ಕಾವೇರಿ ಆಘಾತ: ತಮಿಳುನಾಡಿಗೆ ದಿನಕ್ಕೆ 3,500 ಕ್ಯುಸೆಕ್ ನೀರು ಹರಿಸಲು ಶಿಫಾರಸು
ನವದೆಹಲಿ/ಬೆಂಗಳೂರು: ಕರ್ನಾಟಕದ ಮುಕ್ಕಾಲು ಭಾಗದಲ್ಲಿ ಬರದ ಛಾಯೆ ಆವರಿಸಿರುವ ಹೊತ್ತಿನಲ್ಲೇ, ತಮಿಳುನಾಡಿಗೆ ಕರ್ನಾಟಕವು ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಮಂಗಳವಾರ ಶಿಫಾರಸು ಮಾಡಿದೆ. ಸಮಿತಿಯ ಈ ತೀರ್ಮಾನದಿಂದಾಗಿ ರಾಜ್ಯ ಸರ್ಕಾರಕ್ಕೆ ಆಘಾತ ಉಂಟಾಗಿದೆ. ‘ಮುಂಗಾರು ಆರಂಭವಾಗಿ

ನವದೆಹಲಿ/ಬೆಂಗಳೂರು: ಕರ್ನಾಟಕದ ಮುಕ್ಕಾಲು ಭಾಗದಲ್ಲಿ ಬರದ ಛಾಯೆ ಆವರಿಸಿರುವ ಹೊತ್ತಿನಲ್ಲೇ, ತಮಿಳುನಾಡಿಗೆ ಕರ್ನಾಟಕವು ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಮಂಗಳವಾರ ಶಿಫಾರಸು ಮಾಡಿದೆ. ಸಮಿತಿಯ ಈ ತೀರ್ಮಾನದಿಂದಾಗಿ ರಾಜ್ಯ ಸರ್ಕಾರಕ್ಕೆ ಆಘಾತ ಉಂಟಾಗಿದೆ. ‘ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳು ಅರ್ಧದಷ್ಟೂ ಭರ್ತಿಯಾಗಿಲ್ಲ. ಇಂತಹ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಸರ್ಕಾರ, ಸಮಿತಿಯ ಶಿಫಾರಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದೆ. ಪ್ರಾಧಿಕಾರದ ಸಭೆ ಶೀಘ್ರ ನಡೆಯಲಿದೆ. ಒಂದುವೇಳೆ, ಸಮಿತಿಯ ಶಿಫಾರಸನ್ನು ಪ್ರಾಧಿಕಾರ ಎತ್ತಿಹಿಡಿದರೆ ಕರ್ನಾಟಕ ಸರ್ಕಾರ ನೀರು ಬಿಡಲೇಬೇಕಾಗುತ್ತದೆ.ಸಮಿತಿಯ ಶಿಫಾರಸಿನ ಪ್ರಕಾರ, ಇಂದಿನಿಂದ (29ರಿಂದ) 15 ದಿನ ತಮಿಳುನಾಡಿಗೆ ನೀರು ಹರಿಸಬೇಕಿದೆ. ಬಿಳಿಗುಂಡ್ಲುವಿನಲ್ಲಿ 3,500 ಕ್ಯುಸೆಕ್ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಮಿತಿ ಸೂಚಿಸಿದೆ. ಅಂದರೆ, ಬಿಳಿಗುಂಡ್ಲು ಮೂಲಕ 15 ದಿನಗಳಲ್ಲಿ 4.6 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದುಹೋಗಬೇಕು.ಆದರೆ, ನಾಲ್ಕು ಜಲಾಶಯಗಳಿಂದ ಪ್ರತಿದಿನ 6,000 ಕ್ಯುಸೆಕ್ನಿಂದ 7,000 ಕ್ಯುಸೆಕ್ ನೀರನ್ನು ಹರಿಸಬೇಕಾಗುತ್ತದೆ. 15 ದಿನಗಳ ಅವಧಿಯಲ್ಲಿ ರಾಜ್ಯದ ಜಲಾಶಯಗಳ ನೀರು 5.5 ಟಿಎಂಸಿ ಅಡಿಯಷ್ಟು ಕಡಿಮೆಯಾಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿಲ್ಲ. ತಮಿಳುನಾಡಿಗೆ ನೀರು ಹರಿಸಿ ಜಲಾಶಯಗಳ ನೀರನ್ನು ಬರಿದು ಮಾಡಿಕೊಂಡರೆ ಬೆಂಗಳೂರು, ಮಂಡ್ಯ, ಮಳವಳ್ಳಿ ಮತ್ತಿತರ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಹೇಗೆ ಎಂಬುದು ರಾಜ್ಯ ಸರ್ಕಾರದ ಆತಂಕ. ಕೆಆರ್ಎಸ್ನಲ್ಲಿ ಶೇ 33ರಷ್ಟು ಮಾತ್ರ ನೀರಿದೆ. ಉಳಿದ ಮೂರು ಜಲಾಶಯಗಳ ನೀರಿನ ಸಂಗ್ರಹ ಸ್ಪಲ್ಪ ಮಟ್ಟಿಗೆ ಪರವಾಗಿಲ್ಲ. ಕೆಆರ್ಎಸ್ನಲ್ಲಿ ಇರುವ 17 ಟಿಎಂಸಿ ಅಡಿ ನೀರಿನಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ, ಬಳಕೆಗೆ ಸಿಗುವುದು ಎಂಟು ಟಿಎಂಸಿ ಅಡಿ ಮಾತ್ರ. ನಾಲ್ಕು ಜಲಾಶಯಗಳಲ್ಲಿ ಕಳೆದ ವರ್ಷ ಇದೇ ದಿನ 109 ಟಿಎಂಸಿ ಅಡಿಯಷ್ಟು ನೀರಿತ್ತು. ಈ ವರ್ಷ 63 ಟಿಎಂಸಿ ಅಡಿ ಇದೆ. ಈ ಜಲಾಶಯಗಳಿಗೆ ಒಳಹರಿವು 12,892 ಕ್ಯುಸೆಕ್ ಇದ್ದರೆ, ಹೊರಹರಿವು 2,045 ಟಿಎಂಸಿ ಅಡಿ ಇದೆ. ಸಮಿತಿಯ ಅಧ್ಯಕ್ಷ ವಿನಿತ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೆರಿಯ ಅಧಿಕಾರಿಗಳು ಭಾಗಿಯಾದರು. ಮಳೆ ಪ್ರಮಾಣ, ಜಲಾಶಯಗಳಲ್ಲಿನ ನೀರಿನ ಪ್ರಮಾಣದ ಪರಾಮರ್ಶೆ ನಡೆಸಿದ ಸಮಿತಿಯು ನೀರು ಬಿಡುಗಡೆಗೆ ಶಿಫಾರಸು ಮಾಡಿತು.ಅರೆಬೆತ್ತಲೆ ಪ್ರತಿಭಟನೆ, ಉರುಳುಸೇವೆಮಂಡ್ಯ: ತಮಿಳುನಾಡಿಗೆ ಮುಂದಿನ 15 ದಿನ, ನಿತ್ಯ 3,500 ಕ್ಯುಸೆಕ್ ನೀರು (ಒಟ್ಟು 4 ಟಿಎಂಸಿ ಅಡಿ) ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸು ವಿರೋಧಿಸಿ ವಿವಿಧ ರೈತಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಅರೆಬೆತ್ತಲೆ ಪ್ರತಿಭಟನೆ ಹಾಗೂ ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಹೆಜ್ಜೆ ಏನು?ಸಿಡಬ್ಲ್ಯೂಆರ್ಸಿ ನೀಡಿರುವ ಈ ಶಿಫಾರಸನ್ನು ಪ್ರಶ್ನಿಸಿ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ'ಕ್ಕೆ (ಸಿಡಬ್ಲ್ಯೂಎಮ್ಎ) ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾನೂನು ತಜ್ಞರು ಮತ್ತು ಜಲಸಂಪನ್ಮೂಲ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸರ್ಕಾರ ತುರ್ತು ಸಮಾಲೋಚನೆ ನಡೆಸಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಸಿಡಬ್ಲ್ಯೂಆರ್ಸಿ ಶಿಫಾರಸ್ಸು ಅನ್ನು 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಬಹುದು. ಆದಾಗ್ಯೂ ನಿರ್ವಹಣಾ ಪ್ರಾಧಿಕಾರದ ನಿರ್ಧಾರ ಅಂತಿಮವಾಗಿರುತ್ತದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ನೀರು ಹರಿಸಿ ಎಂದರೆ ಕರ್ನಾಟಕ ನೀರು ಬಿಡಲೇಬೇಕಿದೆ ಎಂದು ವರದಿಯಾಗಿದೆ.ಸಂಪಾದಕೀಯ | ಕಾವೇರಿ ನದಿ ನೀರು ಹಂಚಿಕೆ: ಸಂಘರ್ಷಕ್ಕಿಂತ ಮಾತುಕತೆ ಸೂಕ್ತಕಾವೇರಿ ಹಂಚಿಕೆ: ಡಿಕೆಶಿ ಜತೆ ಮಾತುಕತೆ ರದ್ದುಪಡಿಸಲು ವಿಜಯ್ಗೆ ರೈತರ ಒತ್ತಾಯ