ವಿಜಯಪುರ ವಿಮಾನನಿಲ್ದಾಣಕ್ಕೆ ‘ಹಸಿರು’ನಿಶಾನೆ: ಎಂ.ಬಿ.ಪಾಟೀಲ
ಬೆಂಗಳೂರು: ‘ವಿಜಯಪುರ ವಿಮಾನನಿಲ್ದಾಣಕ್ಕೆ ಇದ್ದ ಪರಿಸರ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ನಿವಾರಿಸಿದ್ದು, ಮೂರು ತಿಂಗಳ ಒಳಗೆ ನಿಲ್ದಾಣ ಕಾರ್ಯಾರಂಭ ಮಾಡಲಿದೆ’ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಖಾಸಗಿ, ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊ

ಬೆಂಗಳೂರು: ‘ವಿಜಯಪುರ ವಿಮಾನನಿಲ್ದಾಣಕ್ಕೆ ಇದ್ದ ಪರಿಸರ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ನಿವಾರಿಸಿದ್ದು, ಮೂರು ತಿಂಗಳ ಒಳಗೆ ನಿಲ್ದಾಣ ಕಾರ್ಯಾರಂಭ ಮಾಡಲಿದೆ’ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಖಾಸಗಿ, ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಪರಿಸರ ಸಂಬಂಧಿತ ಅನುಮೋದನೆಗಳನ್ನು ತೆಗೆದುಕೊಳ್ಳಬೇಕು. ನಿಯಮ ಪಾಲಿಸದ ದೇಶದ ಎಲ್ಲಾ ಯೋಜನೆಗಳನ್ನೂ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ 2025ರಲ್ಲೇ ಆದೇಶಿಸಿತ್ತು. ವಿಜಯಪುರ ವಿಮಾನನಿಲ್ದಾಣಕ್ಕೂ ಸಂಕಷ್ಟ ಎದುರಾಗಿತ್ತು. ಈಗ ಅಂತಿಮ ತೀರ್ಪು ಎಲ್ಲ ಅಡೆತಡೆ ನಿವಾರಿಸಿ, ಶಾಶ್ವತ ವಿನಾಯಿತಿ ನೀಡಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ₹614 ಕೋಟಿ ವೆಚ್ಚದಲ್ಲಿ ಒದಗಿಸಿರುವ ನಿಲ್ದಾಣದ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ’ ಎಂದರು.‘ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ವರದಾನವಾಗಿದೆ. ಯೋಜನೆಯ ಸಾರ್ವಜನಿಕ ಹಿತಾಸಕ್ತಿ ತಿಳಿದುಕೊಂಡು ತೀರ್ಪು ನೀಡಿದ್ದಾರೆ. ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕೀಲರಾದ ಕಪಿಲ್ ಸಿಬಲ್, ನಿಶಾಂತ್ ಪಾಟೀಲ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ರಾಜ್ಯದ ಪರವಾಗಿ ಶ್ರಮಿಸಿದ್ದರು’ ಎಂದು ಮಾಹಿತಿ ನೀಡಿದರು.