ಪರೀಕ್ಷಾ ಸುಧಾರಣೆಗೆ ಕಾರ್ಯಪಡೆ: ನಿಲೇಕಣಿ ನೇತೃತ್ವಕ್ಕೆ ವಿರೋಧ
ಬೆಂಗಳೂರು: ಪರೀಕ್ಷಾ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಖಂಡಿಸಿದೆ.ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಬೃಹತ್ ಹೋರಾಟದ ಫಲವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ

ಬೆಂಗಳೂರು: ಪರೀಕ್ಷಾ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಖಂಡಿಸಿದೆ.ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಬೃಹತ್ ಹೋರಾಟದ ಫಲವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಐತಿಹಾಸಿಕ ವಿಜಯವನ್ನು ದೇಶದಾದ್ಯಂತ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ರಾಜೀನಾಮೆಯ ಮರುದಿನವೇ ಕೇಂದ್ರ ಸರ್ಕಾರವು ಸುಧಾರಣೆಯ ಹೆಸರಿನಲ್ಲಿ ಮತ್ತೊಂದು ತಂತ್ರವನ್ನು ಹೆಣೆದಿದೆ. ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲು ರಚಿಸಿರುವ ಕಾರ್ಯಪಡೆಗೆ ನಂದನ್ ನಿಲೇಕಣಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕೇಂದ್ರ ಸರ್ಕಾರವು ವಿದ್ಯಾರ್ಥಿ ಸಮುದಾಯಕ್ಕೆ ಮತ್ತೆ ದ್ರೋಹ ಬಗೆದಿದೆ ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.ಸುಧಾರಣಾ ಸಮಿತಿಯ ನೇಮಕ, ಸಣ್ಣ ಆಡಳಿತಾತ್ಮಕ ಬದಲಾವಣೆಗಳು ಇದಕ್ಕೆ ಪರಿಹಾರವಲ್ಲ. ಹಿಂದೆ ರಚಿಸಲಾಗಿದ್ದ ಸಮಿತಿಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ‘ಎನ್ಟಿಎ’ ಅನ್ನು ರದ್ದುಗೊಳಿಸಬೇಕು. ಒಂದು ವೇಳೆ ಸಮಿತಿ ನೇಮಕ ಮಾಡಲೇಬೇಕು ಎಂದಿದ್ದರೆ ಕಾರ್ಪೊರೇಟರ್ ಕುಳಗಳ ಬದಲು ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರು ಮತ್ತು ಬೋಧನಾ ತಜ್ಞರನ್ನು ನೇಮಿಸಬಹುದಿತ್ತು ಎಂದಿದ್ದಾರೆ. ನೀಟ್ ಅನ್ನು ಇನ್ನು ಮುಂದೆ ‘ಪೆನ್ ಮತ್ತು ಪೇಪರ್’ ಮಾದರಿಯಿಂದ ‘ಆನ್ಲೈನ್’ ಮಾದರಿಗೆ ಬದಲಾಯಿಸಲಾಗುವುದು ಎಂದು ಕೇಂದ್ರವು ತಿಳಿಸಿದೆ. ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಅಥವಾ ಡಿಜಿಟಲ್ ಕಾವಲು ಮಾದರಿಗಳು ಡಿಜಿಟಲ್ ತಾರತಮ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಿರವಾದ ಇಂಟರ್ನೆಟ್ ಸಂಪರ್ಕ, ನಿರಂತರ ವಿದ್ಯುತ್ ಸರಬರಾಜು ಅಥವಾ ಡಿಜಿಟಲ್ ಸಾಕ್ಷರತೆ ಇಲ್ಲದ ಅಭ್ಯರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಹಿಂದೆ ಉಳಿಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.