ವರದಿ ಪರಿಣಾಮ: ನಿಡಗುಂದಿಯ ಸರ್ಕಾರಿ ಶಾಲೆಗೆ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ
ರಾಯಬಾಗ: ತಾಲ್ಲೂಕಿನ ನಿಡಗುಂದಿಯ ವಿಠ್ಠಲ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ವಿವಿಧ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ವಿದ್ಯಾರ್ಥಿಗಳು ಸಮಸ್ಯೆ ಆಲಿಸಿದರು.ತಹಶೀಲ್ದಾರ್ ಮಹಾದೇವ ಸನಮೂರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಬಿಇಒ ಬಸವರಾಜಪ್ಪ ಆರ್. ಅವರು, ಸಂಪರ್ಕ ರಸ್ತೆ ಇಲ್ಲದ್ದರಿಂದ ಶಾಲೆಗೆ ಬರ

ರಾಯಬಾಗ: ತಾಲ್ಲೂಕಿನ ನಿಡಗುಂದಿಯ ವಿಠ್ಠಲ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ವಿವಿಧ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ವಿದ್ಯಾರ್ಥಿಗಳು ಸಮಸ್ಯೆ ಆಲಿಸಿದರು.ತಹಶೀಲ್ದಾರ್ ಮಹಾದೇವ ಸನಮೂರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಬಿಇಒ ಬಸವರಾಜಪ್ಪ ಆರ್. ಅವರು, ಸಂಪರ್ಕ ರಸ್ತೆ ಇಲ್ಲದ್ದರಿಂದ ಶಾಲೆಗೆ ಬರಲು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದರು.ಈ ವೇಳೆ ಮಹಾದೇವ ಸನಮೂರಿ ಮಾತನಾಡಿ, ‘ಮಕ್ಕಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಆದ್ಯತೆ. ಶಾಲೆ ಹಾಗೂ ಅಂಗನವಾಡಿಗೆ ಹೋಗಲು ಸಂಪರ್ಕ ರಸ್ತೆ ಇಲ್ಲದ್ದರಿಂದ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.‘ಸಂಬಂಧಿತ ಇಲಾಖೆಗಳ ಜತೆಗೆ ಚರ್ಚಿಸಿ, ರಸ್ತೆ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.ಅರುಣ ಮಾಚಕನೂರ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ರೂಪಿಸಿ, ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು. ಪಿಡಿಒ ಸಿದ್ರಾಮ ಕಾಂಬಳೆ, ಭಗವಂತ ಶಿಂಧೆ, ಜ್ಞಾನೇಶ್ವರ ಭಿರಡಿ, ಸದಾಶಿವ ನಾವಿ, ಸಿದ್ರಾಮ ಕರ್ಲಟ್ಟಿ, ಶಿವಶಂಕರ ರಾಠೋಡ, ಸಾವಿತ್ರಿ ಬಂತೆ, ರಾಜಶ್ರೀ ಟೆಂಗಳೆ, ಸಾವಿತ್ರಿ ಕರ್ಲಟ್ಟಿ, ಶೋಭಾ ಕರ್ಲಟ್ಟಿ ಇದ್ದರು.ರಸ್ತೆ ಇಲ್ಲದ ಕಾರಣ ಶಾಲೆ ಮತ್ತು ಅಂಗನವಾಡಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿರುವ ಕುರಿತು ‘ಪ್ರಜಾವಾಣಿ’ ಜುಲೈ 28ರ ಸಂಚಿಕೆಯಲ್ಲಿ ‘ಶಾಲೆ, ಅಂಗನವಾಡಿಗೆ ರಸ್ತೆ ಯಾವುದಯ್ಯ?’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತುವರದಿ ಪರಿಣಾಮ: ಮಂಟೂರಿಗೆ ವೈದ್ಯರ ನಿಯೋಜನೆರಾಯಬಾಗ: ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಕರ್ತವ್ಯ ನಿರ್ವಹಣೆಗೆ ನಿಪನಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಜಿತ ಪೂಜೇರಿ ಅವರನ್ನು ನಿಯೋಜಿಸಿ, ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.‘ಮಂಟೂರಿನಲ್ಲಿ ಆರೋಗ್ಯ ಕೇಂದ್ರ ಇಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ಕಟ್ಟಡದ ಒಂದು ಕೊಠಡಿಯಲ್ಲೇ, ಪ್ರತಿ ಬುಧವಾರ ಮತ್ತು ಶುಕ್ರವಾರ ಅಜಿತ ಕರ್ತವ್ಯ ನಿರ್ವಹಿಸುವರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗ ತಮ್ಮೂರಿನಲ್ಲಿ ಆರೋಗ್ಯ ಉಪಕೇಂದ್ರ ಇಲ್ಲದ್ದರಿಂದ ವೈದ್ಯಕೀಯ ಚಿಕಿತ್ಸೆಗಾಗಿ 15 ಕಿ.ಮೀ ದೂರದ ಬ್ಯಾಕೂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಬರುತ್ತಿದ್ದರು. ಈಗ ವಾರದಲ್ಲಿ ಎರಡು ದಿನವಾದರೂ ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸಿದ್ದರಿಂದ ತುಸು ನಿಟ್ಟುಸಿರು ಬಿಟ್ಟಿದ್ದಾರೆ. ‘ನಮಗೆ ಇದೇ ಶಾಶ್ವತ ಪರಿಹಾರವಲ್ಲ. ಶೀಘ್ರವೇ ಮಂಟೂರಿನಲ್ಲಿ ಆರೋಗ್ಯ ಉಪಕೇಂದ್ರ ತೆರೆಯಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಆರೋಗ್ಯ ಉಪಕೇಂದ್ರ ಇಲ್ಲದ್ದರಿಂದ ಗ್ರಾಮಸ್ಥರು ಚಿಕಿತ್ಸೆಗಾಗಿ ಪರದಾಡುತ್ತಿರುವ ಕುರಿತು ‘ಪ್ರಜಾವಾಣಿ’ ಜುಲೈ 18ರ ಸಂಚಿಕೆಯಲ್ಲಿ ‘ಆರೋಗ್ಯ ಉಪಕೇಂದ್ರ ಇಲ್ಲದೆ ಪರದಾಟ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.