ಬಿಸಿಯೂಟ ಯೋಜನೆಯಲ್ಲಿ ವಿತರಿಸುವ ಮೊಟ್ಟೆಗಳ ಖರೀದಿ ದರ ಪರಿಷ್ಕರಣೆಗೆ ಸದ್ಯಕ್ಕಿಲ್ಲ
ಬೆಂಗಳೂರು: ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ವಿತರಿಸುವ ಮೊಟ್ಟೆಗಳ ಖರೀದಿ ದರ ಪರಿಷ್ಕರಣೆ ಕುರಿತು ಶಾಲಾ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.‘ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾಗಿದ್ದು, ದರ ಪರಿಷ್ಕರಿಸುವಂತೆ ಹಲವು ಜಿಲ್ಲೆಗಳಿಂದ ಬಂದಿರುವ ಮನವಿಗಳ ಕುರಿತು ಚರ್ಚಿಸಲು ಇಲಾಖೆ ಅಧಿಕಾರಿಗಳು ಗುರುವಾರ ಸಭೆ ನಡೆಸಿದರು. ವಿಷಯ ಕುರಿತು ಸುದೀರ್ಘ ಚರ್ಚೆ ನಡೆ

ಬೆಂಗಳೂರು: ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ವಿತರಿಸುವ ಮೊಟ್ಟೆಗಳ ಖರೀದಿ ದರ ಪರಿಷ್ಕರಣೆ ಕುರಿತು ಶಾಲಾ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.‘ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾಗಿದ್ದು, ದರ ಪರಿಷ್ಕರಿಸುವಂತೆ ಹಲವು ಜಿಲ್ಲೆಗಳಿಂದ ಬಂದಿರುವ ಮನವಿಗಳ ಕುರಿತು ಚರ್ಚಿಸಲು ಇಲಾಖೆ ಅಧಿಕಾರಿಗಳು ಗುರುವಾರ ಸಭೆ ನಡೆಸಿದರು. ವಿಷಯ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಆದರೆ, ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.‘ಮೊಟ್ಟೆ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಮುಂದಿನ ತಿಂಗಳು ಶ್ರಾವಣ ಮಾಸ ಹಾಗೂ ಹಬ್ಬಗಳ ಸಮಯವಾದ ಕಾರಣ ಬಹುತೇಕ ಹಿಂದೂ ವಿದ್ಯಾರ್ಥಿಗಳು ಮೊಟ್ಟೆ ಸೇವಿಸುವುದಿಲ್ಲ. ಹೀಗಾಗಿ, ಶ್ರಾವಣ ಕಳೆದ ನಂತರ ಮೊಟ್ಟೆ ಖರೀದಿ ದರ ಪರಿಷ್ಕರಣೆ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Read the complete story at Prajavani