ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಕಲಬುರಗಿ: ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹಳೆ ಆರ್ಟಿಓ ರಸ್ತೆಯ ವೈನ್ ಶಾಪ್ ಮುಂಭಾಗ ನಡೆದಿದೆ. ಕಲಬುರಗಿಯ (Kalaburagi) ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಬರ್ಬರವಾಗಿ ಕೊಲೆಯಾದ ವ್ಯಕ್ತಿ. ಟೀ ಪಾಯಿಂಟ್ ಮತ್ತು ಸಭೆ ಸಮಾರಂಭಗಳಲ್ಲಿ ರವಿ ಅಡುಗೆ ಮಾಡಿಕೊಂಡಿದ್ದ. ಇದನ್ನೂ ಓದಿ: ನನಗಾಗಿ ಎಲ್ಲವನ್ನ

ಕಲಬುರಗಿ: ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹಳೆ ಆರ್ಟಿಓ ರಸ್ತೆಯ ವೈನ್ ಶಾಪ್ ಮುಂಭಾಗ ನಡೆದಿದೆ. ಕಲಬುರಗಿಯ (Kalaburagi) ಆದರ್ಶ ನಗರದ ನಿವಾಸಿ ರವಿ ಗುತ್ತೆದಾರ್ (46) ಬರ್ಬರವಾಗಿ ಕೊಲೆಯಾದ ವ್ಯಕ್ತಿ. ಟೀ ಪಾಯಿಂಟ್ ಮತ್ತು ಸಭೆ ಸಮಾರಂಭಗಳಲ್ಲಿ ರವಿ ಅಡುಗೆ ಮಾಡಿಕೊಂಡಿದ್ದ. ಇದನ್ನೂ ಓದಿ: ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀರಿ, ಆದ್ರೆ ನಾನು ಫೇಲಾದೆ: ಡೆತ್ನೋಟ್ ಬರೆದಿಟ್ಟು ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ ನಿನ್ನೆ ರಾತ್ರಿ ಎಣ್ಣೆ ಹಾಕೋದಕ್ಕೆ ಅಂತಾ ವೈನ್ ಶಾಪ್ಗೆ ರವಿ ಬಂದಿದ್ದ. ಎಣ್ಣೆ ಹಾಕಿ ವಾಪಸ್ ಬಂದು ಗಾಡಿಯ ಮೇಲೆ ಕೂರುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 2021 ರ ರೋಜಾ ಪೊಲೀಸ್ ಠಾಣೆಯ ಕೊಲೆ ಕೇಸ್ನಲ್ಲಿ ರವಿ ಗುತ್ತೆದಾರ್ ಆರೋಪಿಯಾಗಿದ್ದ. ಹಳೆಯ ಕೊಲೆ ಪ್ರಕರಣದ ವೈಷಮ್ಯಕ್ಕೆ ರವಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು | ಎಲ್ಲೆಂದರಲ್ಲಿ ಕಸ ಹಾಕಿದ್ರೆ ಬರೀ ದಂಡ ಅಲ್ಲ, ಬೀಳುತ್ತೆ ಕೇಸ್ – ನಾಲ್ವರ ವಿರುದ್ಧ ಎಫ್ಐಆರ್