ವಿಶ್ವದ ಏಕೈಕ 7-ಸ್ಟಾರ್ ಹೋಟೆಲ್ ಎಲ್ಲಿದೆ, ಏನಿದರ ವಿಶೇಷ?
ದುಬೈನಲ್ಲಿರುವ ‘ಬುರ್ಜ್ ಅಲ್ ಅರಬ್’ ವಿಶ್ವದಲ್ಲಿಯೇ 7-ಸ್ಟಾರ್ ಇರುವ ಏಕೈಕ ಐಷಾರಾಮಿ ಹೋಟೆಲ್ ಆಗಿದೆ. ಈ ಕಟ್ಟಡವು ನೋಡುವುದಕ್ಕೆ ಹಡಗಿನ ಹಾಯಿಯ ರೂಪದಲ್ಲಿ ಇದೆ. 321 ಮೀಟರ್ ಎತ್ತರವಿರುವ ಈ ಕಟ್ಟಡ ಐಷಾರಾಮಿ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ.ಪ್ರಸಿದ್ಧ ವ್ಲಾಗರ್ ಲೆಕ್ಸಿ ಆಲ್ಫೋರ್ಡ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬುರ್ಜ್ ಅಲ್ ಅರಬ್ ಹೋಟೆಲ್ ಒಳಗಡೆ ಏ
ದುಬೈನಲ್ಲಿರುವ ‘ಬುರ್ಜ್ ಅಲ್ ಅರಬ್’ ವಿಶ್ವದಲ್ಲಿಯೇ 7-ಸ್ಟಾರ್ ಇರುವ ಏಕೈಕ ಐಷಾರಾಮಿ ಹೋಟೆಲ್ ಆಗಿದೆ. ಈ ಕಟ್ಟಡವು ನೋಡುವುದಕ್ಕೆ ಹಡಗಿನ ಹಾಯಿಯ ರೂಪದಲ್ಲಿ ಇದೆ. 321 ಮೀಟರ್ ಎತ್ತರವಿರುವ ಈ ಕಟ್ಟಡ ಐಷಾರಾಮಿ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ.ಪ್ರಸಿದ್ಧ ವ್ಲಾಗರ್ ಲೆಕ್ಸಿ ಆಲ್ಫೋರ್ಡ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬುರ್ಜ್ ಅಲ್ ಅರಬ್ ಹೋಟೆಲ್ ಒಳಗಡೆ ಏನೆಲ್ಲಾ ಇದೆ ಎಂಬುದನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ದುಬೈನ ಬುರ್ಜ್ ಅಲ್ ಅರಬ್ ಒಳಗೆ ಏನಿದೆ? ವಿಡಿಯೊದಲ್ಲಿ, ಲೆಕ್ಸಿ ಅವರು ಹೇಳಿರುವಂತೆ, ‘ನಾನು ವಿಶ್ವದ ಏಕೈಕ 7-ಸ್ಟಾರ್ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದೇನೆ. ನಾವು ಐಷಾರಾಮಿಯಾದ ಕೊಠಡಿ ಒಂದಕ್ಕೆ ಪ್ರವಾಸ ಮಾಡೋಣ. ಇಲ್ಲಿರುವ ಪ್ರತಿಯೊಂದು ಕೋಣೆಯೂ ಡ್ಯುಪ್ಲೆಕ್ಸ್ ಮಾದರಿಯಲ್ಲಿವೆ’ ಎಂದು ಹೇಳಿದ್ದಾರೆ. View this post on Instagram ಐಷಾರಾಮಿಯಿಂದ ಕೂಡಿದ ಕೊಠಡಿಯ ಒಳಾಂಗಣದ ಬಗ್ಗೆ ವಿವರಿಸುತ್ತಾ, ‘ನೀವು ನೋಡುವ ಪ್ರತಿಯೊಂದು ವಸ್ತುವಿನ ಮೇಲೂ ನಿಜವಾದ ಚಿನ್ನವನ್ನು ಲೇಪಿಸಲಾಗಿದೆ. ಸ್ನಾನಗೃಹದಲ್ಲಿ ಹಾಗೂ ಶೌಚಾಲಯಗಳಲ್ಲಿ ಬಳಸುವ ಕೆಲ ವಸ್ತುಗಳಿಗೂ 24 ಕ್ಯಾರೆಟ್ ಚಿನ್ನ ಲೇಪಿಸಲಾಗಿದೆ. ಕೊಠಡಿಯ ನೆಲಹಾಸು ಅಮೃತಶಿಲೆಯಿಂದ ಕೂಡಿದೆ’ ಎಂದು ಹೇಳಿದ್ದಾರೆ.‘ಕೊಠಡಿಯಲ್ಲಿ ಉಳಿದುಕೊಳ್ಳುವವರಿಗೆ ಉಚಿತವಾಗಿ ಪರ್ಫ್ಯೂಮ್, ಬಾಡಿ ಲೋಷನ್ ಮತ್ತು ಶಾಂಪೂ ಬಾಟಲಿಗಳನ್ನು ಇಟ್ಟಿರುತ್ತಾರೆ. ಕೊಠಡಿಯೊಳಗೆ ಒಂದು ಬಟನ್ ಒತ್ತಿದರೆ, ಟಿವಿ ಆನ್ ಆಗುತ್ತದೆ. ಬೆಳಿಗ್ಗೆ, ಸೇವಕರು ನಾನು ಈವರೆಗೆ ಎಂದಿಗೂ ನೋಡದ ವಿಭಿನ್ನ ಉಪಹಾರವನ್ನು ತಂದು ಬಡಿಸಿದ್ದರು’ ಎಂದು ಹೇಳಿಕೊಂಡಿದ್ದಾರೆ. ಬುರ್ಜ್ ಅಲ್ ಅರಬ್ನಲ್ಲಿ ಒಂದು ರಾತ್ರಿ ತಂಗಲು ಎಷ್ಟು ವೆಚ್ಚವಾಗುತ್ತದೆ?ಜುಮೇರಾ ಬುರ್ಜ್ ಅಲ್ ಅರಬ್ ವೆಬ್ಸೈಟ್ ಪ್ರಕಾರ, ಈ ಐಕಾನಿಕ್ ಹೋಟೆಲ್ನ ಕೊಠಡಿ ದರಗಳು ಪ್ರಯಾಣದ ದಿನಾಂಕ, ವರ್ಗ ಮತ್ತು ಲಭ್ಯತೆಯನ್ನು ಅವಲಂಬಿಸಿದೆ. ಡ್ಯುಪ್ಲೆಕ್ಸ್ ಕೊಠಡಿಯು ಸಾಮಾನ್ಯವಾಗಿ ಪ್ರತಿ ರಾತ್ರಿಗೆ ₹1.2 ಲಕ್ಷದಿಂದ ಆರಂಭವಾಗುತ್ತದೆ.ಪ್ರಸ್ತುತ ಬುರ್ಜ್ ಅಲ್ ಅರಬ್ ಹೋಟೆಲ್ ಸಂಪೂರ್ಣ ನವೀಕರಣ ಹಂತದಲ್ಲಿದೆ. ಹೀಗಾಗಿ ಸುಮಾರು 18 ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ ಎಂದು ವರದಿಯಾಗಿದೆ.