ದ್ವಿಪಕ್ಷೀಯ ಬಾಂಧವ್ಯ ವೃದ್ಧಿ: ಪಾಕ್ ಸೇನಾ ಮುಖ್ಯಸ್ಥನ ಜೊತೆ ಅಮೆರಿಕ ಸಂಸದರ ಚರ್ಚೆ
ಇಸ್ಲಾಮಾಬಾದ್: ದ್ವಿಪಕ್ಷೀಯ ಬಾಂಧವ್ಯ ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಇಬ್ಬರು ಸಂಸದರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ರಾವಲ್ಪಿಂಡಿಯಲ್ಲಿ ಸೋಮವಾರ ಭೇಟಿಯಾದರು.‘ರಯಾನ್ ಝಿಂಕಿ ಮತ್ತು ಮೈಖೇಲ್ ಬಾಮ್ಗಾರ್ಟ್ನರ್ ಅವರು ಪ್ರಾದೇಶಿಕ ಭದ್ರತೆ, ಪರಸ್ಪರ ಹಿತಾಸಕ್ತಿ, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಆರ್ಥಿಕ ಸಹಕಾರಗಳನ್ನು ಹೆಚ್ಚಿಸುವ ಮಾರ

ಇಸ್ಲಾಮಾಬಾದ್: ದ್ವಿಪಕ್ಷೀಯ ಬಾಂಧವ್ಯ ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಇಬ್ಬರು ಸಂಸದರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ರಾವಲ್ಪಿಂಡಿಯಲ್ಲಿ ಸೋಮವಾರ ಭೇಟಿಯಾದರು.‘ರಯಾನ್ ಝಿಂಕಿ ಮತ್ತು ಮೈಖೇಲ್ ಬಾಮ್ಗಾರ್ಟ್ನರ್ ಅವರು ಪ್ರಾದೇಶಿಕ ಭದ್ರತೆ, ಪರಸ್ಪರ ಹಿತಾಸಕ್ತಿ, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಆರ್ಥಿಕ ಸಹಕಾರಗಳನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಫೀಲ್ಡ್ ಮಾರ್ಷಲ್ ಮುನೀರ್ ಅವರೊಂದಿಗೆ ಚರ್ಚಿಸಿದರು’ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವು ಮಾಹಿತಿ ನೀಡಿದೆ.‘ದ್ವಿಪಕ್ಷೀಯ ಆರ್ಥಿಕ ಸಹಭಾಗಿತ್ವದ ಅವಕಾಶಗಳು, ಖಾಸಗಿ ಕ್ಷೇತ್ರದ ಸಹಭಾಗಿತ್ವ ಹಾಗೂ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಬಲಪಡಿಸುವ ಕುರಿತು ಎರಡೂ ಕಡೆಯವರು ಮಾತುಕತೆ ನಡೆಸಿದರು. ಈ ವೇಳೆ ಪಾಕಿಸ್ತಾನದ ಆರ್ಥಿಕ ಸಾಮರ್ಥ್ಯದ ಬಗ್ಗೆ ಮುನೀರ್ ಅವರು ಒತ್ತಿ ಹೇಳಿದ್ದಾರೆ’ ಎಂದು ಅದು ತಿಳಿಸಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಎರಡನೇ ಅವಧಿಯಲ್ಲಿ ಉಭಯ ದೇಶಗಳ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭಾಗವಾಗಿ ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ.
Read the complete story at Prajavani