ರಾಜ್ಯ ಸರ್ಕಾರ ಶೀಘ್ರ ಬರಗಾಲ ಘೋಷಿಸಲಿ: ಆರ್.ಅಶೋಕ
ನಾಯಕನಹಟ್ಟಿ: ‘ಪ್ರಸಕ್ತ ವರ್ಷ ರಾಜ್ಯದ ರೈತರು ಬೆಳೆಗಳನ್ನು ಬೆಳೆಯ ಬೇಡಿ ಎಂದು ಹೇಳುವ ಮುಖ್ಯಮಂತ್ರಿ ವಿಬಿ ಜಿ ರಾಮ್ ಜಿ ಮೂಲಕ ಗ್ರಾಮೀಣರಿಗೆ ಉದ್ಯೋಗ ನೀಡಲಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.ಪಟ್ಟಣದ ಚಿಕ್ಕಕೆರೆಗೆ ಬುಧವಾರ ಭೇಟಿ ನೀಡಿ ಬರ ಅಧ್ಯಯನ ನಡೆಸಿ ಅವರು ಮಾತನಾಡಿದರು.‘ರಾಜ್ಯದಲ್ಲಿ ನಾಯಕನಹಟ್ಟಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ

ನಾಯಕನಹಟ್ಟಿ: ‘ಪ್ರಸಕ್ತ ವರ್ಷ ರಾಜ್ಯದ ರೈತರು ಬೆಳೆಗಳನ್ನು ಬೆಳೆಯ ಬೇಡಿ ಎಂದು ಹೇಳುವ ಮುಖ್ಯಮಂತ್ರಿ ವಿಬಿ ಜಿ ರಾಮ್ ಜಿ ಮೂಲಕ ಗ್ರಾಮೀಣರಿಗೆ ಉದ್ಯೋಗ ನೀಡಲಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.ಪಟ್ಟಣದ ಚಿಕ್ಕಕೆರೆಗೆ ಬುಧವಾರ ಭೇಟಿ ನೀಡಿ ಬರ ಅಧ್ಯಯನ ನಡೆಸಿ ಅವರು ಮಾತನಾಡಿದರು.‘ರಾಜ್ಯದಲ್ಲಿ ನಾಯಕನಹಟ್ಟಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದೆ. ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಬರದ ಛಾಯೆ ಆವರಿಸಿದೆ. ತಾಲ್ಲೂಕು ಹಾಗೂ ಜಿಲ್ಲೆಯಲ್ಲಿನ ಕೆರೆಗಳು ಒಣಗಿರುವುದರಿಂದ ತಕ್ಷಣ ಬರ ಘೋಷಣೆ ಮಾಡಬೇಕು. ಇದೇ ಕೆರೆಯನ್ನು ಅವಲಂಬಿಸಿರುವ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತಿದೆ’ ಎಂದು ದೂರಿದರು.ಮುಖ್ಯಮಂತ್ರಿ ರೈತರಿಗೆ ಬೆಳೆಯನ್ನು ಬೆಳೆಯಬೇಡಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವ ಸರ್ಕಾರ ರೈತರಿಗೆ, ಜನ ಸಾಮಾನ್ಯರಿಗೆ, ಗ್ರಾಮೀಣರಿಗೆ ಪರ್ಯಾಯವಾಗಿ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ವಿಫಲವಾಗಿದೆ. ತುರ್ತಾಗಿ ರೈತರಿಗೆ ಉದ್ಯೋಗ ನೀಡುವ ಕಾರ್ಯವನ್ನು ಆರಂಭಿಸಬೇಕು. ಗುಳೆ ತಪ್ಪಿಸಲು ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.‘ರಾಜ್ಯದಲ್ಲಿ ಎಲ್ಲೆಡೆ ಬರ ಆವರಿಸಿದ್ದು, ಇಲ್ಲಿಯವರೆಗೂ ಅಧಿಕೃತವಾಗಿ ಬರವನ್ನೇ ಘೋಷಣೆ ಮಾಡಿಲ್ಲ. ಹಾಗೇ ನೋಡಿದರೆ ರಾಜ್ಯಸರ್ಕಾರ ಕೇಂದ್ರಕ್ಕೆ ಇಲ್ಲಿಯವರೆಗೆ ಬರದ ಪ್ರಸ್ತಾವವನ್ನೇ ಸಲ್ಲಿಸಿಲ್ಲ. ಮೊದಲು ಬರ ಘೋಷಣೆ ಮಾಡದೇ ಯಾವುದೇ ಕಾರ್ಯ ಆರಂಭಿಸಲು ಸಾಧ್ಯವಿಲ್ಲ. ಮೊದಲ ಆದ್ಯತೆಯಾಗಿ ಜಾನುವಾರುಗಳಿಗೆ ಗೋಶಾಲೆಗಳನ್ನು ಆರಂಭಿಸಬೇಕು. ಸರ್ಕಾರದಲ್ಲಿರುವ ಮಂತ್ರಿಗಳು ಇಲ್ಲಿಯವರೆಗೂ ಬರ ಅಧ್ಯಯನ ಆರಂಭಿಸಿಲ್ಲ. ಸರ್ಕಾರ ಬರದ ತಾಲ್ಲೂಕುಗಳನ್ನು ಘೋಷಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದರು.ಇದೇವೇಳೆ ಹಗರಿಬೊಮ್ಮನಹಳ್ಳಿ ಶಾಸಕ ಕೃಷ್ಣಾನಾಯ್ಕ, ಹರಿಹರ ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸಚಿವ ಭೈರತಿ ಬಸವರಾಜ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಂಡಲಾಧ್ಯಕ್ಷ ಚನ್ನಾಗನಹಳ್ಳಿ ಮಲ್ಲೇಶ್, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಮೋಹನ್ಕುಮಾರ್, ಪಿ.ಶಿವಣ್ಣ, ರಾಮದಾಸ್, ಪಿ.ಎಂ.ಮಂಜುನಾಥ್, ಈ.ರಾಮರೆಡ್ಡಿ, ಬೋರಸ್ವಾಮಿ, ಶಂಕರಸ್ವಾಮಿ, ತಿಪ್ಪೇಸ್ವಾಮಿ, ಗೋವಿಂದ್ದಪ್ಪ ಇದ್ದರು.