ಅಯ್ಯರ್ ಗಟ್ಟಿ ಮನೋಬಲ: ಲಕ್ಷ್ಮಣ್ ಶ್ಲಾಘನೆ
ಹರಾರೆ: ವಿ.ವಿ.ಎಸ್. ಲಕ್ಷ್ಮಣ್ ಅವರ ಮಾರ್ಗದರ್ಶನ ಸ್ಫೂರ್ತಿಯುತವಾಗಿದೆ ಎಂದು ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಇದೇ ವೇಳೆ ಅಯ್ಯರ್ ಅವರ ಗಟ್ಟಿ ಮನೋಬಲ, ಅಚಲ ವಿಶ್ವಾಸಕ್ಕೆ ಲಕ್ಷ್ಮಣ್ ಮೆಚ್ಚುಗೆ ಸೂಚಿಸಿದ್ದಾರೆ.ಲಕ್ಷ್ಮಣ್ ಮಾರ್ಗದರ್ಶನದ ಭಾರತ ತಂಡವು, ಭಾನುವಾರ ಮುಕ್ತಾಯಗೊಂಡ ಜಿಂಬಾಬ್ವೆ ಎದುರಿನ ಟಿ20 ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್

ಹರಾರೆ: ವಿ.ವಿ.ಎಸ್. ಲಕ್ಷ್ಮಣ್ ಅವರ ಮಾರ್ಗದರ್ಶನ ಸ್ಫೂರ್ತಿಯುತವಾಗಿದೆ ಎಂದು ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಇದೇ ವೇಳೆ ಅಯ್ಯರ್ ಅವರ ಗಟ್ಟಿ ಮನೋಬಲ, ಅಚಲ ವಿಶ್ವಾಸಕ್ಕೆ ಲಕ್ಷ್ಮಣ್ ಮೆಚ್ಚುಗೆ ಸೂಚಿಸಿದ್ದಾರೆ.ಲಕ್ಷ್ಮಣ್ ಮಾರ್ಗದರ್ಶನದ ಭಾರತ ತಂಡವು, ಭಾನುವಾರ ಮುಕ್ತಾಯಗೊಂಡ ಜಿಂಬಾಬ್ವೆ ಎದುರಿನ ಟಿ20 ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್ತು. ಅನುಭವಿಗಳಾದ ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರ ಗೈರಿನಲ್ಲಿ ಯುವಮುಖಗಳನ್ನು ಒಳಗೊಂಡ ತಂಡವು, ಆತಿಥೇಯ ತಂಡವನ್ನು ಮೂರೂ ಪಂದ್ಯಗಳಲ್ಲಿ ಸುಲಭವಾಗಿ ಸೋಲಿಸಿತ್ತು.ಬಿಸಿಸಿಐ ಹಂಚಿಕೊಂಡಿರುವ ಡ್ರೆಸಿಂಗ್ ರೂಮ್ ವಿಡಿಯೊದಲ್ಲಿ ಲಕ್ಷ್ಮಣ್ ಅವರು ಅಯ್ಯರ್ ಅವರು ದೃಢ ಮನೋಬಲವನ್ನು ಹೊಗಳಿದ್ದಾರೆ. ‘ನಾಯಕತ್ವ ವಹಿಸಿದ ಮೇಲೆ ಕಠಿಣ ಪರಿಸ್ಥಿತಿ ಎದುರಿಸಿದ್ದ ಅಯ್ಯರ್ ಪುಟಿದೆದ್ದ ರೀತಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮನ್ನು ಸೇರಿಕೊಂಡ ಮೇಲೆ ಮೊದಲ ಪಂದ್ಯದಿಂದಲೇ ಅವರು ಆಶಾವಾದಿಯಾಗಿದ್ದರು’ ಎಂದು ಲಕ್ಷ್ಮಣ್ ಹೇಳಿದ್ದಾರೆ. ಅಯ್ಯರ್ ಅವರು ನಾಯಕನಾದ ಬಳಿಕ ಐರ್ಲೆಂಡ್ ಎದುರು 0–2 ರಿಂದ, ಇಂಗ್ಲೆಂಡ್ ವಿರುದ್ಧದ 0–4 ರಿಂದ ಭಾರತ ಸೋತಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು ಅವರು ಮಾತನಾಡಿದ್ದಾರೆ.‘ಇದು ಹೊಸ ಆಟಗಾರರ ಗುಂಪಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿದ್ದ ನಾಲ್ಕು– ಐದು ಮಂದಿ ಮಾತ್ರ ಈ ಪ್ರವಾಸಕ್ಕೆ ನಮ್ಮನ್ನು ಸೇರಿಕೊಂಡಿದ್ದರು. ಆದರೆ ಅವರು (ಅಯ್ಯರ್) ಅಚಲ ವಿಶ್ವಾಸ ಹೊಂದಿದ್ದರು. ಗೆಲುವಿನ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಅವರು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಿದರು’ ಎಂದರು.ಗೌತಮ್ ಗಂಭೀರ್ ವಿರಾಮ ಪಡೆದಿದ್ದ ಕಾರಣ ಅವರ ಸ್ಥಾನಕ್ಕೆ ಜಿಂಬಾಬ್ವೆ ಸರಣಿಗೆ ಲಕ್ಷ್ಮಣ್ ಹಂಗಾಮಿ ಮುಖ್ಯ ಕೋಚ್ ಆಗಿದ್ದರು.‘ನಾವು ಹೆಚ್ಚು ತಪ್ಪುಗಳನ್ನೆಸಗಲಿಲ್ಲ. ಸರಣಿಯುದ್ದಕ್ಕೂ ಕೆಲವು ಕ್ಯಾಚುಗಳನ್ನು ನೆಲಕ್ಕೆಹಾಕಿದ್ದು ಬಿಟ್ಟರೆ,ನೆರವು ಸಿಬ್ಬಂದಿ ಸೇರಿ ತಂಡದ ಪ್ರತಿಯೊಬ್ಬರು ಯಶಸ್ಸಿಗೆ ಉತ್ತಮ ಕಾಣಿಕೆ ನೀಡಿದರು’ ಎಂದರು. ‘ನಮ್ಮಲ್ಲಿ ಪ್ರೇರಣೆ ಮತ್ತು ಸ್ಫೂರ್ತಿ ತುಂಬಿದ್ದಕ್ಕೆ ಧನ್ಯವಾದಗಳು ವಿವಿಎಸ್ ಸರ್’ ಎಂದು ಅಯ್ಯರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಮದ್ರದ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಈ ಸರಣಿಗೆ ಹಂಗಾಮಿ ಕೋಚ್ ಆಗಿದ್ದರು.ವೈಭವ್ಗೆ ಮೆಚ್ಚುಗೆ:ಹದಿಹರೆಯದ ಬೀಸಾಟಗಾರ ವೈಭವ್ ಸೂರ್ಯವಂಶಿ ಅವರ ಪ್ರಬುದ್ಧತೆಯನ್ನೂ ಲಕ್ಷ್ಮಣ್ ಮೆಚ್ಚಿದ್ದಾರೆ. ಅವರು ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಹೊಡೆದು ಭಾರತ ತಂಡದ ದೊಡ್ಡಮೊತ್ತಕ್ಕೆ ಬುನಾದಿ ಹಾಕಿದ್ದರು.