ಪತ್ನಿ ಅಗಲಿಕೆ ನೋವಲ್ಲಿ ರಾತ್ರಿಯಿಡೀ ಕಣ್ಣೀರಿಟ್ಟು ಪತಿ ಸಾವು
ಹಾವೇರಿ: 45 ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದ ದಂಪತಿ (Couple) ಸಾವಿನಲ್ಲಿಯೂ ಒಂದಾಗಿರುವ ಘಟನೆ ಜಿಲ್ಲೆಯ ಸವಣೂರು (Savanur) ತಾಲೂಕಿನ ಹೆಸರೂರು (Hesarur) ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಾಂತಮ್ಮ ರಾತ್ರಿ ಸುಮಾರು 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಕ್ಕೊಳಗಾದ 70 ವರ್ಷದ ಜುಂಜಪ್ಪ ಬಾರ್ಕಿ ಹೆಂಡತಿ ಇಲ್ಲದೆ

ಹಾವೇರಿ: 45 ವರ್ಷಗಳ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದ ದಂಪತಿ (Couple) ಸಾವಿನಲ್ಲಿಯೂ ಒಂದಾಗಿರುವ ಘಟನೆ ಜಿಲ್ಲೆಯ ಸವಣೂರು (Savanur) ತಾಲೂಕಿನ ಹೆಸರೂರು (Hesarur) ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಾಂತಮ್ಮ ರಾತ್ರಿ ಸುಮಾರು 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಕ್ಕೊಳಗಾದ 70 ವರ್ಷದ ಜುಂಜಪ್ಪ ಬಾರ್ಕಿ ಹೆಂಡತಿ ಇಲ್ಲದೆ ಹೇಗೆ ಬದುಕಲಿ ಎಂದು ರಾತ್ರಿ ಪೂರ್ತಿ ಕಣ್ಣೀರು ಹಾಕುತ್ತ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಪತ್ನಿಯ ಸಾವಿನ ನೋವನ್ನು ತಡೆಯಲಾರದೆ ಇಂದು ಬೆಳಗಿನ ಜಾವ ಜುಂಜಪ್ಪ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಂಡ್ಯ | ಹೆದ್ದಾರಿಗೆ ಉರುಳಿ ಬಿದ್ದ ಬಾಯ್ಲರ್ ಟ್ಯಾಂಕ್; ತಪ್ಪಿದ ಅನಾಹುತ ಪತ್ನಿಯ ನಿಧನದ ಕೆಲವೇ ಗಂಟೆಗಳ ಅಂತರದಲ್ಲಿ ಪತಿಯೂ ನಿಧನರಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಸುಮಾರು 45 ವರ್ಷಗಳಿಂದ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದ್ದ ಈ ದಂಪತಿಯ ಸಾವಿನ ಸುದ್ದಿ, ಜೀವನದಲ್ಲಿ ಮಾತ್ರವಲ್ಲ, ಸಾವಿನಲ್ಲಿಯೂ ಒಂದಾದ ಈ ಜೋಡಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಸಾವಿನಲ್ಲಿಯೂ ಒಂದಾದ ಈ ದಂಪತಿಯ ಪ್ರೀತಿ ಮತ್ತು ಬಾಂಧವ್ಯ ಹೆಸರೂರು ಗ್ರಾಮಸ್ಥರ ಮನಸ್ಸನ್ನು ಭಾವುಕಗೊಳಿಸಿದ್ದು, ಅಂತಿಮ ಯಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: 5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್ ಖಂಡ್ರೆ