ಬಸ್ ಚಾಲಕನ ಮನೆ ಮೇಲೆ ದಾಳಿ; ₹5.5 ಕೋಟಿ ನಗದು, 15 ಕೆ.ಜಿ ಚಿನ್ನ ಜಪ್ತಿ
ಕೋಲ್ಕತ್ತ: ನೋಟಿನ ಕಂತೆಗಳು, ಚಿನ್ನದ ಬಿಸ್ಕತ್ತುಗಳು ಮತ್ತು ಹಣ ಎಣಿಸುವ ಯಂತ್ರಗಳು...ಈ ದೃಶ್ಯ ಕಂಡು ಬಂದಿದ್ದು ಮಾಜಿ ಬಸ್ ಚಾಲಕನ ಮನೆಯಲ್ಲಿ.ಇಲ್ಲಿನ ಬೀರ್ಭೂಮ್ನ ಮೊಹಮ್ಮದ್ ಬಜಾರ್ನಲ್ಲಿರುವ ಮಿನಾರ್ ಮಂಡಲ್ ಅವರ ನಿವಾಸದ ಮೇಲೆ ಬುಧವಾರ ತಡರಾತ್ರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ 15 ಕೆ.ಜಿ ಚಿನ್ನ ಹಾಗೂ ₹ 5 ಕೋಟಿ ನಗದನ್ನು ವಶಕ್ಕೆ ಪಡೆದು

ಕೋಲ್ಕತ್ತ: ನೋಟಿನ ಕಂತೆಗಳು, ಚಿನ್ನದ ಬಿಸ್ಕತ್ತುಗಳು ಮತ್ತು ಹಣ ಎಣಿಸುವ ಯಂತ್ರಗಳು...ಈ ದೃಶ್ಯ ಕಂಡು ಬಂದಿದ್ದು ಮಾಜಿ ಬಸ್ ಚಾಲಕನ ಮನೆಯಲ್ಲಿ.ಇಲ್ಲಿನ ಬೀರ್ಭೂಮ್ನ ಮೊಹಮ್ಮದ್ ಬಜಾರ್ನಲ್ಲಿರುವ ಮಿನಾರ್ ಮಂಡಲ್ ಅವರ ನಿವಾಸದ ಮೇಲೆ ಬುಧವಾರ ತಡರಾತ್ರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ 15 ಕೆ.ಜಿ ಚಿನ್ನ ಹಾಗೂ ₹ 5 ಕೋಟಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ತೃಣಮೂಲ ಕಾಂಗ್ರೆಸ್ನ ಮಾಜಿ ನಾಯಕ ಅನುಬ್ರತಾ ಮಂಡಲ್ ಅವರ ಆಪ್ತನೂ, ಕಲ್ಲು ವ್ಯಾಪಾರಿಯೂ ಆಗಿರುವ ತುಳು ಮಂಡಲ್ ಅವರ ಸಂಬಂಧಿ ಮಿನಾರ್ ಮಂಡಲ್ ನಿವಾಸದ ಮೇಲೆ ದಾಳಿ ನಡೆದಿತ್ತು. ಕೆಲವು ವರ್ಷಗಳ ಹಿಂದೆ ಬಸ್ ಚಾಲಕರಾಗಿದ್ದ ಮಿನಾರ್ ಮಂಡಲ್ ಸಂಬಂಧಿ ತುಳು ಮಂಡಲ್ ಜೊತೆಗೂಡಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ತುಳು ಮಂಡಲ್ ಅವರಿಗೆ ಸೇರಿದ ಹಲವು ಕಲ್ಲು ಗಣಿಗಳು ಹಾಗೂ ಕ್ರಷರ್ ಘಟಕಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಕಾರ್ಯಾಚರಣೆ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ದೊಡ್ಡ ಸಂಖ್ಯೆಯ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಹಾಜರಿದ್ದರು. ಆದರೆ, ಈ ದಾಳಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಅಧಿಕೃತವಾಗಿ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.Commendable job by our Law Enforcement personnel for the crackdown on Sand Mafia.Following a precise operation based on source based information, Birbhum Police conducted a major raid under Mohammad Bazar PS targeting the hideout of illegal sand mafia Tullu Mondal alias Mohd… pic.twitter.com/Ln4XJCWKKY— Suvendu Adhikari (@SuvenduWB) July 29, 2026