ಕ್ಯಾಬ್ಗೆ ಕಾಯುತ್ತಿದ್ದ ಮಹಿಳೆಗೆ ‘ನಿನ್ನ ರೇಟ್ ಎಷ್ಟು?’ಎಂದವ ಈಗ ಪೊಲೀಸರ ಅತಿಥಿ
ಬೆಂಗಳೂರು: ಇಲ್ಲಿಯ ರಾಮಮೂರ್ತಿ ನಗರದಲ್ಲಿ ಮಹಿಳೆಯೊಬ್ಬರು ಕ್ಯಾಬ್ಗಾಗಿ ಕಾಯುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ, ನಿನ್ನ ರೇಟ್ ಎಷ್ಟು? ಎಂದು ಕೇಳಿದ್ದಾನೆ. ಮಹಿಳೆ ಈ ಘಟನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ. ವಿಡಿಯೊ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ವ್ಯಕ್ತಿ ತಕ್ಷಣ ಎಚ್ಚೆತ್ತುಕೊಂಡು ತಪ್ಪಿಸಿಕೊಂಡಿದ್ದಾನೆ. ವಿಡಿಯೊವನ್ನ

ಬೆಂಗಳೂರು: ಇಲ್ಲಿಯ ರಾಮಮೂರ್ತಿ ನಗರದಲ್ಲಿ ಮಹಿಳೆಯೊಬ್ಬರು ಕ್ಯಾಬ್ಗಾಗಿ ಕಾಯುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ, ನಿನ್ನ ರೇಟ್ ಎಷ್ಟು? ಎಂದು ಕೇಳಿದ್ದಾನೆ. ಮಹಿಳೆ ಈ ಘಟನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ. ವಿಡಿಯೊ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ವ್ಯಕ್ತಿ ತಕ್ಷಣ ಎಚ್ಚೆತ್ತುಕೊಂಡು ತಪ್ಪಿಸಿಕೊಂಡಿದ್ದಾನೆ. ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಮಹಿಳೆ, ‘ನಾನು ಕ್ಯಾಬ್ಗೊಸ್ಕರ ಕಾಯತ್ತಿದ್ದಾಗ, ಸ್ಕೂಟಿಯಲ್ಲಿ ಬಂದ ವ್ಯಕ್ತಿ , ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾನೆ. ನನ್ನ ಸುರಕ್ಷತೆಗಾಗಿ ವಿಡಿಯೊ ಮಾಡಿಕೊಳ್ಳುತ್ತಿದ್ದೆ. ಅದನ್ನು ಗಮನಿಸಿದ ವ್ಯಕ್ತಿ ನನ್ನನ್ನು ನಿಂದಿಸಿ ಪರಾರಿಯಾಗಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಅಶ್ಲೀಲವಾಗಿ ನಡೆದುಕೊಂಡ ವ್ಯಕ್ತಿಯನ್ನು 42 ವರ್ಷದ ವಿಜಯ್ ರಾಘವ್ ಎಂದು ಗುರುತಿಸಲಾಗಿದೆ. ಈತ ಹಣ್ಣಿನ ವ್ಯಾಪಾರಿಯಾಗಿದ್ದು, ಹೊರಮಾವು ನಿವಾಸಿಯಾಗಿದ್ದಾನೆ.ಪ್ರಕರಣ ದಾಖಲುಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಕೂಟರ್ ನಂಬರ್ ಆಧರಿಸಿ ವ್ಯಕ್ತಿಯನ್ನು ಪತ್ತೆಮಾಡಲಾಗಿದೆ ಎಂದು ರಾಮಮೂರ್ತಿ ನಗರ ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಆತ ಬೇರೆಯವರ ಸ್ಕೂಟರ್ ಬಳಸಿದ್ದಾನೆ. ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ. Woman Alleges Harassment While Waiting for Cab in Bengaluru, Seeks Police ActionA woman has shared a video on social media alleging that she was harassed while waiting for her cab in Bengaluru. She claimed the accused, who was riding a vehicle bearing registration number KA03… pic.twitter.com/juc7uYhidl— Karnataka Portfolio (@karnatakaportf) July 27, 2026