ಆ. 13ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ 27ರವರೆಗೆ, ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 10 ದಿನ ನಡೆಯಲಿದೆ.ಅಧಿವೇಶನದ ನಡುವೆ ಆಗಸ್ಟ್ 15, 16, 22, 23 ಮತ್ತು 26ರಂದು ಸಾರ್ವತ್ರಿಕ ರಜಾ ದಿನ. ಹೀಗಾಗಿ ಈ ದಿನಗಳಲ್ಲಿ ಸದನದ ಕಾರ್ಯಕಲಾಪಗಳಿಗೆ ಬಿಡುವು ಇರಲಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕ

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ 27ರವರೆಗೆ, ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 10 ದಿನ ನಡೆಯಲಿದೆ.ಅಧಿವೇಶನದ ನಡುವೆ ಆಗಸ್ಟ್ 15, 16, 22, 23 ಮತ್ತು 26ರಂದು ಸಾರ್ವತ್ರಿಕ ರಜಾ ದಿನ. ಹೀಗಾಗಿ ಈ ದಿನಗಳಲ್ಲಿ ಸದನದ ಕಾರ್ಯಕಲಾಪಗಳಿಗೆ ಬಿಡುವು ಇರಲಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ನಡೆಯುವ ಮೊದಲ ಅಧಿವೇಶನ ಇದಾಗಿದೆ.ವಿಧಾನಸಭೆಯ ಅಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿರುವುದರಿಂದ, ನೂತನ ಸಭಾಧ್ಯಕ್ಷರ ನೇಮಕ ಆಗಬೇಕಿದೆ. ಅಲ್ಲದೆ, ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಹುಮತ ಪಡೆದಿರುವುದರಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಬದಲಿಸಿ, ಪಕ್ಷದ ಸದಸ್ಯರೊಬ್ಬರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲು ಆಡಳಿತರೂಢ ಕಾಂಗ್ರೆಸ್ ಮುಂದಾಗಿದೆ.
Read the complete story at Prajavani