಮಾತಾಡಿ ಅಮೇಲೆ ನಾನು ಹಾಗೆ ಮಾತಾಡಿಲ್ಲ ಅಂತಾರೆ. ರಾಜ್ಯದ ಮಂತ್ರಿ ಆಗಿದ್ದವರು, ಹೀಗೆ ಮಾತಾಡೋದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಮನೆ ಮುಂದೆ ಭಾರೀ ಹೈಡ್ರಾಮಾ – ಇನ್ಸ್ಪೆಕ್ಟರ್ ಅಂಟಿಸಿದ ನೋಟಿಸ್ ಕಿತ್ತೆಸೆದ ಬೆಂಬಲಿಗರು ಒಂದು ಸಮುದಾಯದ ಒಲೈಕೆಗೆ ಇನ್ನೊಂದು ಸಮುದಾಯವನ್ನು ಬೈಯೋದು ಸರಿಯಲ್ಲ. ಮುಸ್ಲಿಮರಲ್ಲಿ ವಿದ್ಯಾವಂತರು ಇಲ್ವಾ?ಅನೇಕ ಮುಸ್ಲಿಮರ IAS ಅಧಿಕಾರಿಗಳು ಆಗಿಲ್ವಾ? ಸಿ.ಟಿ ರವಿ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಸಿ.ಟಿ ರವಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು. ಸಿ.ಟಿ ರವಿ ಹೇಳೋದೆಲ್ಲ ಸುಳ್ಳು. ಬಿಹಾರದ ವಿಡಿಯೋ ಬಗ್ಗೆಯೂ ಸುಳ್ಳು ಹೇಳಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು. ಹೀಗೆ ಬೆಂಕಿ ಹಾಕೋದು ನಿಲ್ಲಿಸಬೇಕು. ಮುಸ್ಲಿಂ ಬಗ್ಗೆ ಮಾತಾಡಿದ್ರೆ ಸಾಕು. ಏನೋ ಸಿಕ್ಕ ಹಾಗೆ ಇವರಿಗೆ. ಹೀಗೆ ಮಾತಾಡೋದು ಬಿಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನನಗೆ ಒಂದು ವಾರ ಕಾಲಾವಕಾಶ ಬೇಕು – ನೋಟಿಸ್ಗೆ ಉತ್ತರಿಸಲು ಸಮಯ ಕೇಳಿದ ಸಿ.ಟಿ ರವಿ