ವಿಡಿಯೊ: ರೈಲಿನಲ್ಲಿ ದೀಪ ಹಚ್ಚಿ, ಅಗರಬತ್ತಿ ಬೆಳಗಿದ ವ್ಯಕ್ತಿ: ಪ್ರಯಾಣಿಕರ ಆಕ್ರೋಶ
ನವದೆಹಲಿ: ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೆಟ್ಟಿಗರು ಹಾಗೂ ಪ್ರಯಾಣಿಕರು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್

ನವದೆಹಲಿ: ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೆಟ್ಟಿಗರು ಹಾಗೂ ಪ್ರಯಾಣಿಕರು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.A video circulating on social media shows a passenger performing prayers on the upper berth of an AC train coach while lighting incense sticks and an oil lamp.A fellow passenger reportedly intervened, explaining that such acts can be dangerous. Smoke may trigger the train's… pic.twitter.com/79SrmBnAdW— Jharkhand Rail Users (@JharkhandRail) July 26, 2026 ಎಸಿ ರೈಲಿನ ಬೋಗಿಯ ಮೇಲಿನ ಬರ್ತ್ನಲ್ಲಿ ಕುಳಿತ್ತಿದ್ದ ವ್ಯಕ್ತಿಯು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ, ಪಕ್ಕದಲ್ಲಿದ್ದ ಪ್ರಯಾಣಿಕರೊಬ್ಬರು ಆತನನ್ನು ತಡೆದು, ರೈಲಿನಲ್ಲಿ ಬೆಂಕಿ ಉರಿಸುವುದು ತಪ್ಪು ಎಂದು ತರಾಟೆಗೆ ತೆಗೆದುಕೊಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು.ರೈಲ್ವೆ ಇಲಾಖೆ ಸ್ಪಂದನೆ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಈ ವಿಡಿಯೊವನ್ನು ಗಮನಿಸಿರುವ ರೈಲ್ವೆ ಸೇವಾ ಕೇಂದ್ರವು ಘಟನೆ ನಡೆದ ರೈಲಿನ ಸಂಖ್ಯೆ ಮತ್ತು ಆ ಪ್ರಯಾಣಿಕನ 'ಪಿಎನ್ಆರ್' ವಿವರಗಳನ್ನು ಹಂಚಿಕೊಳ್ಳುವಂತೆ ಕೋರಿದೆ.ಈ ಘಟನೆಯು ರೈಲ್ವೆ ಸುರಕ್ಷತಾ ನಿಯಮಗಳ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ರೈಲುಗಳಲ್ಲಿ ತುರ್ತು ಪರಿಸ್ಥಿತಿ ತಡೆಯಲು ಅಗ್ನಿಶಾಮಕ ವ್ಯವಸ್ಥೆಗಳನ್ನು ಅಳವಡಿಸಲಾಗಿರುತ್ತದೆ. ಸಣ್ಣ ಪ್ರಮಾಣದ ಬೆಂಕಿ ಅಥವಾ ಹೊಗೆ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಬಹುದು, ಇಲ್ಲವೇ ದೊಡ್ಡ ಮಟ್ಟದ ಅಗ್ನಿ ದುರಂತಕ್ಕೆ ದಾರಿಮಾಡಿಕೊಡಬಹುದು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.