ಗಂಡನ ಪ್ರಭಾವ–ಅಧಿಕಾರಕ್ಕೆ ಹೆದರಿ ಸುಮ್ಮನಿದ್ದೆ; ಬಾದ್ಶಾ ಪತ್ನಿ ಹೇಳಿದ್ದಿಷ್ಟು
ಬಾಲಿವುಡ್ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಾದ್ಶಾ ಕಳೆದ ಮಾರ್ಚ್ 24ರಂದು ಎರಡನೇ ಮದುವೆಯಾಗಿದ್ದರು. ಪಂಜಾಬಿ ನಟಿ ಇಶಾ ರಿಖಿ ಅವರ ಜೊತೆಗಿನ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅಭಿಮಾನಿಗಳು ಕೂಡ ಈ ಜೋಡಿಗೆ ಶುಭ ಹಾರೈಸಿದ್ದರು. ಆದರೆ ಮದುವೆಯ ನಂತರ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಬಾದ್ಶಾ ಹಾಗೂ ಇಶಾ ರಿಖಿ ವಿಚ್ಛೇದನದ ವದಂತಿ

ಬಾಲಿವುಡ್ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಾದ್ಶಾ ಕಳೆದ ಮಾರ್ಚ್ 24ರಂದು ಎರಡನೇ ಮದುವೆಯಾಗಿದ್ದರು. ಪಂಜಾಬಿ ನಟಿ ಇಶಾ ರಿಖಿ ಅವರ ಜೊತೆಗಿನ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅಭಿಮಾನಿಗಳು ಕೂಡ ಈ ಜೋಡಿಗೆ ಶುಭ ಹಾರೈಸಿದ್ದರು. ಆದರೆ ಮದುವೆಯ ನಂತರ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಬಾದ್ಶಾ ಹಾಗೂ ಇಶಾ ರಿಖಿ ವಿಚ್ಛೇದನದ ವದಂತಿಗಳು ಹರಡುತ್ತಲೇ ಇತ್ತು. ಆ ಬೆನ್ನಲ್ಲೇ ನಟಿ ಇಶಾ ರಿಖಿ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ತಾವು ಅನುಭವಿಸಿದ ಸಂಕಟ, ಮೌನ ತಾಳಿದ್ದ ಬಗ್ಗೆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.ಸದ್ದಿಲ್ಲದೆ ಎರಡನೇ ಮದುವೆಯಾದ ಬಾಲಿವುಡ್ ಖ್ಯಾತ ಗಾಯಕ ಬಾದ್ಶಾ View this post on Instagram ‘ಅವರ ಅಧಿಕಾರ-ಪ್ರಭಾವಕ್ಕೆ ಹೆದರಿ ಮೌನವಾಗಿದ್ದೆ’.. ‘ಕಣ್ಣಿಗೆ ಕಾಣದ ಗಾಯಗಳು ಒಳಗೊಳಗೇ ಮನುಷ್ಯನನ್ನು ಕುಗ್ಗಿಸುತ್ತವೆ. ಬಹಳ ದಿನದಿಂದ ನಾನು ಮೌನವಾಗಿದ್ದೆ. ಏಕೆಂದರೆ ನನ್ನಲ್ಲಿ ಭಯವಿತ್ತು. ನನ್ನ ಪತಿಯ ಬಳಿಯಿದ್ದ ಪ್ರಭಾವ, ಅಧಿಕಾರ ಮತ್ತು ಹಣವನ್ನು ನೋಡಿ ನಾನು ಬೆದರಿದ್ದೆ. ಯಾವುದೇ ಸದ್ದು ಮಾಡದೆ ಸುಮ್ಮನಿರುವುದೇ ನನ್ನ ಪಾಲಿಗೆ ಸುರಕ್ಷಿತವಾದ ಹಾದಿ ಎಂದು ನನ್ನ ಮನಸ್ಸಿಗೆ ಸಮಾಧಾನ ಹೇಳಿಕೊಂಡಿದ್ದೆ’ ಎಂದಿದ್ದಾರೆ.‘ಆದರೆ, ನನ್ನ ಆ ಮೌನದಿಂದ ಎಲ್ಲವನ್ನೂ ಒಪ್ಪಿಕೊಂಡೆ ಎಂದರ್ಥವಲ್ಲ. ಬದಲಿಗೆ ಅದೊಂದು ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟವಾಗಿತ್ತು. ಇಂದು ನಾನು ಭಯವನ್ನು ಬದಿಗೊತ್ತಿ, ಧೈರ್ಯದಿಂದ ನಿಲ್ಲಲು ನಿರ್ಧರಿಸಿದ್ದೇನೆ. ಸತ್ಯವನ್ನು ಬಹಿರಂಗಪಡಿಸಲು ನಾನು ಇನ್ನು ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು, ಆದರೆ ಎಲ್ಲವೂ ಸರಿ ಇದೆ ಎಂದು ಜಗತ್ತಿನ ಮುಂದೆ ನಟಿಸುವುದನ್ನಂತೂ ಕೊನೆಗೂ ನಿಲ್ಲಿಸಲು ನಾನು ಸಿದ್ಧಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. View this post on Instagram A post shared by Isha Rikhi (@isharikhi) ವಿಚ್ಛೇದನದ ವದಂತಿ ಹಬ್ಬಿದ್ದೇಗೆ..?ಕೆಲವು ದಿನಗಳ ಹಿಂದಷ್ಟೇ ಇಶಾ, ಬಾದ್ಶಾ ಜೊತೆಗಿನ ತಮ್ಮ ಹಳೆಯ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡು, ‘ಪ್ರತಿಯೊಂದು ಬಿರುಗಾಳಿಯೂ ಒಂದು ಪಾಠ. ಪ್ರತಿಯೊಂದು ಪ್ರಾರ್ಥನೆಯೂ ಒಂದು ಭರವಸೆ’ ಎಂದು ಬರೆದಿಕೊಂಡಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು.ಎರಡನೇ ಮದುವೆಯಾಗಿದ್ದ ಬಾದ್ಶಾಇದು ಬಾದ್ಶಾ ಅವರ ಎರಡನೇ ಮದುವೆಯಾಗಿದೆ. 2012ರಲ್ಲಿ ಜಾಸ್ಮಿನ್ ಮಸೀಹ್ ಎಂಬುವರನ್ನು ಮದುವೆಯಾಗಿದ್ದರು. 8 ವರ್ಷಗಳ ದಾಂಪತ್ಯದ ನಂತರ 2020ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮೊದಲ ಹೆಂಡತಿಗೆ ಜೆಸ್ಸೆಮಿ ಗ್ರೇಸ್ ಎಂಬ ಮಗಳಿದ್ದಾಳೆ. ಮೊದಲ ಹೆಂಡತಿಯಿಂದ ದೂರವಾದ 6 ವರ್ಷಗಳ ನಂತರ ಇಶಾ ಅವರನ್ನು ಬಾದ್ಶಾ ಮದುವೆಯಾಗಿದ್ದರು. ಆದರೆ, ಇದೀಗ ಎರಡನೇ ದಾಂಪತ್ಯದಲ್ಲೂ ಬಿರುಕು ಮೂಡಿದೆ ಎನ್ನುವ ವದಂತಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.