200 ಮೀ. ಓಟ: ಅನಿಮೇಶ್ ಸೆಮಿಗೆ
ಗ್ಲಾಸ್ಗೊ: ಭಾರತದ ಭರವಸೆಯ ಓಟಗಾರ ಅನಿಮೇಶ್ ಕುಜೂರ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 200 ಮೀ. ಸ್ಪರ್ಧೆಯಲ್ಲಿ ಬುಧವಾರ ಸೆಮಿಫೈನಲ್ಗೆ ಮುನ್ನಡೆದರು.23 ವರ್ಷ ವಯಸ್ಸಿನ ಅನಿಮೇಶ್ ನಾಲ್ಕನೇ ಹೀಟ್ಸ್ನಲ್ಲಿ ಮೊದಲಿಗರಾಗಿ (20.46 ಸೆಕೆಂಡು) ಗುರಿ ತಲುಪಿದರು. ಎಲ್ಲ 10 ಹೀಟ್ಸ್ಗಳ ನಂತರ ಅರ್ಹತೆ ಗಳಿಸಿದ ಒಟ್ಟು 16 ಅಥ್ಲೀಟ್ಗಳಲ್ಲಿ ಅವರು 7ನೇ ಸ್ಥಾನ ಪ

ಗ್ಲಾಸ್ಗೊ: ಭಾರತದ ಭರವಸೆಯ ಓಟಗಾರ ಅನಿಮೇಶ್ ಕುಜೂರ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 200 ಮೀ. ಸ್ಪರ್ಧೆಯಲ್ಲಿ ಬುಧವಾರ ಸೆಮಿಫೈನಲ್ಗೆ ಮುನ್ನಡೆದರು.23 ವರ್ಷ ವಯಸ್ಸಿನ ಅನಿಮೇಶ್ ನಾಲ್ಕನೇ ಹೀಟ್ಸ್ನಲ್ಲಿ ಮೊದಲಿಗರಾಗಿ (20.46 ಸೆಕೆಂಡು) ಗುರಿ ತಲುಪಿದರು. ಎಲ್ಲ 10 ಹೀಟ್ಸ್ಗಳ ನಂತರ ಅರ್ಹತೆ ಗಳಿಸಿದ ಒಟ್ಟು 16 ಅಥ್ಲೀಟ್ಗಳಲ್ಲಿ ಅವರು 7ನೇ ಸ್ಥಾನ ಪಡೆದರು. ಇದು ಈ ಋತುವಿನಲ್ಲಿ ಅನಿಮೇಶ್ ಅವರ ಉತ್ತಮ ವೇಗವಾಗಿದೆ.ಛತ್ತೀಸಗಢದ ಓಟಗಾರ 200 ಮೀ.ನಲ್ಲಿ ರಾಷ್ಟ್ರೀಯ ದಾಖಲೆಯ (20.32 ಸೆ.) ಒಡೆಯನೂ ಆಗಿದ್ದಾರೆ. ಈ ಕೂಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಛಲದಲ್ಲಿದ್ದಾರೆ.
Read the complete story at Prajavani