ಬಾಕ್ಸಿಂಗ್: ಪ್ರೀತಿ, ಪ್ರಿಯಾಗೆ ಪದಕ ಖಚಿತ
ಗ್ಲಾಸ್ಗೊ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಮತ್ತು ಹಾಲಿ ಏಷ್ಯನ್ ಚಾಂಪಿಯನ್ ಪ್ರಿಯಾ ಗಂಗಾಸ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ತಮ್ಮ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಎರಡು ಪದಕಗಳನ್ನು ಖಚಿತ ಪಡಿಸಿದ್ದಾರೆ. ಮಹಿಳೆಯರ 54 ಕೆಜಿ ವಿಭಾಗದಲ್ಲಿ 22 ವರ್ಷದ ಪ್ರೀತಿ 5–0 ಅಂತರದಿಂದ ಉತ್ತರ ಐರ

ಗ್ಲಾಸ್ಗೊ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಮತ್ತು ಹಾಲಿ ಏಷ್ಯನ್ ಚಾಂಪಿಯನ್ ಪ್ರಿಯಾ ಗಂಗಾಸ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ತಮ್ಮ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಎರಡು ಪದಕಗಳನ್ನು ಖಚಿತ ಪಡಿಸಿದ್ದಾರೆ. ಮಹಿಳೆಯರ 54 ಕೆಜಿ ವಿಭಾಗದಲ್ಲಿ 22 ವರ್ಷದ ಪ್ರೀತಿ 5–0 ಅಂತರದಿಂದ ಉತ್ತರ ಐರ್ಲೆಂಡ್ನ ನಿಕೋಲ್ ಕ್ಲೈಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರು. ಅವರು ಸೆಮಿಫೈನಲ್ನಲ್ಲಿ ಜಾಂಬಿಯಾದ ಕ್ಯಾಥರಿನ್ ಮ್ವಾಪೆ ಅವರನ್ನು ಎದುರಿಸಲಿದ್ದಾರೆ.ಮಹಿಳೆಯರ 60 ಕೆಜಿ ಕ್ವಾರ್ಟರ್ಫೈನಲ್ನಲ್ಲಿ ಪ್ರಿಯಾ 4–1 ಅಂತರದಿಂದ ಸ್ಥಳೀಯ ನೆಚ್ಚಿನ ಬಾಕ್ಸರ್ ನಿಯಾಮ್ ಮಿಚೆಲ್ ಅವರನ್ನು ಸೋಲಿಸಿದರು.ಪರ್ವೀನ್ ನಿರ್ಗಮನ: ಮಾಜಿ ಏಷ್ಯನ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಪರ್ವೀನ್ ಹೂಡಾ ಅವರು ಮಹಿಳೆಯರ 65 ಕೆಜಿ ಕ್ವಾರ್ಟರ್ ಫೈನಲ್ನಲ್ಲಿ 2–3ರಿಂದ ಇಂಗ್ಲೆಂಡ್ನ ಸಚಾ ಹಿಕ್ಕಿ ವಿರುದ್ಧ ಸೋಲನುಭವಿಸಿ ಹೊರಬಿದ್ದರು.
Read the complete story at Prajavani