ಬಾಕ್ಸಿಂಗ್ನಲ್ಲಿ ಒಂಬತ್ತು ಪದಕಗಳ ಭರವಸೆ
ಗ್ಲಾಸ್ಗೊ : ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಒಂಬತ್ತು ಪದಕಗಳು ಲಭಿಸುವುದು ಬಹುತೇಕ ಖಚಿತವಾಗಿದೆ. ಸಾಕ್ಷಿ ಚೌಧರಿ(51 ಕೆ.ಜಿ), ಅರುಂಧತಿ ಚೌಧರಿ (70ಕೆ.ಜಿ), ಸಚಿನ್ ಸಿವಾಚ್ (60 ಕೆ.ಜಿ), ಅಂಕುಶ್ ಪಂಘಲ್ (80 ಕೆ.ಜಿ), ನರೆಂದರ್ ಬರ್ವಾಲ್ (+90ಕೆ.ಜಿ), ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ), ಪ್ರಿಯಾ ಗಂಗಾಸ್ (60 ಕೆ.ಜಿ),

ಗ್ಲಾಸ್ಗೊ : ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಒಂಬತ್ತು ಪದಕಗಳು ಲಭಿಸುವುದು ಬಹುತೇಕ ಖಚಿತವಾಗಿದೆ. ಸಾಕ್ಷಿ ಚೌಧರಿ(51 ಕೆ.ಜಿ), ಅರುಂಧತಿ ಚೌಧರಿ (70ಕೆ.ಜಿ), ಸಚಿನ್ ಸಿವಾಚ್ (60 ಕೆ.ಜಿ), ಅಂಕುಶ್ ಪಂಘಲ್ (80 ಕೆ.ಜಿ), ನರೆಂದರ್ ಬರ್ವಾಲ್ (+90ಕೆ.ಜಿ), ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ), ಪ್ರಿಯಾ ಗಂಗಾಸ್ (60 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ) ಮತ್ತು ಜಾದುಮಣಿ ಸಿಂಗ್ (55 ಕೆ.ಜಿ) ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಬಾಕ್ಸಿಂಗ್ ತಂಡವು ಏಳು ಪದಕ ಜಯಿಸಿತ್ತು. ಅದರಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಇದ್ದವು. ಇದೀಗ ಆ ದಾಖಲೆಯನ್ನು ಮೀರುವುದು ಖಚಿತವಾಗಿದೆ. ಮಹಿಳೆಯರ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಸಾಕ್ಷಿ ಚೌಧರಿ ಅವರು 5–0ಯಿಂದ ಐರ್ಲೆಂಡ್ನ ಕೇಟಲಿನ್ ಫ್ರೆಯರ್ಸ್ ವಿರುದ್ಧ ಗೆದ್ದರು. ಅರುಂಧತಿ 3–1ರಿಂದ ನ್ಯೂಜಿಲೆಂಡ್ನ ಮಾರ್ಗನ್ ಹಿಂಡರ್ಸನ್ ವಿರುದ್ಧ ಜಯಿಸಿದರು. ಪುರುಷರ ವಿಭಾಗದಲ್ಲಿ; ಸಚಿನ್ ಸಿವಾಚ್ ಅವರು ಬೋತ್ಸವಾನಾದ ಟ್ರೆಸರ್ ಮೊರೆಮಿ ಅವರನ್ನು 5–0ಯಿಂದ ಸೋಲಿಸಿದರು. ಅಂಕುಶ್ 5–0ಯಿಂದ ಜಿಡ್ ಮಿಕಾಕ್ ವಿರುದ್ಧ ಮೇಲುಗೈ ಸಾಧಿಸಿದರು. ನರೆಂದರ್ ಬೆರ್ವಾಲ್ 3–2ರಿಂದ ಸಮೋವಾದ ಮೈಕೆಲ್ ವಿರುದ್ಧ ರೋಚಕ ಜಯ ಸಾಧಿಸಿದರು.