ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆ: ಪಿಎಂಎಲ್–ಎನ್ ಮೇಲುಗೈ
ಇಸ್ಲಾಮಾಬಾದ್ : ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 13 ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೇನೆ ಬೆಂಬಲಿತ ಪಾಕಿಸ್ತಾನ ಮುಸ್ಲಿಂ ಲೀಗ್– ನವಾಜ್ (ಪಿಎಂಎಲ್–ಎನ್) ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ.ರಾಷ್ಟ್ರಮಟ್ಟದಲ್ಲಿ ಪಿಎಂಎಲ್–ಎನ್ ಮಿತ್ರಪಕ್ಷವಾದ ಪಾಕಿಸ್ತಾನ್ಸ್ ಪೀಪಲ್ ಪಾರ್ಟಿ
ಇಸ್ಲಾಮಾಬಾದ್ : ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 13 ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೇನೆ ಬೆಂಬಲಿತ ಪಾಕಿಸ್ತಾನ ಮುಸ್ಲಿಂ ಲೀಗ್– ನವಾಜ್ (ಪಿಎಂಎಲ್–ಎನ್) ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ.ರಾಷ್ಟ್ರಮಟ್ಟದಲ್ಲಿ ಪಿಎಂಎಲ್–ಎನ್ ಮಿತ್ರಪಕ್ಷವಾದ ಪಾಕಿಸ್ತಾನ್ಸ್ ಪೀಪಲ್ ಪಾರ್ಟಿ (ಪಿಪಿಪಿ) ಉಳಿದ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ.ಈ ಪ್ರದೇಶದಲ್ಲಿ 45 ವಿಧಾನಸಭಾ ಕ್ಷೇತ್ರಗಳಿದ್ದು, ಜುಲೈ 27ರಿಂದ ಆಗಸ್ಟ್ 10ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಏಳು ಕ್ಷೇತ್ರಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಪಿಪಿಪಿ ಹಿರಿಯ ನಾಯಕ ನಯ್ಯರ್ ಬೊಖಾರಿ, ‘ನಮ್ಮ ಗೆಲುವಿನ ಕ್ಷೇತ್ರಗಳನ್ನು ಪಿಎಂಎಲ್–ಎನ್ಗೆ ಉಡುಗೊರೆ ನೀಡಲಾಗಿದೆ’ ಎಂದಿದ್ದಾರೆ.ಮತದಾನದ ದಿನ ನಡೆದ ಘರ್ಷಣೆಯಲ್ಲಿ ಪಿಪಿಪಿಯ ಒಬ್ಬ ಕಾರ್ಯಕರ್ತ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
Read the complete story at Prajavani