ಅಭಿಮಾನಿಯಿಂದ ಸಿದ್ದಾರೂಢ ಪ್ರತಿಮೆ ಗಿಫ್ಟ್ – ಶೂ ಕಳಚಿಟ್ಟು ಸ್ವೀಕರಿಸಿದ ಅಲ್ಲು ಅರ್ಜುನ್
ಜುಲೈ 28 ರಂದು ಹೈದರಾಬಾದ್ನಲ್ಲಿ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ವಿವಿಧ ಕಡೆಗಳಿಂದ ಬಂದಿದ್ದ ತಮ್ಮ ಅಭಿಮಾನಿಗಳನ್ನು ನೇರವಾಗಿ ಭೇಟಿಯಾದರು. ಈ ಕಾರ್ಯಕ್ರಮಕ್ಕೆ ಹೋಗಿದ್ದ ಉತ್ತರ ಕರ್ನಾಟಕದ ಅಭಿಮಾನಿಯೊಬ್ಬರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ(Siddharoodha Swamiji) ಪುಟ್ಟ ಮೂರ್ತಿಯನ್ನು ಅಲ್ಲು ಅರ್ಜುನ್ ಅವರಿಗೆ ಉಡುಗೊರೆಯಾಗಿ

ಜುಲೈ 28 ರಂದು ಹೈದರಾಬಾದ್ನಲ್ಲಿ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ವಿವಿಧ ಕಡೆಗಳಿಂದ ಬಂದಿದ್ದ ತಮ್ಮ ಅಭಿಮಾನಿಗಳನ್ನು ನೇರವಾಗಿ ಭೇಟಿಯಾದರು. ಈ ಕಾರ್ಯಕ್ರಮಕ್ಕೆ ಹೋಗಿದ್ದ ಉತ್ತರ ಕರ್ನಾಟಕದ ಅಭಿಮಾನಿಯೊಬ್ಬರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ(Siddharoodha Swamiji) ಪುಟ್ಟ ಮೂರ್ತಿಯನ್ನು ಅಲ್ಲು ಅರ್ಜುನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಿದ್ಧಾರೂಢ ಸ್ವಾಮಿಗಳ ಮಹಿಮೆಯ ಬಗ್ಗೆ ಅಭಿಮಾನಿ ತಿಳಿಸಿದಾಗ ಅಲ್ಲು ಅರ್ಜುನ್ ಅವರು ತಕ್ಷಣವೇ ತಮ್ಮ ಶೂ ಕಳಚಿಟ್ಟು, ಅತ್ಯಂತ ಗೌರವದಿಂದ ಆ ಗಾಜಿನ ಬಾಕ್ಸ್ನಲ್ಲಿದ್ದ ಮೂರ್ತಿಯನ್ನು ಸ್ವೀಕರಿಸಿದರು. ಆ ಪವಿತ್ರ ಮೂರ್ತಿಯನ್ನು ಜಾಗರೂಕತೆಯಿಂದ ಹಾಗೂ ಜತನದಿಂದ ಎತ್ತಿಡುವಂತೆ ಅಲ್ಲು ಅರ್ಜುನ್ ಅವರು ತಮ್ಮ ಜೊತೆಗಿದ್ದ ಸಿಬ್ಬಂದಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಲಿದೆ ‘ರಾಮಾಯಣ’ ಟ್ರೈಲರ್ ಅಲ್ಲು ಅರ್ಜುನ್ ಅವರು ದೇವತಾ ಮೂರ್ತಿಗೆ ತೋರಿಸಿದ ಈ ಗೌರವದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.