ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 13 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ
ನವದೆಹಲಿ: ನೀಟ್ ಯುಜಿ (NEET UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಆರೋಪಿಗಳ ವಿರುದ್ಧ ಸಿಬಿಐ (CBI) ನವದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ದೋಷಾರೋಪ(Chargesheet) ಪಟ್ಟಿ ಸಲ್ಲಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ವಿಶೇಷ ತ್ವರಿತ ನ್ಯಾಯಾಲಯದ (Fast Track Court) ಮುಂದೆ ನಾಳೆ ಈ ದೋಷಾರೋಪ ಪಟ್ಟಿಯನ್ನು

ನವದೆಹಲಿ: ನೀಟ್ ಯುಜಿ (NEET UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಆರೋಪಿಗಳ ವಿರುದ್ಧ ಸಿಬಿಐ (CBI) ನವದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ದೋಷಾರೋಪ(Chargesheet) ಪಟ್ಟಿ ಸಲ್ಲಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ವಿಶೇಷ ತ್ವರಿತ ನ್ಯಾಯಾಲಯದ (Fast Track Court) ಮುಂದೆ ನಾಳೆ ಈ ದೋಷಾರೋಪ ಪಟ್ಟಿಯನ್ನು ಮಂಡಿಸಲಾಗುವುದು. ಸಿಬಿಐನ ಆರ್ಥಿಕ ಅಪರಾಧ ವಿಭಾಗವು (Economic Offence Wing) ಈ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಬಿಎನ್ಎಸ್ (BNS) 2023ರ ಸೆಕ್ಷನ್ 315(5), 318(4), 61(2), 238, 303(2) ಮತ್ತು ಭ್ರಷ್ಟಾಚಾರ ನಿಗ್ರಹ (PC) ಕಾಯ್ದೆ 1988ರ ಸೆಕ್ಷನ್ 13(2) ಜೊತೆಗೆ 13(1)(a) ಹಾಗೂ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ 2024ರ ಸೆಕ್ಷನ್ 10ರ ಜೊತೆಗೆ ಸೆಕ್ಷನ್ 3, 4, 5 ಮತ್ತು ಸೆಕ್ಷನ್ 11ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ಸಿಬಿಐ ತನಿಖೆ ನಡೆಸಿತ್ತು. ಆರೋಪಿಗಳಾದ ಯಶ್ ಯಾದವ್, ಮಾಂಗಿಲಾಲ್ ಬಿವಾಲ್, ದಿನೇಶ್ ಬಿವಾಲ್, ವಿಕಾಸ್ ಬಿವಾಲ್, ಶುಭಮ್ ಖೈರ್ನಾರ್, ಧನಂಜಯ್ ಲೋಖಂಡೆ, ಪ್ರಹ್ಲಾದ್ ಕುಲಕರ್ಣಿ, ತೇಜಸ್ ಹರ್ಷದ್ ಕುಮಾರ್, ಡಾ. ಮನೋಜ್ ಶಿರೂರೆ, ಶಿವರಾಜ್ ರಘುನಾಥ್ ಮೋಟೆಗಾಂವ್ಕರ್, ಮನಿಷಾ ವಾಘ್ಮಾರೆ, ಮನಿಷಾ ಮಾಂಧರೆ ಮತ್ತು ಮನಿಷಾ ಸಂಜಯ್ ಹವಾಲ್ದಾರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: FIR ಹಿಂಪಡೆಯದಿದ್ದರೆ ಮತ್ತೆ ದೇಶವ್ಯಾಪಿ ಪ್ರತಿಭಟನೆ: CJP ಹೊಸ ವಾರ್ನಿಂಗ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಅಧಿಕಾರಿಗಳ ಭಾಗಿಯಾಗುವಿಕೆಯನ್ನು ಮತ್ತಷ್ಟು ಪರಿಶೀಲಿಸಲು ಸಿಬಿಐ ತನಿಖೆಯನ್ನು ಮುಕ್ತವಾಗಿರಿಸಿದೆ. ಇತ್ತೀಚೆಗಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 47 ಎನ್ಟಿಎ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತನಿಖಾ ಸಂಸ್ಥೆಯ ಪ್ರಕಾರ, ಮಾಂಗಿಲಾಲ್ 10 ಲಕ್ಷ ರೂ. ನೀಡಿ ಯಶ್ ಯಾದವ್ನಿಂದ ಸೋರಿಕೆಯಾದ ನೀಟ್ ಯುಜಿ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದನು. ವಿಚಾರಣೆ ವೇಳೆ, ರಾಜಸ್ಥಾನದ ಸಿಕಾರ್ನಲ್ಲಿ ಕೋಚಿಂಗ್ ಪಡೆಯುತ್ತಿದ್ದಾಗ ತಾನು ಯಶ್ ಯಾದವ್ನ ಸಂಪರ್ಕಕ್ಕೆ ಬಂದೆ ಎಂದು ವಿಕಾಸ್ ಬಿವಾಲ್ ಹೇಳಿದ್ದಾನೆ. ತನ್ನ ಮಗನಿಗಾಗಿ ಪ್ರಶ್ನೆಪತ್ರಿಕೆಯನ್ನು ಪಡೆಯಲು ಮಾಂಗಿಲಾಲ್ ಬಿವಾಲ್ ಶುಭಮ್ ಖೈರ್ನಾರ್ನನ್ನು ಸಂಪರ್ಕಿಸಿದ್ದನು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅಪ್ರಾಪ್ತರನ್ನು ಬಿಡುಗಡೆ ಮಾಡಿ, ಕ್ರಿಮಿನಲ್ಗಳ ವಿರುದ್ಧ ತನಿಖೆ ನಡೆಸಿ: ಸುಪ್ರೀಂ ಆರಂಭದಲ್ಲಿ ಶುಭಮ್ ಖೈರ್ನಾರ್ ಪ್ರಶ್ನೆಪತ್ರಿಕೆಯನ್ನು ಯಶ್ ಯಾದವ್ಗೆ ಸೋರಿಕೆ ಮಾಡಿದ್ದನು. ಆತ ಅದನ್ನು ಮಾಂಗಿಲಾಲ್ ಬಿವಾಲ್ಗೆ ಹಂಚಿದ್ದ. ನಂತರ ಅದು ವಿಕಾಸ್ ಬಿವಾಲ್ ಮತ್ತು ದಿನೇಶ್ ಬಿವಾಲ್ಗೆ ತಲುಪಿತು. ಜೊತೆಗೆ ಮಾಂಗಿಲಾಲ್ ಬಿವಾಲ್ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ವಿವಿಧ ಅಭ್ಯರ್ಥಿಗಳಿಗೆ 12 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವಾಗಲೇ ಆರೋಪಿ ಯಶ್ ಯಾದವ್ಗೆ ಜೂನ್ 21ರಂದು ನಿಗದಿಯಾಗಿದ್ದ ನೀಟ್ ಯುಜಿ ಪರೀಕ್ಷೆಗೆ ಹಾಜರಾಗಲು ಹಾಗೂ ಜೂನ್ 22ರಂದು ತನ್ನ ಸಹೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯವು ಅವಕಾಶ ನೀಡಿತ್ತು.