ರಾಣೆಬೆನ್ನೂರಿನಲ್ಲಿ ಜುಲೈ 31ರಂದು ಸಂಸ್ಕಾರ ಶಿಬಿರ ಆಯೋಜನೆ
ರಾಣೆಬೆನ್ನೂರು: ಇಲ್ಲಿನ ಚರ್ಚ ರಸ್ತೆಯ ಮಾನ್ವಿ ಕಂಪನಿ ಬಳಿ ಇರುವ ಶಿಕ್ಷಕರ ಪತ್ತಿನ ಸಹಕಾರಿ ಸಂಘದಲ್ಲಿ ಹಾವೇರಿ ಜಿಲ್ಲಾ ದೇವಾಂಗ ಮಹಿಳಾ ಸಂಘ ಹಾಗೂ ರಾಣೆನ್ನೂರು ತಾಲ್ಲುಕು ದೇವಾಂಗ ಮಹಿಳಾ ಸಂಘದ ಆಶ್ರಯದಲ್ಲಿ ಜುಲೈ 31ರಂದು ಬೆಳಿಗ್ಗೆ 10 ಗಂಟೆಗೆ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಧಾರವಾಡ
ರಾಣೆಬೆನ್ನೂರು: ಇಲ್ಲಿನ ಚರ್ಚ ರಸ್ತೆಯ ಮಾನ್ವಿ ಕಂಪನಿ ಬಳಿ ಇರುವ ಶಿಕ್ಷಕರ ಪತ್ತಿನ ಸಹಕಾರಿ ಸಂಘದಲ್ಲಿ ಹಾವೇರಿ ಜಿಲ್ಲಾ ದೇವಾಂಗ ಮಹಿಳಾ ಸಂಘ ಹಾಗೂ ರಾಣೆನ್ನೂರು ತಾಲ್ಲುಕು ದೇವಾಂಗ ಮಹಿಳಾ ಸಂಘದ ಆಶ್ರಯದಲ್ಲಿ ಜುಲೈ 31ರಂದು ಬೆಳಿಗ್ಗೆ 10 ಗಂಟೆಗೆ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಧಾರವಾಡ ಆರ್ಎಸ್ಎಸ್ ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ರಾಷ್ಟ್ರ ಸೇವಿಕಾ ಸಮಿತಿ ಧಾರವಾಡ ವಿಭಾಗದ ಕಾರ್ಯನಿರ್ವಾಹ ಶಾಂತಾ ವೇರ್ಣೆಕರ್ ಅವರ ಗೋಷ್ಠಿ, ಮಧ್ಯಾಹ್ನ 12. 45ಕ್ಕೆ ಕುಮುಟಾದ ರಾಷ್ಟ್ರ ಸೇವಿಕಾ ಸಮಿತಿ ಶ್ರೀದೇವಿ ಭಟ್ ಅವರ ಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆವರೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಮಿತಿ ಪ್ರಕಟಣೆಗೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260729-22-1714384341