ಐ.ಟಿ ಕಂಪನಿಗಳ ಷೇರು ಖರೀದಿಗೆ ಹೂಡಿಕೆದಾರರ ಆಸಕ್ತಿ: ಸೆನ್ಸೆಕ್ಸ್ ಜಿಗಿತ
ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್, ಎಲ್ ಆ್ಯಂಡ್ ಟಿ, ಇನ್ಫೊಸಿಸ್ ಕಂಪನಿಗಳ ಷೇರು ಖರೀದಿ ಹೆಚ್ಚಳ ಮತ್ತು ವಿದೇಶಿ ಬಂಡವಾಳದ ಒಳಹರಿವಿನಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 888 ಅಂಶ ಹೆಚ್ಚಳವಾಗಿ, 77,654ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ ಸೂಚ್ಯಂಕವ

ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್, ಎಲ್ ಆ್ಯಂಡ್ ಟಿ, ಇನ್ಫೊಸಿಸ್ ಕಂಪನಿಗಳ ಷೇರು ಖರೀದಿ ಹೆಚ್ಚಳ ಮತ್ತು ವಿದೇಶಿ ಬಂಡವಾಳದ ಒಳಹರಿವಿನಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 888 ಅಂಶ ಹೆಚ್ಚಳವಾಗಿ, 77,654ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ ಸೂಚ್ಯಂಕವು 999 ಅಂಶದವರೆಗೆ ಜಿಗಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 264 ಅಂಶ ಏರಿಕೆಯಾಗಿ, 24,250ಕ್ಕೆ ಕೊನೆಗೊಂಡಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 3.79ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್ ಬೆಲೆ 87.28 ಡಾಲರ್ ಆಗಿದೆ.ಹಿಂದುಸ್ತಾನ್ ಯೂನಿಲಿವರ್ ಕಂಪನಿಯ ಷೇರಿನ ಮೌಲ್ಯ ಶೇ 4.70ರಷ್ಟು ಏರಿಕೆಯಾಗಿದೆ. ಇನ್ಫೊಸಿಸ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಟ್ರೆಂಟ್, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಟಿಸಿಎಸ್, ಎಚ್ಸಿಎಲ್ ಟೆಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನ ಷೇರಿನ ಮೌಲ್ಯ ಏರಿಕೆ ಆಗಿದೆ.ಅದಾನಿ ಪೋರ್ಟ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಪವರ್ ಗ್ರಿಡ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಎನ್ಟಿಪಿಸಿ ಷೇರಿನ ಮೌಲ್ಯದಲ್ಲಿ ಇಳಿಕೆ ಆಗಿದೆ.‘ಕಂಪನಿಗಳ ಜೂನ್ ತ್ರೈಮಾಸಿಕದ ಗಳಿಕೆ, ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳ ನಿರಂತರ ಖರೀದಿ, ರೂಪಾಯಿ ಮೌಲ್ಯದ ಏರಿಕೆಯು ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಉತ್ತೇಜನ ನೀಡಿದವು. ಇದು ಸೂಚ್ಯಂಕಗಳ ಏರಿಕೆಗೆ ನೆರವಾದವು’ ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.ಷೇರುಪೇಟೆಗಳಲ್ಲಿ ನಡೆದ ಉತ್ತಮ ವಹಿವಾಟಿನ ಕಾರಣದಿಂದಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು 6 ಪೈಸೆಯಷ್ಟು ಬಲ ಪಡೆದುಕೊಂಡಿದೆ.Highlights - nullCut-off box - ಐ.ಟಿ ಕಂಪನಿಗಳ ಕಡೆ ಗಮನ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗಿದ್ದರೂ ದೇಶದ ಷೇರುಪೇಟೆಗಳಲ್ಲಿ ತೇಜಿ ವಹಿವಾಟು ನಡೆದಿದೆ. ಸಾಂಪ್ರದಾಯಿಕವಾದ ಐ.ಟಿ ಷೇರುಗಳ ಖರೀದಿಗೆ ಹೂಡಿಕೆದಾರರು ಮತ್ತೆ ಗಮನ ನೀಡಿದ್ದುದು ಇದಕ್ಕೆ ಒಂದು ಕಾರಣ ಎಂದು ಈಕ್ವಿರಸ್ ವೆಲ್ತ್ನ ವ್ಯವಸ್ಥಾಪಕ ನಿರ್ದೇಶಕ ಅಂಕುರ್ ಪೂಂಜ್ ಹೇಳಿದ್ದಾರೆ. ನಿಫ್ಟಿ ಐ.ಟಿ ಸೂಚ್ಯಂಕವು ಈ ತಿಂಗಳಿನಲ್ಲಿ ಶೇ 17ರಷ್ಟು ಏರಿಕೆ ಕಂಡಿದೆ. ಹೆಚ್ಚಿನ ಐ.ಟಿ. ಕಂಪನಿಗಳ ಜೂನ್ ತ್ರೈಮಾಸಿಕದ ಫಲಿತಾಂಶವು ಅಂದಾಜಿಗೆ ಅನುಗುಣವಾಗಿಯೇ ಇದ್ದವು. ಇದರಿಂದಾಗಿ ಈ ಕಂಪನಿಗಳ ವಿಚಾರದಲ್ಲಿ ಹೂಡಿಕೆದಾರರಿಗೆ ಮತ್ತೆ ವಿಶ್ವಾಸ ಮೂಡಿದೆ ಎಂದು ಅವರು ವಿವರಿಸಿದ್ದಾರೆ.