ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ
ಕಲಬುರಗಿ: ನಗರದ ಸೇಡಂ ರಸ್ತೆಯ ಸುಷ್ಮಾ ವೈನ್ ಶಾಪ್ ಸಮೀಪ ಭಾನುವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ನಗರದ ಆದರ್ಶ ನಗರದ ನಿವಾಸಿ ರವಿಚಂದ್ರ ತಿಪ್ಪಯ್ಯ ಗುತ್ತೇದಾರ (47) ಕೊಲೆಯಾದವರು. ರವಿಚಂದ್ರ ಅವರು ಕಲಬುರಗಿಯ ಹುಮನಾಬಾದ್ ರಿಂಗ್ ರಸ್ತೆಯ ರಘೋಜಿ ಫೈನಾನ್ಸ್ ಎದುರು ಟೀ ಪಾಯಿಂಟ್ (ಚಹಾದಂಗಡಿ) ನಡೆಸುತ್ತಿದ್ದರು. ನಿತ

ಕಲಬುರಗಿ: ನಗರದ ಸೇಡಂ ರಸ್ತೆಯ ಸುಷ್ಮಾ ವೈನ್ ಶಾಪ್ ಸಮೀಪ ಭಾನುವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ನಗರದ ಆದರ್ಶ ನಗರದ ನಿವಾಸಿ ರವಿಚಂದ್ರ ತಿಪ್ಪಯ್ಯ ಗುತ್ತೇದಾರ (47) ಕೊಲೆಯಾದವರು. ರವಿಚಂದ್ರ ಅವರು ಕಲಬುರಗಿಯ ಹುಮನಾಬಾದ್ ರಿಂಗ್ ರಸ್ತೆಯ ರಘೋಜಿ ಫೈನಾನ್ಸ್ ಎದುರು ಟೀ ಪಾಯಿಂಟ್ (ಚಹಾದಂಗಡಿ) ನಡೆಸುತ್ತಿದ್ದರು. ನಿತ್ಯ ವಹಿವಾಟು ಮುಗಿಸಿ ಬಂದು ಮದ್ಯ ಕುಡಿಯಲು ಹೋಗುತ್ತಿದ್ದರು. ಎಂದಿನಂತೆ ಮದ್ಯ ಕುಡಿಯಲು ಹೋದಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಬೆನ್ನಿನ ಮೇಲೆ ಐದು ಹಾಗೂ ಎದೆ ಹಾಗೂ ಹೊಟ್ಟೆ ಮೇಲೆ ಏಳು ಸೇರಿದಂತೆ ಒಟ್ಟು 12 ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.ರವಿಚಂದ್ರ ಅವರ ಕುಟುಂಬ ಆದರ್ಶ ನಗರಕ್ಕೂ ಮುನ್ನ ರೋಜಾ ಪ್ರದೇಶದಲ್ಲಿ ನೆಲೆಸಿದ್ದರು. 2020ರಲ್ಲಿ ನಡೆದ ಅಬ್ದುಲ್ ಇನ್ಸಾದ್ ಕೊಲೆಗೆ ಸಂಬಂಧಿಸಿದಂತೆ ರವಿಚಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.'2020ರಲ್ಲಿ ಕೊಲೆಯಾದ ಅಬ್ದುಲ್ ಇನ್ಸಾದ್ ಕಡೆಯವರು ಹಳೆಯ ದ್ವೇಷ, ವೈಷಮ್ಯದಿಂದ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು' ಎಂದು ಕೊಲೆಯಾದ ರವಿಚಂದ್ರ ಅವರ ಪತ್ನಿ ಜಯಶ್ರೀ ಗುತ್ತೇದಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.