ನಾಳೆಯಿಂದಲೇ ರಾಜ್ಯಾದ್ಯಂತ ಕಾವೇರಿ ಹೋರಾಟ – ಶುಕ್ರವಾರ ಕರ್ನಾಟಕ ಬಂದ್ ಭವಿಷ್ಯ
– ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳ ಎಚ್ಚರಿಕೆ ಸಂದೇಶ ಬೆಂಗಳೂರು: ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೊತ್ತಿಕೊಂಡಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕನ್ನಡಪರ ಸಂಘಟನೆಗಳೂ (Pro Kannada Organisation) ಎಚ್ಚರಿಕೆ ಸಂದೇಶ ರವಾನಿಸಿವೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ರೈತ ಹೋರಾಟಕ್ಕೆ ಕೈಜೋಡಿಸಿವೆ. ಬೆಂಗಳೂರಿನ ಫ್ರೀಡಂಪಾರ್

– ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳ ಎಚ್ಚರಿಕೆ ಸಂದೇಶ ಬೆಂಗಳೂರು: ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೊತ್ತಿಕೊಂಡಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕನ್ನಡಪರ ಸಂಘಟನೆಗಳೂ (Pro Kannada Organisation) ಎಚ್ಚರಿಕೆ ಸಂದೇಶ ರವಾನಿಸಿವೆ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ರೈತ ಹೋರಾಟಕ್ಕೆ ಕೈಜೋಡಿಸಿವೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ (Freedom Park) ಪ್ರತಿಭಟನೆ ನಡೆಸಿದ ಕರವೇ ನಾರಾಯಣಗೌಡ (Narayana Gowda) ಬಣ ನಾಳೆಯಿಂದಲೇ ರಾಜ್ಯಾದ್ಯಂತ ಕಾವೇರಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಕಾವೇರಿ ಉಳಿಸಿ, ಕರ್ನಾಟಕ ಉಳಿಸಿ ಅಭಿಯಾನದಡಿ ಹೋರಾಟ ನಡೆಸಿದ್ದು, CWRC ತೀರ್ಪನ್ನು ಯಾವುದೇ ಕಾರಣಕ್ಕೂ ಸರ್ಕಾರ ಒಪ್ಪಬಾರದು. ತಮಿಳುನಾಡು ಲಾಬಿಗೆ ಮಣಿದರೆ ಹುಷಾರ್, ರಾಜ್ಯದಲ್ಲಿ 1991ರ ಹೋರಾಟ ನೆನಪು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಬಂದ್ಗೆ ಕನ್ನಡಪರ ಸಂಘಟನೆ ನಿರ್ಧಾರ: ಕಾವೇರಿ ಕಿಚ್ಚು ಹೊತ್ತಿಕೊಂಡ ಬೆನ್ನಲ್ಲೇ ಅಖಂಡ ಕರ್ನಾಟಕ ಬಂದ್ (Karnataka Bandh) ಫಿಕ್ಸ್ ಆಗಿದೆ. ನಾಡಿದ್ದು ಕರ್ನಾಟಕ ಬಂದ್ ಭವಿಷ್ಯ ತೀರ್ಮಾನ ಆಗಲಿದೆ. ರಾಜ್ಯ ಬಂದ್ಗೆ ಕನ್ನಡಪರ ಸಂಘಟನೆಗಳು ನಿರ್ಧಾರ ಮಾಡಿದ್ದು, ನಾಡಿದ್ದು ಬಂದ್ ಬಗ್ಗೆ ಹೈವೋಲ್ಟೇಜ್ ಸಭೆ ನಡೆಸಲಾಗುತ್ತದೆ. ಕನ್ನಡಪರ ಸಂಘಟನೆ ಸಭೆಯಲ್ಲಿ ಕರ್ನಾಟಕ ಬಂದ್ ದಿನಾಂಕ ನಿಗದಿ ಆಗಲಿದೆ. ರಾಜ್ಯದಲ್ಲಿ ತೀವ್ರ ಬರದ ಮಧ್ಯೆ ತಮಿಳುನಾಡಿಗೆ ನೀರು ಹರಿಸಲಾಗದು ಅಂತಾ ಕನ್ನಡ ಪರ ಸಂಘಟನೆ ಮುಖಂಡರು ಬೆಂಕಿ ಉಗುಳಿದರು. ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸು ಅವೈಜ್ಞಾನಿಕ ಆಗಿದೆ. CWRC ಶಿಫಾರಸ್ಸನ್ನು ಒಪ್ಪಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲ್ಲ ಎಂದರು. ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆ ಹೋರಾಟ: ಕಾವೇರಿ ನೀರು ಹರಿಸುವ ಬಗ್ಗೆ CWRC ಆದೇಶದ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಲ್ಲೇಶ್ವರಂನಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಫ್ರೀಡಂ ಪಾರ್ಕ್ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿದ್ರೆ, ಇನ್ನೊಂದೆಡೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ಪಕ್ಷ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.. ತಮಿಳುನಾಡಿಗೆ ಕಾವೇರಿ ನೀರು ಬಿಡಲು ಒಪ್ಪದ ಸರ್ಕಾರ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಒಪ್ಪದ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. CWRC ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ ವಿಚಾರದಲ್ಲಿ ನೀರು ಬಿಡಲು ಆದೇಶ ಕೊಟ್ಟಿದ್ದಾರೆ. ಆದರೆ, ನಮಗೆ ವರುಣ ಕೃಪೆ ತೋರಿಸಿಲ್ಲ. ಎರಡು ಬಾರಿ ತಮಿಳುನಾಡು ಮನವಿ ತಿರಸ್ಕರಿತ್ತು. ಈ ಬಾರಿ ನೀರು ಬಿಡಲು ಹೇಳಿದ್ದಾರೆ. ನಾವು ಇದನ್ನು ಪ್ರಶ್ನೆ ಮಾಡಲು ನಿರ್ಧರಿಸಿದ್ದೇವೆ. ವಿಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ. ತಮಿಳುನಾಡು ಸಿಎಂ ಕೂಡಾ ಬಂದು ಮಾತನಾಡುತ್ತಾರೆ. ಮಾತನಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರಿಗೆ ನಮ್ಮ ರಾಜ್ಯದ ಜಲ ಪ್ರದೇಶಗಳನ್ನು ನೋಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಇನ್ನು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇನ್ಮನವಿ ಬಗ್ಗೆ ಜಲಸಂಪನ್ಮೂಲ ಅಧಿಕಾರಿಗಳ ಜೊತೆಗೆ ರಾಮಲಿಂಗಾ ರೆಡ್ಡಿ ಸಭೆ ನಡೆಸಿದರು. ಈ ಸಭೆ ಬಳಿಕ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡುವುದಕ್ಕೆ ಆಗಲ್ಲ ಎಂದರು. ಈಗ ಪ್ರತಿನಿತ್ಯ 3,500 ಕ್ಯೂಸೆಕ್, 15 ದಿನಕ್ಕೆ 4.5 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ 44 ಟಿಎಂಸಿ ಮಾತ್ರ ಇದೆ. 15 ದಿನ ತಮಿಳುನಾಡಿಗೆ ನೀರು ಬಿಟ್ಟರೆ 4.56 ಟಿಎಂಸಿ ಖಾಲಿ ಆಗುತ್ತೆ. ಇನ್ನೊಂದು ಮಗ್ಗಲಿನಲ್ಲಿ ತಮಿಳುನಾಡಿನ ಡ್ಯಾಂಗಳಲ್ಲಿ 41 ಟಿಎಂಸಿ ನೀರು ಇದೆ. ಅವರೂ ಕೂಡಾ 40 ದಿನಗಳ ಕಾಲ ಬಳಸಬಹುದು. ನಮ್ಮಲ್ಲಿ ಲಭ್ಯತೆಯಿರುವ ನೀರು ಕುಡಿಯುವುದಕ್ಕೆ ಸಾಕಾಗಲ್ಲ. ಆದ್ದರಿಂದ ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸದ್ಯ ಸಿಡಬ್ಲೂಆರ್ಸಿ ಆದೇಶ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮಂಡ್ಯ ಜಿಲ್ಲೆಯ 7 ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ 83%ರಷ್ಟು ಮಳೆಯ ಕೊರತೆ ಆಗಿದೆ. ಈ ಸಂದರ್ಭದಲ್ಲಿ ಮಳೆ ಬರದಿದ್ರೆ ಬೆಂಗಳೂರು ಸೇರಿ ಮಂಡ್ಯ, ಮೈಸೂರಿಗೆ ಆತಂಕ ಎದುರಾಗಿದೆ. ವಸ್ತುಸ್ಥಿತಿಯನ್ನು ನಿಮ್ಮ ಪಬ್ಲಿಕ್ ಟಿವಿ ಗ್ರೌಂಡ್ ರಿಯಾಲಿಟಿ ಮೂಲಕ ತೆರೆದಿಟ್ಟಿದೆ. ಒಟ್ಟಿನಲ್ಲಿ ಕೆಆರ್ಎಸ್ನಲ್ಲಿ ಪರಿಸ್ಥಿತಿ ಹೀಗಿದ್ದಾಗ ನೀರು ಹರಿಸುವುದಕ್ಕೆ ಹೇಗೆ ತಾನೇ ಸಾಧ್ಯ ಎನ್ನುವುದು ಕಾವೇರಿ ಕೊಳ್ಳದ ರೈತರ ಪ್ರಶ್ನೆಯಾಗಿದೆ.