ಗದಗ ರೈಲು ನಿಲ್ದಾಣದಲ್ಲಿ 9 ಲಕ್ಷ ರೂ. ಮೌಲ್ಯದ 19 ಕೆಜಿ ಗಾಂಜಾ ಜಪ್ತಿ
ಗದಗ: ಗೋವಾಕ್ಕೆ (Goa) ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್ಪ್ರೆಸ್ (Gadag) ರೈಲಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ನಗರದ ರೈಲ್ವೆ ಪೊಲೀಸರು ಮಾದಕವಸ್ತುವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇಂದು ಬೆಳಿಗ್ಗೆ 8:06 ರ ಸುಮಾರಿಗೆ, ಶಾಲಿಮಾರದಿಂದ ವಾಸ್ಕೋಗೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್ಪ್ರೆಸ್ ರೈಲಿನ ಇಂಜಿನ್ ಹಿಂಭಾಗದ ಜ

ಗದಗ: ಗೋವಾಕ್ಕೆ (Goa) ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್ಪ್ರೆಸ್ (Gadag) ರೈಲಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ನಗರದ ರೈಲ್ವೆ ಪೊಲೀಸರು ಮಾದಕವಸ್ತುವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇಂದು ಬೆಳಿಗ್ಗೆ 8:06 ರ ಸುಮಾರಿಗೆ, ಶಾಲಿಮಾರದಿಂದ ವಾಸ್ಕೋಗೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್ಪ್ರೆಸ್ ರೈಲಿನ ಇಂಜಿನ್ ಹಿಂಭಾಗದ ಜನರಲ್ ಕೋಚ್ನ ಶೌಚಾಲಯದ ಬಳಿ 9.56 ಲಕ್ಷ ರೂಪಾಯಿ ಮೌಲ್ಯದ 19.300 ಕೆಜಿ ಗಾಂಜಾ ಪತ್ತೆಯಾಗಿದೆ. ನಗರದ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ಎಂದಿನಂತೆ ಮಾದಕ ವಸ್ತುಗಳ ಪತ್ತೆ ಹಾಗೂ ಪರಿಶೀಲನೆ ನಡೆಸುತ್ತಿದ್ದ ವೇಳೆ ಎರಡು ಬಿಳಿ ಬಣ್ಣದ ಚೀಲಗಳು ಪತ್ತೆಯಾಗಿವೆ. ಚೀಲಗಳು ಯಾರದ್ದು ಎಂದು ಪ್ರಯಾಣಿಕರನ್ನು ವಿಚಾರಿಸಿದರೂ ಯಾರೂ ಮುಂದೆ ಬಂದಿಲ್ಲ. ಅನುಮಾನಗೊಂಡ ಪೊಲೀಸರು ಎರಡೂ ಚೀಲಗಳನ್ನು ರೈಲಿನಿಂದ ಕೆಳಗಿಳಿಸಿ ಪರಿಶೀಲಿಸಿದಾಗ ಅವುಗಳಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇಣಿಗೆ ಕೊರತೆಯಿಂದ ಅಯೋಧ್ಯೆಯಲ್ಲಿ ಭವ್ಯ ಮಸೀದಿ ನಿರ್ಮಾಣ ಯೋಜನೆ ಕೈಬಿಟ್ಟ ಟ್ರಸ್ಟ್ ಎರಡು ಚೀಲಗಳ ಪೈಕಿ ಒಂದರಲ್ಲಿ 5.64 ಲಕ್ಷ ರೂ. ಮೌಲ್ಯದ 11.700 ಕೆಜಿ ಗಾಂಜಾ, ಮತ್ತೊಂದರಲ್ಲಿ 3.92 ಲಕ್ಷ ರೂ. ಮೌಲ್ಯದ 7.600 ಕೆಜಿ ಗಾಂಜಾ ಪತ್ತೆಯಾಗಿದೆ. ಒಟ್ಟಾರೆ 9.56 ಲಕ್ಷ ರೂ. ಮೌಲ್ಯದ 19.300 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆದರೆ, ಈ ಗಾಂಜಾ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಯಾರು ಸಾಗಿಸುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ತನಿಖಾಧಿಕಾರಿ ಬಿ.ಎನ್. ರಾಮನಗೌಡ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ʼಯುವಜನತೆಯಿಂದಲೇ ನಾವು ಸ್ಟಾರ್ ಆಗಿರೋದು, Gen-Zಗಳನ್ನು ಗೌರವಿಸಿʼ – ಕಂಗನಾ ಹೇಳಿಕೆಗೆ ಸೋನು ಸೂದ್ ತಿರುಗೇಟು