ಪ್ರತಿಭಟನಾಕಾರರ ವಿರುದ್ಧದ ಕೇಸ್ ಹಿಂಪಡೆದ ಬಿಹಾರ
ಪಾಟ್ನಾ: ನೀಟ್ ಪರೀಕ್ಷಾ (NEET Exam Leak) ಅಕ್ರಮ ಸೇರಿ ಸರಣಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿ ಪ್ರತಿಭಟನಾಕಾರರ(Protest) ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಬಿಹಾರ ಸರ್ಕಾರ (Bihar Government) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಬಿಹಾರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ (IPS) ಕ್ಷತ್ರನೀಲ್ ಸಿಂಗ್ ಅವರು ಅಧಿಕೃತ ಮಾ

ಪಾಟ್ನಾ: ನೀಟ್ ಪರೀಕ್ಷಾ (NEET Exam Leak) ಅಕ್ರಮ ಸೇರಿ ಸರಣಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿ ಪ್ರತಿಭಟನಾಕಾರರ(Protest) ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಬಿಹಾರ ಸರ್ಕಾರ (Bihar Government) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಬಿಹಾರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ (IPS) ಕ್ಷತ್ರನೀಲ್ ಸಿಂಗ್ ಅವರು ಅಧಿಕೃತ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಹೇಳಿಕೆಯಲ್ಲಿ ಏನಿದೆ? ಜುಲೈ 26 ಸಂಜೆ 6 ಗಂಟೆಗಿಂತ ಮೊದಲು ರಾಜ್ಯಾದ್ಯಂತ ನಡೆದ ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವ್ಯಕ್ತಿಯ ವಿರುದ್ಧ ಸರ್ಕಾರ ಯಾವುದೇ ಶಿಕ್ಷಾರ್ಹ ಅಥವಾ ಪ್ರತೀಕಾರದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇದನ್ನೂ ಓದಿ: ನೀಟ್ ಪ್ರತಿಭಟನೆಯಲ್ಲಿ 2,873 ಕ್ರಿಮಿನಲ್ಗಳು – ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸ್ ವರದಿ ದಾಖಲಾಗಿರುವ ಎಲ್ಲಾ ಪ್ರಥಮ ವರ್ತಮಾನ ವರದಿಗಳು (FIR), ಕ್ರಿಮಿನಲ್ ದೂರುಗಳು ಹಾಗೂ ಶೋಕಾಸ್ (ಕಾರಣ ಕೇಳಿ) ನೋಟಿಸ್ಗಳನ್ನು ಹಿಂಪಡೆಯಲು ತಕ್ಷಣವೇ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ದಾಖಲಾದ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ವಶಕ್ಕೆ ಪಡೆಯಲಾದ ಎಲ್ಲಾ ವ್ಯಕ್ತಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು. ಈ ನಿರ್ದಿಷ್ಟ ಅವಧಿಗಿಂತ ಮೊದಲು ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಭವಿಷ್ಯದಲ್ಲೂ ಅವರ ವಿರುದ್ಧ ನೇರವಾಗಲಿ ಅಥವಾ ಪರೋಕ್ಷವಾಗಲಿ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಬಿಹಾರ ಸರ್ಕಾರ ಸ್ಪಷ್ಟಪಡಿಸಿದೆ.