ಧಾರಾಕಾರ ಮಳೆಗೆ ಕುಸಿದು ಬಿದ್ದ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ – ಕಳಪೆ ಕಾಮಗಾರಿ ಆರೋಪ
ಚಿಕ್ಕೋಡಿ: ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ (National Highway) ತಡೆಗೋಡೆ ಕುಸಿದು ಬಿದ್ದ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ಪಟ್ಟಣದ ಗಾಂಧಿ ಆಸ್ಪತ್ರೆ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಸುಮಾರು 25 ಅಡಿ ಎತ್ತರದ ಹೊಸದಾಗಿ ನಿರ್ಮಿಸಲಾಗಿದ್ದ ಹೆದ್ದಾರಿಯ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮಣ್ಣು ಹ

ಚಿಕ್ಕೋಡಿ: ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯ (National Highway) ತಡೆಗೋಡೆ ಕುಸಿದು ಬಿದ್ದ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ಪಟ್ಟಣದ ಗಾಂಧಿ ಆಸ್ಪತ್ರೆ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಸುಮಾರು 25 ಅಡಿ ಎತ್ತರದ ಹೊಸದಾಗಿ ನಿರ್ಮಿಸಲಾಗಿದ್ದ ಹೆದ್ದಾರಿಯ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಮಣ್ಣು ಹೊರಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಗೋಡೆ ನೆನೆದು ಕುಸಿದಿದೆ ಎನ್ನಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ವಿಸ್ ರಸ್ತೆಗಳ ಮೂಲಕ ತಾತ್ಕಾಲಿಕ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.ಇದನ್ನೂ ಓದಿ: ವಂದೇ ಭಾರತ್ನಲ್ಲಿ ಸೋನಂ ವಾಂಗ್ಚುಕ್ ಪ್ರಯಾಣ – ಭಾರತೀಯ ರೈಲ್ವೆಗೆ ಮೆಚ್ಚುಗೆ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಯೇ ಈ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಬೆಂಗಳೂರಿಗೆ ತಮಿಳುನಾಡು ಸಿಎಂ
Read the complete story at Public TV Kannada