ಯಾವ ಕ್ಷಣದಲ್ಲಾದ್ರೂ ಹಡಗಿಗೆ ಕ್ಷಿಪಣಿ ಅಪ್ಪಳಿಸಬಹುದು – ಕಪ್ಪು ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ 13 ಭಾರತೀಯ ನಾವಿಕರು
ಕೈವ್: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ ಮುಂದುವರೆದಿದ್ದು, ಕಪ್ಪು ಸಮುದ್ರ ಬಂದರಿನ ಬಳಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ಚೋರ್ನೊಮೊರ್ಸ್ಕ್ ಬಂದರಿನಲ್ಲಿ 13 ಭಾರತೀಯ ನಾವಿಕರು ಹಡಗಿನಲ್ಲಿ ಸಿಲುಕಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ನೇರವಾಗಿ ಹಡಗಿಗೆ ಕ್ಷಿಪಣಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ನಾವಿಕರ ಒಕ್ಕೂಟ

ಕೈವ್: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ ಮುಂದುವರೆದಿದ್ದು, ಕಪ್ಪು ಸಮುದ್ರ ಬಂದರಿನ ಬಳಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ಚೋರ್ನೊಮೊರ್ಸ್ಕ್ ಬಂದರಿನಲ್ಲಿ 13 ಭಾರತೀಯ ನಾವಿಕರು ಹಡಗಿನಲ್ಲಿ ಸಿಲುಕಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ನೇರವಾಗಿ ಹಡಗಿಗೆ ಕ್ಷಿಪಣಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ನಾವಿಕರ ಒಕ್ಕೂಟ (FSUI) ಎಚ್ಚರಿಸಿದೆ. ಹಡಗಿನ ಸಮೀಪದಲ್ಲಿ ಪುನರಾವರ್ತಿತ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಯುತ್ತಿದೆ. ಯಾವುದೇ ಕ್ಷಣದಲ್ಲಾದ್ರೂ ನೇರವಾಗಿ ಹಡಗಿಗೆ ಡಿಕ್ಕಿ ಹೊಡೆಯುವ ಭಯದಲ್ಲಿ ಹಡಗಿನ ಸಿಬ್ಬಂದಿ ಬದುಕುತ್ತಿದ್ದಾರೆ. ನಾವೀಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹಾಗೂ ಹಡಗಿನ ಮಾಲೀಕರಿಗೆ FSUI ಮನವಿ ಮಾಡಿದೆ. ಇದನ್ನೂ ಓದಿ: ಕಪ್ಪು ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಮೃತ್ಯು ಹಡಗಿನಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾದ ವೀಡಿಯೊವನ್ನು ಒಕ್ಕೂಟ ಎಕ್ಸ್ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಹಡಗಿನ ಸುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿದೆ. ಇದು ಬಂದರಿನಲ್ಲಿನ ಮೇಲೆ ನಡೆದ ದಾಳಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿಯವರೆಗೆ, ವಿದೇಶಾಂಗ ಸಚಿವಾಲಯ ಅಥವಾ ಹಡಗು ಕಂಪನಿ 13 ಭಾರತೀಯ ನಾವಿಕರು ಸಂಕಷ್ಟದಲ್ಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿಲ್ಲ. ಜು.18 ರಂದು ನಡೆದ ದಾಳಿಯಲ್ಲಿ ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನಲ್ಲಿದ್ದ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ಖಂಡಾತರ ಕ್ಷಿಪಣಿ ದಾಳಿ – ಎಲ್ಲ ಮಿಸೈಲ್ಗಳನ್ನೂ ಹೊಡೆದುರುಳಿಸಿದ ಅಮೆರಿಕ