ಟೆಸ್ಟ್: ವಿಂಡೀಸ್ ದಾಳಿಗೆ ಮಣಿದ ಪಾಕ್
ಟರೊಬಾ, ಟ್ರಿನಿಡಾಡ್ ಮತ್ತು ಟೊಬಾಗೊ (ಎಎಫ್ಪಿ): ಜೇಡನ್ ಸ್ಟೀಲ್ಸ್ (20ಕ್ಕೆ5) ಮತ್ತು ಜಸ್ಟಿನ್ ಗ್ರೀವ್ಸ್ (12ಕ್ಕೆ2) ಅವರ ದಾಳಿಯ ಮುಂದೆ ಪಾಕಿಸ್ತಾನ ತಂಡವು ಮುಗ್ಗಿರಿಸಿತು. ಇದರೊಂದಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್ನಲ್ಲಿ 90 ರನ್ಗಳ ಜಯ ದಾಖಲಿಸಿತು. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ 211 ರನ್ಗಳ ಗೆಲುವಿನ

ಟರೊಬಾ, ಟ್ರಿನಿಡಾಡ್ ಮತ್ತು ಟೊಬಾಗೊ (ಎಎಫ್ಪಿ): ಜೇಡನ್ ಸ್ಟೀಲ್ಸ್ (20ಕ್ಕೆ5) ಮತ್ತು ಜಸ್ಟಿನ್ ಗ್ರೀವ್ಸ್ (12ಕ್ಕೆ2) ಅವರ ದಾಳಿಯ ಮುಂದೆ ಪಾಕಿಸ್ತಾನ ತಂಡವು ಮುಗ್ಗಿರಿಸಿತು. ಇದರೊಂದಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್ನಲ್ಲಿ 90 ರನ್ಗಳ ಜಯ ದಾಖಲಿಸಿತು. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ 211 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಪಾಕ್ ತಂಡವು 40.2 ಓವರ್ಗಳಲ್ಲಿ 120 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಎರಡು ಟೆಸ್ಟ್ಗಳ ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಸಾಧಿಸಿದರು.ಪಾಕ್ ತಮಡವು 71 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ನಾಯಕ ಬಾಬರ್ ಆಜಂ (ಔಟಾಗದೇ 58) ಅವರೊಂದಿಗೆ ನೆಲಕಚ್ಚಿ ಆಡಿದ ಮೊಹಮ್ಮದ್ ಅಬ್ಬಾಸ್ (23; 33ಎ) ಅವರು ಕೊನೆಯ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿದರು. ಇದಕ್ಕೂ ಮುನ್ನ ಅಬ್ಬಾಸ್ ಅವರು ಬೌಲಿಂಗ್ನಲ್ಲಿಯೂ ಮಿಂಚಿದ್ದರು. ಐದು ವಿಕೆಟ್ ಗೊಂಚಲು ಗಳಿಸಿದ್ದರು. ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 98.5 ಓವರ್ಗಳಲ್ಲಿ 311. ಪಾಕಿಸ್ತಾನ: 80.1 ಓವರ್ಗಳಲ್ಲಿ 282. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 54.5 ಓವರ್ಗಳಲ್ಲಿ 181 (ತೇಜನಾರಾಯಣ್ ಚಂದ್ರಪಾಲ್ 35, ಶಾಮರ್ ಜೋಸೆಫ್ 38, ಮೊಹಮ್ಮದ್ ಅಬ್ಬಾಸ್ 22ಕ್ಕೆ5, ಖುರ್ರಂ ಶೆಹಜಾಜ್ 54ಕ್ಕೆ2, ಮೊಹಮ್ಮದ್ ಅಲಿ 52ಕ್ಕೆ2) ಪಾಕಿಸ್ತಾನ:40.2 ಓವರ್ಗಳಲ್ಲಿ 120 (ಬಾಬರ್ ಆಜಂ ಔಟಾಗದೇ 58, ಮೊಹಮ್ಮದ್ ಅಬ್ಬಾಸ್ 23, ಕೆಮರ್ ರೋಚ್ 27ಕ್ಕೆ2, ಜೇಡನ್ ಸ್ಟೀಲ್ಸ್ 20ಕ್ಕೆ5, ಜಸ್ಟಿನ್ ಗ್ರೀವ್ಸ್ 12ಕ್ಕೆ2) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 90 ರನ್ ಜಯ. ಪಂದ್ಯದ ಆಟಗಾರ: ಜಸ್ಟಿನ್ ಗ್ರೀವ್ಸ್. Cut-off box - ಐದು ಮೇಡನ್ ಐದು ವಿಕೆಟ್ ವೆಸ್ಟ್ ಇಂಡೀಸ್ ತಂಡದ ಮಧ್ಯಮವೇಗಿ ಜಸ್ಟಿನ್ ಗ್ರೀವ್ಸ್ ಅವರು ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಐದು ಮೇಡನ್ ಓವರ್ಗಳಲ್ಲಿ ಐದು ವಿಕೆಟ್ ಗಳಿಸಿದ ದಾಖಲೆಯನ್ನು ಬರೆದರು. ಅವರು ಇನಿಂಗ್ಸ್ನಲ್ಲಿ ಒಟ್ಟು 11 ಓವರ್ ಬೌಲಿಂಗ್ ಮಾಡಿದರು. ಅದರಲ್ಲಿ 6 ಮೇಡನ್ ಆದವು. 27 ರನ್ ನೀಡಿ 5 ವಿಕೆಟ್ ಪಡೆದರು. ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಅವರ ನಾಲ್ಕು ಮೇಡನ್ ನಾಲ್ಕು ವಿಕೆಟ್ ದಾಖಲೆಯನ್ನು 32 ವರ್ಷದ ಗ್ರೀವ್ಸ್ ಮೀರಿನಿಂತರು.