ಬೆಂಗಳೂರು: ಗ್ರಿಲ್ ಮುರಿದು ಕದಿಯುತ್ತಿದ್ದವ ಸೆರೆ;9 ಲ್ಯಾಪ್ಟಾಪ್,11 ಮೊಬೈಲ್ ವಶ
ಬೆಂಗಳೂರು: ಅಂಗಡಿಗಳ ಕಿಟಕಿ ಗ್ರಿಲ್ ಮುರಿದು ಒಳ ನುಗ್ಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡಿನ ಸತ್ಯ (22) ಬಂಧಿತ. ಈತನಿಂದ ₹20 ಲಕ್ಷ ಮೌಲ್ಯದ 9 ಲ್ಯಾಪ್ಟಾಪ್, 2 ಟ್ಯಾಬ್ ಹಾಗೂ 11 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.ಮೇ 2

ಬೆಂಗಳೂರು: ಅಂಗಡಿಗಳ ಕಿಟಕಿ ಗ್ರಿಲ್ ಮುರಿದು ಒಳ ನುಗ್ಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡಿನ ಸತ್ಯ (22) ಬಂಧಿತ. ಈತನಿಂದ ₹20 ಲಕ್ಷ ಮೌಲ್ಯದ 9 ಲ್ಯಾಪ್ಟಾಪ್, 2 ಟ್ಯಾಬ್ ಹಾಗೂ 11 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.ಮೇ 23ರಂದು ಆರೋಪಿಯು ರಾತ್ರಿ ಠಾಣಾ ವ್ಯಾಪ್ತಿಯ ಸೆಕ್ಟರ್-7ರಲ್ಲಿರುವ ಎಲೆಕ್ಟ್ರಾನಿಕ್ ಮಳಿಗೆಯೊಂದರ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿ ವಿವಿಧ ಕಂಪನಿಯ ಮೊಬೈಲ್ ಫೋನ್ಗಳು, ಮ್ಯಾಕ್ ಬುಕ್ಗಳು, ಲ್ಯಾಪ್ಟಾಪ್ ಹಾಗೂ ಟ್ಯಾಬ್ಗಳನ್ನು ಕಳ್ಳತನ ಮಾಡಿದ್ದ ಎಂದು ಮಳಿಗೆಯ ಮ್ಯಾನೇಜರ್ ದೂರು ನೀಡಿದ್ದರು.ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಹಾಗೂ ಇತರೆ ತನಿಖಾ ಮೂಲಗಳ ನೆರವಿನಿಂದ ಆರೋಪಿಯನ್ನು ಅತ್ತಿಬೆಲೆಯ ಬಸ್ ನಿಲ್ದಾಣ ಸಮೀಪ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ಚೆನ್ನೈ ನಿವಾಸದಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ಬಿಸಿಎ ಪದವಿ ಪಡೆದಿದ್ದು, ಸುಲಭವಾಗಿ ಹಣ ಗಳಿಸಲು ಕಳ್ಳತನ ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಠಾಣೆಯೊಂದರಲ್ಲೂ ಈತನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.