ಮಂದಿರ ದೇಣಿಗೆ ಕಳವು: ಸಂಸತ್ ಆವರಣದಲ್ಲಿ ಎಸ್ಪಿ ಪ್ರತಿಭಟನೆ
ನವದೆಹಲಿ: ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷವು (ಎಸ್ಪಿ) ಬುಧವಾರ ಟೀಕಾ ಪ್ರಹಾರ ನಡೆಸಿದ್ದು, ಸಂಸತ್ ಭವನದ ಮಕರ ದ್ವಾರದ ಬಳಿ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿ, ‘ಭಕ್ತರು ನೀಡಿದ ದೇಣಿಗೆಯನ್ನ

ನವದೆಹಲಿ: ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷವು (ಎಸ್ಪಿ) ಬುಧವಾರ ಟೀಕಾ ಪ್ರಹಾರ ನಡೆಸಿದ್ದು, ಸಂಸತ್ ಭವನದ ಮಕರ ದ್ವಾರದ ಬಳಿ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿ, ‘ಭಕ್ತರು ನೀಡಿದ ದೇಣಿಗೆಯನ್ನೇ ರಕ್ಷಿಸಲಾಗದವರು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯುತ್ತಾರೆ ಎಂದು ನಿರೀಕ್ಷಿಸಲಾಗದು. ಜನರ ನಂಬಿಕೆಯೊಂದಿಗೆ ಆಟವಾಡುವವರು ನಮ್ಮ ಯುವಜನರ ಭವಿಷ್ಯದ ಜತೆಗೂ ಆಟವಾಡುತ್ತಾರೆ’ ಎಂದರು. ‘ದೇಶ ಸದ್ಯಕ್ಕೆ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಎಂದರೆ ಅದು ಈ ಸರ್ಕಾರವೇ ಆಗಿದೆ. ಈ ಸರ್ಕಾರ ಹೋಗುವವರೆಗೂ ಈ ಸಮಸ್ಯೆಗಳು ಮುಂದುವರಿಯುತ್ತಲೇ ಇರುತ್ತವೆ’ ಎಂದೂ ಯಾದವ್ ಟೀಕಿಸಿದರು. ದೇಣಿಗೆ ಕಳವು ಕುರಿತು ಸಂಸತ್ನಲ್ಲಿ ಚರ್ಚೆ ಆಗಬೇಕೆಂದು ಎಸ್ಪಿ ಸಂಸದರು ಆಗ್ರಹಿಸಿದ್ದಾರೆ. ಫೈಜಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅವಧೇಶ್ ಪ್ರಸಾದ್ ಮಾತನಾಡಿ, ‘ಮಂದಿರದ ದೇಣಿಗೆ ಕಳವು ಸಾಮಾನ್ಯ ಕಳ್ಳತನವಲ್ಲ. ರಾಮನ ಕೋಟ್ಯಂತರ ಭಕ್ತರ ನಂಬಿಕೆಯ ದರೋಡೆ ಆಗಿದೆ. ಅಯೋಧ್ಯೆ ಕಾರಣದಿಂದಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಈಗ ಅಯೋಧ್ಯೆ ಕಾರಣದಿಂದಲೇ ಆ ಸರ್ಕಾರ ಪತನವಾಗಲಿದೆ. 2027ಕ್ಕೆ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದರು.