ಶೃಂಗೇರಿ ಶಾಸಕರಾಗಿ ರಾಜೇಗೌಡ: ಮಧ್ಯಂತರ ಆದೇಶ ಮತ್ತೆ ಮುಂದುವರಿಕೆ
ನವದೆಹಲಿ: ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿದೆ. ರಾಜೇಗೌಡ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ್ ಅವರ ಪೀಠವು, ಪ್ರಕರಣದ ವಿ

ನವದೆಹಲಿ: ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿದೆ. ರಾಜೇಗೌಡ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ್ ಅವರ ಪೀಠವು, ಪ್ರಕರಣದ ವಿಚಾರಣೆಯನ್ನು ಮುಂದೂಡಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು 201 ಮತಗಳಿಂದ ಸೋಲಿಸಿದ್ದರು. 1,811 ಅಂಚೆ ಮತಗಳು ಚಲಾವಣೆಯಾಗಿದ್ದವು.ಜೀವರಾಜ್ ಅವರು ಹೈಕೋರ್ಟ್ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ, ‘1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತ ಚುನಾವಣಾ ಆಯೋಗ ಹೊರಡಿಸಿದ ಚುನಾವಣಾ ಅಧಿಕಾರಿಯ ಕೈಪಿಡಿಯ ನಿಬಂಧನೆಗಳ ಪ್ರಕಾರ, ಪ್ರತಿವಾದಿ ವಿಜೇತ ಅಭ್ಯರ್ಥಿಯು ಚುನಾವಣೆಯಲ್ಲಿ ಎಸಗಿರುವ ದುಷ್ಕೃತ್ಯಗಳು, ಅಪರಾಧಗಳು, ಅನೈತಿಕ ಕೃತ್ಯಗಳು ಮತ್ತು ಲೋಪಗಳ ಆರೋಪಗಳನ್ನು ಪರಿಗಣಿಸಬೇಕು. ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ಕಾನೂನಿನ ಪ್ರಕಾರ ಮರು ಎಣಿಕೆ ಮಾಡಲು ಆದೇಶಿಸಿ ಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಆದೇಶಿಸಬೇಕು’ ಎಂದು ಕೋರಿದ್ದರು. ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು.ಇತ್ತೀಚೆಗೆ ಅಂಚೆ ಮತಗಳ ಮರು ಮತ ಎಣಿಕೆ ನಡೆಸಲಾಗಿತ್ತು. 2023ರಲ್ಲಿ ಸಿಂಧುವಾಗಿದ್ದ 1,540 ಮತಗಳಲ್ಲಿ 255 ಮತಗಳು ಮರು ಎಣಿಕೆ ವೇಳೆ ಅಸಿಂಧುವಾಗಿದ್ದರಿಂದ ರಾಜೇಗೌಡ ಅವರ ಶಾಸಕ ಸ್ಥಾನಕ್ಕೆ ಕುತ್ತು ಉಂಟಾಗಿತ್ತು. 52 ಮತಗಳ ಮುನ್ನಡೆ ಸಾಧಿಸಿದ್ದ ಜೀವರಾಜ್ ಅವರನ್ನು ಚುನಾಯಿತ ಎಂದು ಘೋಷಿಸಲಾಗಿತ್ತು.