ದುಲೀಪ್ ಟ್ರೋಫಿ ಪದಾರ್ಪಣೆಗೂ ಮುನ್ನವೇ ಉಪನಾಯಕನಾದ ವೈಭವ್ ಸೂರ್ಯವಂಶಿ
ಕೋಲ್ಕತ್ತ: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೂರ್ವ ವಲಯ ತಂಡಕ್ಕೆ ಯುವ ಆಟಗಾರ ವೈಭವ್ ಸೂರ್ಯವಂಶಿ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.ಬಂಗಾಳ ಮತ್ತು ಜಾರ್ಖಂಡ್ ತಂಡದ ಆಟಗಾರರೇ ಹೆಚ್ಚಿರುವ ಪೂರ್ವ ವಲಯ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಮುನ್ನೆಡಸಲಿದ್ದಾರೆ.ವೈಭವ್ ಸೂರ್ಯವಂಶಿ ಅವರು ಈ ತಂಡದಲ್ಲಿರುವ ಏಕೈಕ ಬಿಹಾ

ಕೋಲ್ಕತ್ತ: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೂರ್ವ ವಲಯ ತಂಡಕ್ಕೆ ಯುವ ಆಟಗಾರ ವೈಭವ್ ಸೂರ್ಯವಂಶಿ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.ಬಂಗಾಳ ಮತ್ತು ಜಾರ್ಖಂಡ್ ತಂಡದ ಆಟಗಾರರೇ ಹೆಚ್ಚಿರುವ ಪೂರ್ವ ವಲಯ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಮುನ್ನೆಡಸಲಿದ್ದಾರೆ.ವೈಭವ್ ಸೂರ್ಯವಂಶಿ ಅವರು ಈ ತಂಡದಲ್ಲಿರುವ ಏಕೈಕ ಬಿಹಾರ ಮೂಲದ ಆಟಗಾರನಾಗಿದ್ದು, ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆಗೂ ಮುನ್ನವೇ ದುಲೀಪ್ ಟ್ರೋಫಿಯಲ್ಲಿ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಪೂರ್ವ ವಲಯ ತಂಡದಲ್ಲಿ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಜ್ ಅಹಮದ್ ಮತ್ತು ಅಭಿಮನ್ಯು ಈಶ್ವರನ್ ಸ್ಥಾನ ಪಡೆದಿದ್ದಾರೆ.ಇಂಡಿಯಾ ಎ ಪರ ಆಡಿರುವ ಕುಮಾರ್ ಕುಶಾಗ್ರ, ಅಂಕುಲ್ ರಾಯ್ ಕೂಡ ತಂಡದಲ್ಲಿದ್ದಾರೆ. ಆಗಸ್ಟ್ 23ರಿಂದ ಸೆ. 6ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ದುಲೀಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಪೂರ್ವ ವಲಯ ತಂಡ: ಇಶಾನ್ ಕಿಶನ್(ನಾಯಕ) ವೈಭವ್ ಸೂರ್ಯವಂಶಿ(ಉಪನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್, ಶಹಬಾಜ್ ಅಹಮದ್, ಸುರಜ್ ಸಿಂಧು ಜೈಸ್ವಾಲ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಕುಮಾರ್ ಕುಶಾಗ್ರ, ಅಂಕುಲ್ ರಾಯ್, ವಿರಾಟ್ ಸಿಂಗ್, ಶಿಕ್ಜರ್ ಮೋಹನ್, ಸುಬ್ರಾಂಶು ಸೇನಾಪತಿ, ಡೆನಿಶ್ ದಾಸ್, ಅಭಿಜಿತ್ ಸರ್ಕಾರ್.