ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಗೆ ಯಶಸ್ವಿ ರೂಟ್ ಕೆನಲ್ ಶಸ್ತ್ರಚಿಕಿತ್ಸೆ
ಆನೇಕಲ್: ಸಾಮಾನ್ಯವಾಗಿ ಮನುಷ್ಯರು ರೂಟ್ ಕೆನಲ್ (Root Canal) ಮಾಡಿಸಿಕೊಳ್ಳುತ್ತಾರೆ. ಆದರೆ ಇದೀಗ ಹುಲಿ ರೂಟ್ ಕೆನಲ್ ಮಾಡಿಸಿಕೊಂಡಿದೆ. ಹೌದು, ಬೆಂಗಳೂರು ಹೊರವಲಯದ ಬನ್ನೇರುಘಟ್ಟ (Bannerghatt) ಜೈವಿಕ ಉದ್ಯಾನವನದಲ್ಲಿ ಕೋರೆ ಹಲ್ಲಿನ ಸೋಂಕಿನಿಂದ ಬಳಲುತ್ತಿದ್ದ `ಸಿಂಚನಾ’ ಎಂಬ ಹುಲಿಗೆ ವೈದ್ಯರ ತಂಡವು ಯಶಸ್ವಿಯಾಗಿ ರೂಟ್ ಕೆನಲ್ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

ಆನೇಕಲ್: ಸಾಮಾನ್ಯವಾಗಿ ಮನುಷ್ಯರು ರೂಟ್ ಕೆನಲ್ (Root Canal) ಮಾಡಿಸಿಕೊಳ್ಳುತ್ತಾರೆ. ಆದರೆ ಇದೀಗ ಹುಲಿ ರೂಟ್ ಕೆನಲ್ ಮಾಡಿಸಿಕೊಂಡಿದೆ. ಹೌದು, ಬೆಂಗಳೂರು ಹೊರವಲಯದ ಬನ್ನೇರುಘಟ್ಟ (Bannerghatt) ಜೈವಿಕ ಉದ್ಯಾನವನದಲ್ಲಿ ಕೋರೆ ಹಲ್ಲಿನ ಸೋಂಕಿನಿಂದ ಬಳಲುತ್ತಿದ್ದ `ಸಿಂಚನಾ’ ಎಂಬ ಹುಲಿಗೆ ವೈದ್ಯರ ತಂಡವು ಯಶಸ್ವಿಯಾಗಿ ರೂಟ್ ಕೆನಲ್ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಇದನ್ನೂ ಓದಿ: ಎಸ್ಐಆರ್ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್ ಉದ್ಯಾನವನದಲ್ಲಿದ್ದ ಹುಲಿಯು ಪಂಜರವನ್ನು ಕಚ್ಚಿ ಕೋರೆ ಹಲ್ಲಿಗೆ ಹಾನಿ ಮಾಡಿಕೊಂಡಿತ್ತು. ಇದರಿಂದ ಹಲ್ಲಿನ ಸೋಂಕು ಉಂಟಾಗಿತ್ತು. ಅಲ್ಲದೇ ನೋವು ಹೆಚ್ಚಾಗಿ ಹುಲಿ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ಹುಲಿಯ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಎಸ್ಒಎಸ್ ಪಶುವೈದ್ಯಕೀಯ ತಂಡದವರು ಹಲ್ಲನ್ನು ತೆಗೆಯದೇ ಮೂರು ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹುಲಿಗೆ ರೂಟ್ ಕೆನಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಹುಲಿ ಚೇತರಿಸಿಕೊಳ್ಳುತ್ತಿದ್ದು, ಉದ್ಯಾನವನದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾಡುತ್ತಿದ್ದಾರೆ. ಈ ಅತ್ಯಾಧುನಿಕ ಚಿಕಿತ್ಸೆಯಿಂದ ಹುಲಿಯ ಹಲ್ಲು ಉಳಿದು, ದೀರ್ಘಕಾಲ ಆರೋಗ್ಯವಾಗಿರಲು ಸಾಧ್ಯವಾಗಿದೆ. ಹುಲಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗ ಹಾಗೂ ವೈದ್ಯರ ತಂಡದ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಇದನ್ನೂ ಓದಿ: ʻರಾಮಮಂದಿರ ದೇಣಿಗೆ ಕಳವುʼ ಚರ್ಚೆಗೆ ಸುರ್ಜೇವಾಲಾ ಒತ್ತಾಯ – ಲೋಕಸಭೆಯಲ್ಲೂ ಗದ್ದಲ, ಕಲಾಪ ಮುಂದೂಡಿಕೆ