SIR ಅವಧಿ ವಿಸ್ತರಣೆ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ: ಹೈಕೋರ್ಟ್
ಬೆಂಗಳೂರು: ಎಸ್ಐಆರ್ (Special Intensive Revision) ಅವಧಿ ವಿಸ್ತರಣೆ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ಕರ್ನಾಟಕ ಹೈಕೋರ್ಟ್ (High Court) ತಿಳಿಸಿದೆ. ದೇವನೂರು ಮಹದೇವ್ ಮತ್ತು ರಾಮಚಂದ್ರಗುಹಾ ಅವರು ಅರ್ಜಿ ಎಸ್ಐಆರ್ ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯಪೀಠ, ಕಾಲಾವಧಿ ವಿಸ್ತರಣ

ಬೆಂಗಳೂರು: ಎಸ್ಐಆರ್ (Special Intensive Revision) ಅವಧಿ ವಿಸ್ತರಣೆ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ಕರ್ನಾಟಕ ಹೈಕೋರ್ಟ್ (High Court) ತಿಳಿಸಿದೆ. ದೇವನೂರು ಮಹದೇವ್ ಮತ್ತು ರಾಮಚಂದ್ರಗುಹಾ ಅವರು ಅರ್ಜಿ ಎಸ್ಐಆರ್ ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯಪೀಠ, ಕಾಲಾವಧಿ ವಿಸ್ತರಣೆ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ (ECI) ಇದೆ. ಅವಧಿ ವಿಸ್ತರಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಆಯೋಗದಲ್ಲಿ ತಜ್ಞರ ತಂಡ ಕೆಲಸ ಮಾಡುತ್ತಿದೆ. ಪರಿಹಾರ ಕ್ರಮಗಳನ್ನೂ ಆಯೋಗವೇ ಕೈಗೊಳ್ಳಬೇಕು. ಅಗತ್ಯವಿದ್ದರೆ ಅವರು ಅದನ್ನು ಮಾಡಲಿದ್ದಾರೆ ಎಂದು ಪೀಠ ತಿಳಿಸಿದೆ. ಆಯೋಗ ನಿಮ್ಮ ಕೋರಿಕೆಗೆ ನಿರಾಕರಿಸಿದರೆ ನೀವು ಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ.
Read the complete story at Public TV Kannada