ಹಂಪಿ ಕನ್ನಡ ವಿಶ್ವವಿದ್ಯಾಲಯ: ₹44 ಕೋಟಿ ಅನುದಾನ ದುರ್ಬಳಕೆ
ಹೊಸಪೇಟೆ (ವಿಜಯನಗರ): ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿದೆ. ಈ ನಡುವೆ ಕೆಲವು ವರ್ಷಗಳಲ್ಲಿ ಬೃಹತ್ ಪ್ರಮಾಣದ ಆರ್ಥಿಕ ಅಕ್ರಮ, ಶಾಸನಬದ್ಧ ನಿಯಮಗಳ ಉಲ್ಲಂಘನೆ ಮತ್ತು ₹44.90 ಕೋಟಿ ಸರ್ಕಾರದ ನಿಧಿಯ ದುರ್ಬಳಕೆ ನಡೆದಿರುವುದು ಮಹಾಲೇಖಪಾಲರ (ಸಿಎಜಿ) ಕರಡು ತನಿಖಾ ವರದಿಯಿಂದ ಬಹಿರಂಗವಾಗಿದೆ.2016–17ರಿಂದ 2023–24ರ ನಡುವೆ ಕುಲಪತ

ಹೊಸಪೇಟೆ (ವಿಜಯನಗರ): ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿದೆ. ಈ ನಡುವೆ ಕೆಲವು ವರ್ಷಗಳಲ್ಲಿ ಬೃಹತ್ ಪ್ರಮಾಣದ ಆರ್ಥಿಕ ಅಕ್ರಮ, ಶಾಸನಬದ್ಧ ನಿಯಮಗಳ ಉಲ್ಲಂಘನೆ ಮತ್ತು ₹44.90 ಕೋಟಿ ಸರ್ಕಾರದ ನಿಧಿಯ ದುರ್ಬಳಕೆ ನಡೆದಿರುವುದು ಮಹಾಲೇಖಪಾಲರ (ಸಿಎಜಿ) ಕರಡು ತನಿಖಾ ವರದಿಯಿಂದ ಬಹಿರಂಗವಾಗಿದೆ.2016–17ರಿಂದ 2023–24ರ ನಡುವೆ ಕುಲಪತಿಗಳಾದ ಪ್ರೊ.ಮಲ್ಲಿಕಾ ಘಂಟಿ ಮತ್ತು ಪ್ರೊ.ಸ.ಚಿ. ರಮೇಶ್ ಅವರ ಅಧಿಕಾರ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ವಿವಿಧ ಮೂಲಗಳಿಂದ ದೊರೆತ ₹111.92 ಕೋಟಿ ಅನುದಾನದಲ್ಲಿ ₹44.89 ಕೋಟಿ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಪ್ರಯುಕ್ತ ₹26.91 ಕೋಟಿ ವಿಶೇಷ ಅನುದಾನ ನೀಡಲಾಗಿತ್ತು. ಅದರಲ್ಲಿ ₹19.85 ಕೋಟಿಯನ್ನು ಸರ್ಕಾರದ ಅನುಮತಿ ಇಲ್ಲದೆ ಅನಗತ್ಯ ವೆಚ್ಚಗಳಿಗೆ ಬಳಸಲಾಗಿದೆ. ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅಭಿವೃದ್ಧಿ ನಿಧಿಯಿಂದ ₹2.51 ಕೋಟಿ ಮತ್ತು ಶಾಸನಬದ್ಧ ವೇತನ ಅನುದಾನದಿಂದ ₹4.54 ಕೋಟಿಯನ್ನು ನಿಯಮಬಾಹಿರವಾಗಿ ಬೇರೆಡೆಗೆ ವರ್ಗಾಯಿಸಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕೆಕೆಆರ್ಡಿಬಿ ಮೂಲಸೌಕರ್ಯ ನಿಧಿಯನ್ನು ಸಿಬ್ಬಂದಿ ವೇತನಕ್ಕೆ ಬಳಸಲಾಗಿದೆ. ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ವಿಭಜಿಸಲಾಗಿದೆ. ಹಳೆಯ ಕುರ್ಚಿಗಳನ್ನು ತೋರಿಸಿ ಬೋಗಸ್ ಬಿಲ್ ಸೃಷ್ಟಿಸಲಾಗಿದೆ. ಕುಲಪತಿಗಳ ವೈಯಕ್ತಿಕ ಶಾಪಿಂಗ್ ಮತ್ತು ಪ್ರವಾಸ ವೆಚ್ಚಗಳಿಗೂ ಸಾರ್ವಜನಿಕ ನಿಧಿಯನ್ನು ಬಳಸಲಾಗಿದೆ ಎಂಬುದನ್ನು ವರದಿ ತಿಳಿಸಿದೆ.ಆರ್ಥಿಕ ಸ್ವಾವಲಂಬನೆಗೆ ವಿಶ್ವವಿದ್ಯಾಲಯ ಯಾವುದೇ ಕ್ರಮ ಕೈಗೊಂಡಿಲ್ಲ. ಯುಜಿಸಿ ಮಾರ್ಗಸೂಚಿಯಂತೆ ಆಂತರಿಕ ಆದಾಯ ಹೆಚ್ಚಳ, ಸಿಎಸ್ಆರ್ ನಿಧಿ ಸಂಗ್ರಹ, ಹಳೆಯ ವಿದ್ಯಾರ್ಥಿಗಳ ತೊಡಗುವಿಕೆ, ಖಾಸಗಿ–ಸಾರ್ವಜನಿಕ ಸಹಭಾಗಿತ್ವ ಹಾಗೂ ಸಂಶೋಧನಾ ಯೋಜನೆ ರೂಪಿಸುವಲ್ಲಿ ವಿಶ್ವವಿದ್ಯಾಲಯ ಸಂಪೂರ್ಣ ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕರ್ನಾಟಕ ಪ್ರಧಾನ ಮಹಾಲೇಖಪಾಲರ (ಪಿಎಜಿ ಆಡಿಟ್–1) ತನಿಖಾ ವರದಿ ಸಿಎಜಿಗೆ ಏಪ್ರಿಲ್ 24ರಂದು ಸಲ್ಲಿಕೆಯಾಗಿದ್ದು, ಉನ್ನತ ಶಿಕ್ಷಣ ಇಲಾಖೆ ಈ ವರದಿ ಆಧರಿಸಿ ವಿಶ್ವವಿದ್ಯಾಲಯದಿಂದ ವಿವರಣೆ ಕೇಳಿದೆ. ಮೇ 22ರಂದು ವಿಶ್ವವಿದ್ಯಾಲಯ ಉತ್ತರ ನೀಡಿದೆ. ಆದರೆ, ಹಣಕಾಸು ಅವ್ಯವಹಾರಕ್ಕೆ ನಿರ್ದಿಷ್ಟ ಉತ್ತರ ನೀಡದ ವಿಶ್ವವಿದ್ಯಾಲಯ, ಇನ್ನು ಮುಂದೆ ಇಂತಹ ಅಕ್ರಮ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದೆ. ಹೀಗಾಗಿ ಬಹುತೇಕ ಇದೇ ಸಿಎಜಿ ವರದಿಯೇ ಅಂತಿಮವಾಗುವ ಸಾಧ್ಯತೆ ಇದೆ.ಇಬ್ಬರು ಕುಲಪತಿಗಳ ಅವಧಿಯ ಅಕ್ರಮ ಅನುದಾನ ಇಲ್ಲ ಎಂದು ಸದಾ ಗೊಣಗಾಟ ₹12.91 ಲಕ್ಷ ಕೆಕೆಆರ್ಡಿಬಿ ಬಡ್ಡಿ ಹಣದ ದುರ್ಬಳಕೆಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ- ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳ ಆರ್ಥಿಕ ವ್ಯವಹಾರಗಳ ಕುರಿತು ವಿಶೇಷ ತಪಾಸಣೆ ನಡೆದಿದೆ. ಸದ್ಯ ಕರಡು ವರದಿ ಸಲ್ಲಿಕೆಯಾಗಿದೆ. ಅಂತಿಮ ವರದಿ ಬಂದ ಬಳಿಕವಷ್ಟೇ ಇದರ ಬಗ್ಗೆ ವಿವರ ನೀಡಲು ಸಾಧ್ಯ ನಿಯಮಬಾಹಿರ ನೇಮಕಾತಿ ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆ ಹೆಚ್ಚುವರಿ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಂಡಿದ್ದರಿಂದ ಅತಿಥಿ ಉಪನ್ಯಾಸಕರು ಮತ್ತು ಸಿಬ್ಬಂದಿಗೆ 22 ತಿಂಗಳಿನಿಂದ ವೇತನ ನೀಡಲಾಗಿಲ್ಲ. ವೇತನ ಆಯೋಗಗಳ ಹಿಂಬಾಕಿ ಸಹಿತ ₹9 ಕೋಟಿ ಬಾಕಿ ಹೊಣೆಗಾರಿಕೆ ಸೃಷ್ಟಿಸಲಾಗಿದೆ. ₹7.82 ಕೋಟಿ ಮೊತ್ತದ ಕಾಮಗಾರಿಗಳು ಅಪೂರ್ಣವಾಗಿವೆ. ₹4.46 ಕೋಟಿ ವೆಚ್ಚದ 'ಚೋಮನಕೆರೆ' ಟ್ಯಾಂಕ್ ಕಾಮಗಾರಿ ಅಪೂರ್ಣಗೊಂಡಿದೆ. ಪ್ರಸಾರಾಂಗ ಕಟ್ಟಡಕ್ಕೆ ₹1.76 ಕೋಟಿ ಪಾವತಿಸಿದರೂ ಕಟ್ಟಡ ಬಳಕೆಗೆ ಬಂದಿಲ್ಲ. ಸ್ಟುಡಿಯೊ ಮತ್ತು ಐಟಿ ಉಪಕರಣಗಳ ಖರೀದಿಯಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ತಪ್ಪು ಲೆಕ್ಕ ತೋರಿಸಿ ಕೋಟ್ಯಂತರ ರೂಪಾಯಿ ಪೋಲು ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.