ಕಾಮನ್ವೆಲ್ತ್ ಟಿ.ಟಿ: ಭಾರತ ತಂಡಗಳು ಫೈನಲ್ಗೆ
ನವದೆಹಲಿ: ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಇಲ್ಲಿ ನಡೆಯುತ್ತಿರುವ 22ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಬುಧವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದವು.ಅಜೇಯ ಓಟ ಮುಂದುವರಿಸಿದ ಪುರುಷರ ತಂಡವು ಸೆಮಿಫೈನಲ್ನಲ್ಲಿ 3–0ಯಿಂದ ಇಂಗ್ಲೆಂಡ್ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಮಾನುಷ್ ಶಾ 11-9, 11-9, 11-6ರಿಂದ ಕಾನರ್ ಗ್ರೀನ್ ವಿರ

ನವದೆಹಲಿ: ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಇಲ್ಲಿ ನಡೆಯುತ್ತಿರುವ 22ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಬುಧವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದವು.ಅಜೇಯ ಓಟ ಮುಂದುವರಿಸಿದ ಪುರುಷರ ತಂಡವು ಸೆಮಿಫೈನಲ್ನಲ್ಲಿ 3–0ಯಿಂದ ಇಂಗ್ಲೆಂಡ್ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಮಾನುಷ್ ಶಾ 11-9, 11-9, 11-6ರಿಂದ ಕಾನರ್ ಗ್ರೀನ್ ವಿರುದ್ಧ; ಮಾನವ್ ಠಕ್ಕರ್ 11-8, 11-4, 11-5ರಿಂದ ಜೋಸೆಫ್ ಹಂಟರ್ ವಿರುದ್ಧ ಮತ್ತು ಅನುಭವಿ ಹರ್ಮೀತ್ ದೇಸಾಯಿ 11-5, 11-5, 11-5ರಿಂದ ಬೆಂಜಮಿನ್ ಪಿಗೊಟ್ ವಿರುದ್ಧ ಗೆಲುವು ಸಾಧಿಸಿದರು. ಅಗ್ರಶ್ರೇಯಾಂಕ ಪಡೆದಿರುವ ಭಾರತ ಪುರುಷರ ತಂಡದ ಆಟಗಾರರು ಈವರೆಗಿನ ಮುಖಾಮುಖಿಗಳಲ್ಲಿ ಒಂದರಲ್ಲೂ ಸೋತಿಲ್ಲ.ಮಹಿಳೆಯರ ತಂಡವು ನಾಲ್ಕರ ಘಟ್ಟದಲ್ಲಿ 3–1ರಿಂದ ಇಂಗ್ಲೆಂಡ್ ವನಿತೆಯರ ತಂಡದ ಸವಾಲನ್ನು ಮೆಟ್ಟಿನಿಂತಿತು.ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಶ್ರೀಜಾ ಅಕುಲಾ ಅವರು ಮೊದಲ ಮುಖಾಮುಖಿಯಲ್ಲಿ 11-6, 11-3, 11-9ರಿಂದ ಚ್ಯೂಕ್ ಲಾಮ್ ಜಾಸ್ಮಿನ್ ವಾಂಗ್ ವಿರುದ್ಧ ಗೆದ್ದರು. ಆದರೆ, ಕನ್ನಡತಿ ಯಶಸ್ವಿನಿ ಘೋರ್ಪಡೆ 9–11, 6–11, 7–11ರಿಂದ ಟಿನ್–ಟಿನ್ ಹೋ ವಿರುದ್ಧ ಪರಾಭವಗೊಂಡರು. ಮೂರನೇ ಮುಖಾಮುಖಿಯಲ್ಲಿ ಸಿಂಡ್ರೆಲಾ ದಾಸ್ 11-7, 11-4, 11-9ರಿಂದ ಗೆದ್ದು, ಪಂದ್ಯವನ್ನು ಭಾರತದ ಹಿಡಿತಕ್ಕೆ ತಂದುಕೊಟ್ಟರು.ನಿರ್ಣಾಯಕ ಮುಖಾಮುಖಿಯಲ್ಲಿ ಮತ್ತೆ ಕಣಕ್ಕಿಳಿದ ಶ್ರೀಜಾ, 11-8, 5-11, 11-6, 8-11, 11-9ರಿಂದ ಟಿನ್–ಟಿನ್ ವಿರುದ್ಧ ರೋಚಕ ಜಯ ಸಾಧಿಸಿದರು.ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಫೈನಲ್ನಲ್ಲಿ ಮಲೇಷ್ಯಾದ ತಂಡಗಳನ್ನು ಎದುರಿಸಲಿವೆ.