ಬ್ರಿಕ್ಸ್ ಶೃಂಗ– ಭಾರತಕ್ಕೆ ಬೆಂಬಲ: ಚೀನಾ
ಬೀಜಿಂಗ್: ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯು ಸಂಪೂರ್ಣ ಯಶಸ್ವಿಯಾಗಲು ಬೆಂಬಲ ನೀಡುವುದಾಗಿ ಚೀನಾ ಗುರುವಾರ ಹೇಳಿದೆ. ಆದರೆ, ಶೃಂಗದಲ್ಲಿ ಚೀನಾ ಅಧ್ಯಕ್ಷ ಷಿ–ಜಿನ್ಪಿಂಗ್ ಪಾಲ್ಗೊಳ್ಳುವರೇ, ಇಲ್ಲವೇ ಎಂಬುದರ ಬಗ್ಗೆ ಗೌಪ್ಯತೆ ಮುಂದುವರಿಸಿದೆ.ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ

ಬೀಜಿಂಗ್: ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯು ಸಂಪೂರ್ಣ ಯಶಸ್ವಿಯಾಗಲು ಬೆಂಬಲ ನೀಡುವುದಾಗಿ ಚೀನಾ ಗುರುವಾರ ಹೇಳಿದೆ. ಆದರೆ, ಶೃಂಗದಲ್ಲಿ ಚೀನಾ ಅಧ್ಯಕ್ಷ ಷಿ–ಜಿನ್ಪಿಂಗ್ ಪಾಲ್ಗೊಳ್ಳುವರೇ, ಇಲ್ಲವೇ ಎಂಬುದರ ಬಗ್ಗೆ ಗೌಪ್ಯತೆ ಮುಂದುವರಿಸಿದೆ.ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ‘ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಸಹಕಾರ ಹೆಚ್ಚಳಕ್ಕೆ ಬ್ರಿಕ್ಸ್ ಶೃಂಗವು ಪ್ರಮುಖ ವೇದಿಕೆಯಾಗಿದೆ’ ಎಂದಿದ್ದಾರೆ. ಜತೆಗೆ ‘ಚೀನಾ ಬ್ರಿಕ್ಸ್ ಶೃಂಗಕ್ಕೆ ಅತಿಹೆಚ್ಚು ಮಹತ್ವ ನೀಡಿದ್ದು, ಸಕ್ರಿಯವಾಗಿ ಪಾಲ್ಗೊಂಡಿದೆ. ಈ ವರ್ಷ ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಶೃಂಗಕ್ಕೂ ನಾವು ಬೆಂಬಲ ನೀಡಲಿದ್ದೇವೆ’ ಎಂದಿದ್ದಾರೆ.ಇದೇ ವೇಳೆ, ಅಧ್ಯಕ್ಷ ಷಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನಿಸಿದ್ದು, ‘ನೀವು ಕೇಳಿದ ಪ್ರಶ್ನೆಗೆ ಉತ್ತರಿಸಲು ಸದ್ಯಕ್ಕೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದು ಮಾವೊ ಉತ್ತರಿಸಿದ್ದಾರೆ.ಸೆಪ್ಟೆಂಬರ್ 12–13ರಂದು ಬ್ರಿಕ್ಸ್ ಶೃಂಗಸಭೆ ಭಾರತದಲ್ಲಿ ನಡೆಯಲಿದೆ.