ಅತ್ತೆ ಕಾಟಕ್ಕೆ ತಲೆಗೂದಲು ಉದುರಿದೆ..!: ಕೌಟುಂಬಿಕ ದೌರ್ಜನ್ಯ ಆರೋಪದಡಿ ಎಫ್ಐಆರ್
ಬೆಂಗಳೂರು: ದೋಸೆ ಮತ್ತು ರಾಗಿ ಮುದ್ದೆ ಮಾಡಿಕೊಡಮ್ಮಾ ಅಂತ ಏನಾದರೂ ಅತ್ತೆ ಕೇಳಿದರೆ ನಿಮ್ಮ ತಲೆ ಕೂದಲು ಉದುರಿಬಿಡುತ್ತದೆಯೇ? ಈ ವಿಷಯವನ್ನು ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ ಗೆ (ವಿವಾಹಿತ ಮಹಿಳೆಯರಿಗೆ ಪತಿ ಅಥವಾ ಆತನ ಸಂಬಂಧಿಕರಿಂದಾಗುವ ದೈಹಿಕ ಅಥವಾ ಮಾನಸಿಕ ಹಿಂಸೆ (ಕ್ರೌರ್ಯ) ಮತ್ತು ವರದಕ್ಷಿಣೆ ಕಿರುಕುಳವನ್ನು ತಡೆಯಲು ಇರುವ ಕಠಿಣ ಕಾನೂನು) ಅನ್ವಯ ಮಾಡಬಹ

ಬೆಂಗಳೂರು: ದೋಸೆ ಮತ್ತು ರಾಗಿ ಮುದ್ದೆ ಮಾಡಿಕೊಡಮ್ಮಾ ಅಂತ ಏನಾದರೂ ಅತ್ತೆ ಕೇಳಿದರೆ ನಿಮ್ಮ ತಲೆ ಕೂದಲು ಉದುರಿಬಿಡುತ್ತದೆಯೇ? ಈ ವಿಷಯವನ್ನು ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ ಗೆ (ವಿವಾಹಿತ ಮಹಿಳೆಯರಿಗೆ ಪತಿ ಅಥವಾ ಆತನ ಸಂಬಂಧಿಕರಿಂದಾಗುವ ದೈಹಿಕ ಅಥವಾ ಮಾನಸಿಕ ಹಿಂಸೆ (ಕ್ರೌರ್ಯ) ಮತ್ತು ವರದಕ್ಷಿಣೆ ಕಿರುಕುಳವನ್ನು ತಡೆಯಲು ಇರುವ ಕಠಿಣ ಕಾನೂನು) ಅನ್ವಯ ಮಾಡಬಹುದೇ?‘ಕೌಟುಂಬಿಕ ದೌರ್ಜನ್ಯ ಆರೋಪದಡಿ ನಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ 69 ವರ್ಷದ ಅತ್ತೆ ಸೇರಿದಂತೆ ಕುಟುಂಬದ ನಾಲ್ವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ 29 ವರ್ಷದ ಸೊಸೆಯನ್ನು ಪ್ರಶ್ನಿಸಿದ ಪರಿ ಇದು.ವಿಚಾರಣೆ ವೇಳೆ ಸ್ವತಃ ವಾದ ಮಂಡಿಸಿದ ವಕೀಲೆಯೂ ಆದ ದೂರುದಾರ ಮಹಿಳೆ, ‘ಪತಿಯ ಮನೆ ಕಡೆಯವರು ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ನನ್ನ ವಿರುದ್ಧ ಇಲ್ಲ–ಸಲ್ಲದ ಆರೋಪ ಹೊರಿಸಿದ್ದಾರೆ. ನನಗೆ ಬರುತ್ತಿದ್ದ ಸಂಬಳವನ್ನೆಲ್ಲಾ ಪತಿಯೇ ಪಡೆದುಕೊಳ್ಳುತ್ತಿದ್ದರು. ನನ್ನ ಖರ್ಚಿಗೆ ಏನೂ ಉಳಿಯುತ್ತಿರಲಿಲ್ಲ’ ಎಂದು ದೂರಿದರು.‘ನನಗೆ ಪೌಷ್ಠಿಕಾಂಶ ಯುಕ್ತ ಆಹಾರ ನೀಡಿಲ್ಲ. ಪ್ರತಿದಿನ ನನಗೆ ದೋಸೆ, ಅನ್ನ, ಸೊಪ್ಪು ಮತ್ತು ಬೇಳೆ ಸಾರು ನೀಡುತ್ತಿದ್ದರು. ಆದರೆ, ಅವರು ಮಾತ್ರ ದಿನಾಲೂ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು. ಪತಿ ಊಟ–ತಿಂಡಿ ಮಾಡುವತನಕ ನನಗೆ ಊಟ ಮಾಡಲು ಬಿಡುತ್ತಿರಲಿಲ್ಲ. ಅತ್ತೆ ನನ್ನನ್ನು ಅಡುಗೆ ಮನೆಗೆ ಹೋಗಲಿಕ್ಕೇ ಬಿಡುತ್ತಿರಲಿಲ್ಲ. ಇವರೆಲ್ಲರೂ ನನಗೆ ಉಸಿರುಗಟ್ಟಿಸುವಂತಹ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇವರ ದೌರ್ಜನ್ಯದಿಂದಾಗಿ ನನ್ನ ತಲೆಕೂದಲು ಉದುರಿದೆ’ ಎಂದರು.‘ಅರ್ಜಿದಾರರೆಲ್ಲಾ ನನ್ನ ತಾಯಿಯ ಮನೆ ಬಳಿ ಬಂದು ರಸ್ತೆಯಲ್ಲಿ ನಿಂತು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನನ್ನ ಘನತೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ನೆರೆಹೊರೆಯವರು ನನ್ನನ್ನು ಏನೆಂದುಕೊಳ್ಳಬೇಡ. ಹೀಗಾಗಿ, ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ದಾಖಲಿಸಿದ್ದೇನೆ’ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕುಟುಂಬದಲ್ಲಿ ಜಗಳಗಳು ನಡೆಯುವುದೇ ಇಲ್ಲವೇ? ಪತಿಗೆ ರಾಗಿ ಮುದ್ದೆ, ದೋಸೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ತಪ್ಪೇ? ನಿಮಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗಿಲ್ಲ ಎಂಬುದನ್ನು ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಬಹುದೇ’ ಎಂದು ಪ್ರಶ್ನಿಸಿತು.‘ಕೆಲವೊಂದು ಆರೋಪಗಳನ್ನು ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ. ಪತಿ–ಪತ್ನಿ ಪರಸ್ಪರ ದೂರು-ಪ್ರತಿದೂರು ದಾಖಲಿಸುವುದು ಕ್ರೌರ್ಯವಲ್ಲ. ಈ ಪ್ರಕರಣದಲ್ಲಿ ಪತಿಯನ್ನು ಕ್ಷಮಿಸುವುದಿಲ್ಲ. ಆದಾಗ್ಯೂ, ನಿಮ್ಮ ಎಲ್ಲಾ ಆರೋಪಗಳನ್ನು ವಿಚ್ಛೇದನ ಕೋರಿಕೆ ದಾವೆಯಲ್ಲಿ ಪ್ರಸ್ತಾಪಿಸಬಹುದು’ ಎಂಬ ಮೌಖಿಕ ಅಭಿಪ್ರಾಯವನ್ನು ದೂರುದಾರ ಪತ್ನಿಗೆ ವ್ಯಕ್ತಪಡಿಸಿ ಆದೇಶ ಕಾಯ್ದಿರಿಸಿತು.ದೂರುದಾರ ಮಹಿಳೆಯ ಆರೋಪಪತಿಯನ್ನು ನನ್ನ ಕೊಠಡಿಯಲ್ಲಿ ಮಲಗಲು ಅತ್ತೆ ಬಿಡುತ್ತಲೇ ಇರಲಿಲ್ಲ. ನಾನು ನನ್ನ ಕೊಠಡಿಯಲ್ಲಿ ಏಕಾಂಗಿಯಾಗಿರುತ್ತಿದ್ದೆ. ಐದೂವರೆ ತಿಂಗಳು ಈ ದುರಂತಮಯ ಬದುಕು ಅನುಭವಿಸಿ, ಪತಿಯ ಮನೆಯಿಂದ ಹೊರಬೀಳಬೇಕಾಯಿತು.