ಸೋನಮ್–ಹಿಮಾಂಶು ಜೋಡಿಗೆ ಕಂಚು
ಹಾಂಗ್ಝೂ (ಚೀನಾ) : ಭಾರತದ ಸೋನಮ್ ಉತ್ತಮ್ ಮಸ್ಕರ್ ಹಾಗೂ ಹಿಮಾಂಶು ಧಿಲ್ಲಾನ್ ಜೋಡಿಯು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಹಾಲಿ ವಿಶ್ವಕಪ್ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕವಿದು.ಪದಕಪಟ್ಟಿಯಲ್ಲಿ ಆತಿಥೇಯ ಚೀನಾ (7 ಚಿನ್ನ ಸೇರಿ 18 ಪದಕ) ಅಗ್ರಸ್

ಹಾಂಗ್ಝೂ (ಚೀನಾ) : ಭಾರತದ ಸೋನಮ್ ಉತ್ತಮ್ ಮಸ್ಕರ್ ಹಾಗೂ ಹಿಮಾಂಶು ಧಿಲ್ಲಾನ್ ಜೋಡಿಯು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಹಾಲಿ ವಿಶ್ವಕಪ್ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕವಿದು.ಪದಕಪಟ್ಟಿಯಲ್ಲಿ ಆತಿಥೇಯ ಚೀನಾ (7 ಚಿನ್ನ ಸೇರಿ 18 ಪದಕ) ಅಗ್ರಸ್ಥಾನದಲ್ಲಿ ಮುಂದುವರಿದರೆ, ಅಮೆರಿಕ (ತಲಾ 2 ಚಿನ್ನ ಮತ್ತು ಬೆಳ್ಳಿ) ಎರಡನೇ ಸ್ಥಾನ ಕಾಯ್ದುಕೊಂಡಿದೆ. ಭಾರತ ಮೂರನೇ ಸ್ಥಾನದಲ್ಲಿದೆ.35 ಜೋಡಿ ಕಣದಲ್ಲಿದ್ದ ಅರ್ಹತಾ ಸುತ್ತಿನಲ್ಲಿ ಸೋನಮ್– ಹಿಮಾಂಶು ಜೋಡಿ 634.6 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಭಾರತದ ಇನ್ನೊಂದು ಜೋಡಿ ಇಳವೆನಿಲ್ ವಳರಿವನ್– ಪಾರ್ಥ್ ರಾಕೇಶ್ ಮಾನೆ (634.2 ಅಂಕ) ಮೂರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿತ್ತು. ನಾಲ್ಕು ಜೋಡಿಗಳು ಫೈನಲ್ಗೆ ಅರ್ಹತೆ ಪಡೆದಿದ್ದವು.ಫೈನಲ್ ಸುತ್ತಿನಲ್ಲಿ ಆತಿಥೇಯ ರಾಷ್ಟ್ರದ ಜಿಫಿ ವಾಂಗ್– ಲಿಹಾವೊ ಶೆಂಗ್ ಜೋಡಿ (505 ಅಂಕ) ಸ್ವದೇಶದ ಯುಶೆನ್ ದು– ಚಾಂಗ್ಹಾಂಗ್ ಝಾಂಗ್ (504.6) ಸವಾಲನ್ನು ಮೆಟ್ಟಿನಿಂತು, ಸ್ವರ್ಣಕ್ಕೆ ಕೊರಳೊಡ್ಡಿತು. ಸೋನಮ್ ಮತ್ತು ಹಿಮಾಂಶು 441.2 ಕಂಚಿನ ಪದಕ ತಮ್ಮದಾಗಿಸಿಕೊಂಡರು.ಇಳವೆನಿಲ್– ಪಾರ್ಥ್ ಜೋಡಿ (378.8 ಅಂಕ) ನಾಲ್ಕನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿತು.‘ಪದಕ ಗೆಲ್ಲುವುದು ಯಾವಾಗಲೂ ಮುಖ್ಯವಾಗುತ್ತದೆ. ಭವಿಷ್ಯದ ಸ್ಪರ್ಧೆಗಳಿಗೆ ಅಣಿಯಾಗಲು ಧೈರ್ಯ ಮತ್ತು ನಂಬಿಕೆಯನ್ನು ತುಂಬುತ್ತದೆ’ ಎಂದು ಮಹಾರಾಷ್ಟ್ರದ 23 ವರ್ಷ ವಯಸ್ಸಿನ ಸೋನಮ್ ಪ್ರತಿಕ್ರಿಯಿಸಿದರು.ಹರಿಯಾಣದ 20 ವರ್ಷ ವಯಸ್ಸಿನ ಹಿಮಾಂಶು, ಸೀನಿಯರ್ಸ್ ಶೂಟಿಂಗ್ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದರು.