ಐಸ್ ಥೆರಪಿಗೆ ಒಳಗಾದ ವಿಡಿಯೊ ಹಂಚಿಕೊಂಡ ನಟಿ ಹೀನಾ ಖಾನ್
ಕ್ಯಾನ್ಸರ್ನಿಂದ ಗುಣಮುಖರಾಗುತ್ತಿರುವ ಬಾಲಿವುಡ್ ನಟಿ ಹೀನಾ ಖಾನ್ ಸದ್ಯ ತಮ್ಮ ಆರೋಗ್ಯ ಹೇಗಿದೆ, ಯಾವ ಚಿಕಿತ್ಸೆ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಹೀನಾ, ಐಸ್ ಥೆರಪಿಗೆ ಒಳಗಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಅದರ ಜತೆಗೆ ವೈದ್ಯರ ಸೂಕ್ತ ಮೇಲ್ವಿಚಾರಣ

ಕ್ಯಾನ್ಸರ್ನಿಂದ ಗುಣಮುಖರಾಗುತ್ತಿರುವ ಬಾಲಿವುಡ್ ನಟಿ ಹೀನಾ ಖಾನ್ ಸದ್ಯ ತಮ್ಮ ಆರೋಗ್ಯ ಹೇಗಿದೆ, ಯಾವ ಚಿಕಿತ್ಸೆ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಹೀನಾ, ಐಸ್ ಥೆರಪಿಗೆ ಒಳಗಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಅದರ ಜತೆಗೆ ವೈದ್ಯರ ಸೂಕ್ತ ಮೇಲ್ವಿಚಾರಣೆ ಇಲ್ಲದೆ ಐಸ್ ಥೆರಪಿಗೆ ಒಳಗಾಗಬೇಡಿ ಎಂದೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಹೀನಾ ಅವರು ಐಸ್ ತುಂಡುಗಳು ಮತ್ತು ಐಸ್ ನೀರು ತುಂಬಿರುವ ಟಬ್ ಒಂದರಲ್ಲಿ ಕುಳಿತು, ವೈದ್ಯರು ಹೇಳುವ ಸೂಚನೆಗಳನ್ನು ಪಾಲಿಸುತ್ತಿರುವ ದೃಶ್ಯವನ್ನು ಹಾಗೂ 70 ಕೆಜಿ ಐಸ್ನಲ್ಲಿ 12 ನಿಮಿಷ ಕುಳಿತಿದ್ದೇನೆ ಎಂದು ಬರೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕ್ಯಾಪ್ಶನ್ನಲ್ಲಿ ‘ಐಸ್ ಥೆರಪಿ ಎಂದರೆ ಸ್ವರ್ಗ. ಇದನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಿ. ವೃತ್ತಿಪರರ ಮಾರ್ಗದರ್ಶನವಿಲ್ಲದೆ ಇದನ್ನು ಪ್ರಯತ್ನಿಸಬೇಡಿ. ನಿರಾಳವಾಗಿ ಮತ್ತು ನಿಧಾನವಾಗಿ ಅನುಭವಿಸಿ. ದೇಹದ ಮಾತು ಕೇಳಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ. View this post on Instagram A post shared by (@realhinakhan) ಕ್ಯಾನ್ಸರ್ ವಿರುದ್ಧ ಹೋರಾಡಿದ ಹೀನಾ2025ರ ಡಿಸೆಂಬರ್ನಲ್ಲಿ, ಸೋಹಾ ಅಲಿ ಖಾನ್ ಅವರ ‘ಆಲ್ ಅಬೌಟ್ ಹರ್’ (All About Her) ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಹೀನಾ ಖಾನ್, ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟ, ಕೀಮೋಥೆರಪಿ ಮತ್ತು ವೈಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದರು. ಕ್ಯಾನ್ಸರ್ ರೋಗನಿರ್ಣಯ ಮತ್ತು ಆ ಕಾಯಿಲೆಯಿಂದ ಉಂಟಾದ ಭಾವನಾತ್ಮಕ ಸಂಕಷ್ಟದ ಕುರಿತು ವಿವರಿಸುತ್ತಾ, ‘ಅದು ತುಂಬಾ ಕಷ್ಟಕರವಾಗಿತ್ತು’ ಎಂದಿದ್ದರು. ‘ನನ್ನ ದೇಹದ ತೂಕ ಬಹಳಷ್ಟು ಹೆಚ್ಚಾಗಿತ್ತು. ನನ್ನ ದೇಹದಲ್ಲಿ ಬದಲಾವಣೆಗಳಾದವು. ನನ್ನ ಕೂದಲು ಉದುರಿಹೋಯಿತು. ಅದು ನನಗೆ ಎದುರಾದ ಅತ್ಯಂತ ಕಠಿಣವಾದ ಆಘಾತಗಳಲ್ಲಿ ಒಂದಾಗಿತ್ತು’ ಎಂದು ಹಂಚಿಕೊಂಡಿದ್ದರು. 3ನೇ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾಗಿರುವುದಾಗಿ 2024ರಲ್ಲಿ ಹೀನಾ ಖಾನ್ ಹೇಳಿಕೊಂಡಿದ್ದರು.